ಹಾಲು ಒಡೆಯದೇ ಬೆಲ್ಲದ ಟೀ ಮಾಡುವ ವಿಧಾನ ಹೇಳಿಕೊಟ್ಟ ನಟಿ ಅದಿತಿ ಪ್ರಭುದೇವ

By Suvarna News  |  First Published Sep 19, 2023, 6:13 PM IST

ಹಾಲು ಒಡೆಯದೇ ಬೆಲ್ಲದ ಟೀ ಮಾಡುವುದು ಹೇಗೆ ಎಂಬ ಪಾಕವಿಧಾನವನ್ನು ಹೇಳಿಕೊಟ್ಟಿದ್ದಾರೆ  ನಟಿ ಅದಿತಿ ಪ್ರಭುದೇವ. ಅವರು ಹೇಳಿದ್ದೇನು?
 


ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.  

ಇದೀಗ ನಟಿ ಬೆಲ್ಲವನ್ನು ಹಾಕಿ ಟೀ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ. ಸಾಮಾನ್ಯವಾಗಿ ಬೆಲ್ಲ ಹಾಕಿದರೆ ಹಾಲು ಒಡೆದು ಹೋಗುತ್ತದೆ. ಆದ್ದರಿಂದ ಹಾಲು ಒಡೆಯದೇ ಟೀ ಮಾಡುವುದು ಹೇಗೆ ಎಂದು ನಟಿ ಹೇಳಿಕೊಟ್ಟಿದ್ದಾರೆ. ಅವರು ಹೇಳಿರುವ ಪ್ರಕಾರ, ಮೊದಲು ಸ್ಟವ್​ ಆನ್​ ಮಾಡಿ ನೀರು ಹಾಕಿಕೊಳ್ಳಬೇಕು. ನೀರು ಚೆನ್ನಾಗಿ ಕುದಿಯಲು ಬಿಡಬೇಕು. ಜಜ್ಜಿರುವ ಶುಂಠಿ ಸ್ವಲ್ಪ ಜಾಸ್ತಿನೇ ಹಾಕಬೇಕು. ನಂತರ ಹಾಲನ್ನು ಹಾಕಿಕೊಳ್ಳಬೇಕು. ಅದಕ್ಕೆ ಎಷ್ಟು ಬೇಕು ಅಷ್ಟು ಬೆಲ್ಲ ಹಾಕಬೇಕು. ಹಾಲಿಗೆ ಬೆಲ್ಲ ಹಾಕಿದ ಬಳಿಕ ಒಡೆಯುವ ಚಾನ್ಸಸ್​ ಇರುತ್ತೆ. ಇದೇ  ಕಾರಣಕ್ಕೆ ಕಲಕುತ್ತಲೇ ಇರಬೇಕು. ಚೆನ್ನಾಗಿ ಕಲುಕಿದ ಮೇಲೆ  ಟೀ ಪೌಡರ್​ ಹಾಕಬೇಕು. ನಂತರ ಸೋಸಿದರೆ ಮುಗಿಯಿತು. ಇದಕ್ಕೆ ಬ್ರೆಡ್​ ಸಕತ್​ ಕಾಂಬೀನೇಷನ್​ ಎಂದು ನಟಿ ಹೇಳಿದ್ದಾರೆ.

Latest Videos

undefined

ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ​ಔಟ್​: ನಟಿ ಅದಿತಿ ಅಮ್ಮನ ಟಿಪ್ಸ್​

ಇವರ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದಾರೆ. ಕೆಲವರು ತಾವು ಬೆಲ್ಲ ಹಾಕಿ ಟೀ ಮಾಡುವುದು ಹೇಗೆ ಎಂದೂ ಬರೆದಿದ್ದಾರೆ.  ಶ್ರೀಗಂಧ ಎನ್ನುವ ಫೇಸ್​ಬುಕ್​ ಖಾತೆಯಿಂದ ಹಾಲು ಒಡೆಯದೇ ಬೆಲ್ಲದ ಟೀ ಮಾಡುವ ಬಗೆಯನ್ನು ಹೇಳಲಾಗಿದೆ. ಅವರ ಪ್ರಕಾರ, ಏಲಕ್ಕಿ, ಶುಂಠಿ, ಟೀಪುಡಿ,  ನೀರು ಹಾಕಬೇಕು. ಚೆನ್ನಾಗಿ ಕುದ್ದ ಬಳಿಕ ಅದಕ್ಕೆ ಒಂದು ಲೋಟ ಹಾಲು ಹಾಕಿ ಮತ್ತೆ ಕುದಿಸಬೇಕು. ಇಳಿಸುವ ಮುನ್ನ ಬೆಲ್ಲ ಹಾಕಿ ಸೋಸಿದರೆ  ಟೀ ಒಡೆಯದು ಎಂದಿದ್ದಾರೆ. ಬೆಲ್ಲದ ಪಾಕ ಮಾಡಿ ಕೊಂಡು ಬಾಟಲಿಗೆ ಹಾಕಿ ಇಟ್ಟುಕೊಳ್ಳಬೇಕು. ಎಷ್ಟು ಬೇಕೋ ಸಿಹಿ ನೋಡೀ ಕೊಂಡು ಸೇರಿಸಿದರೆ ಯಾವುದೇ ಕಾರಣಕ್ಕೂ ಚಹ ಒಡೆಯುವುದಿಲ್ಲ ಎಂದೂ ಟಿಪ್ಸ್​ ಕೊಟ್ಟಿದ್ದಾರೆ.
 
ಹಲವರು ತಾವು ನಟಿ ಹೇಳಿದ ರೀತಿಯಲ್ಲಿ ಬೆಲ್ಲದ ಟೀ ಟ್ರೈ ಮಾಡುತ್ತೇವೆ ಎಂದಿದ್ದರೆ, ಕೆಲವರು ಬೆಲ್ಲದ ಟೀ ಆ್ಯಸಿಡಿಟಿ, ಅದಕ್ಕೆ ತುಂಬಾ ಕುಡಿಯುವುದು ಒಳ್ಳೆಯದಲ್ಲ ಎಂದಿದ್ದಾರೆ. ಅದಿತಿಯವರ ಇನ್ನೋರ್ವ ಫ್ಯಾನ್​, ಬೆಂಗಳೂರಲ್ಲಿ ನಿಮ್ಮನ್ನ ನೋಡ್ತಿದ್ರೆ ನಮ್ ದಾವಣಗೆರೆ ಬೆಣ್ಣೆದೋಸೆ ತಿಂದಷ್ಟೇ ಖುಷಿ ಆಗ್ತಿದೆ ಮೇಡಂ ಎಂದಿದ್ದಾರೆ.  ಕೆಲ ದಿನಗಳ ಹಿಂದೆ ಅದಿತಿ, ಬೆಳಗಿನ ಜಾವ ಸವಿಯಬಹುದಾದ ಹೆಲ್ದಿ ಪಾನೀಯದ ಬಗ್ಗೆ ಹೇಳಿದ್ದರು.  ಈ ಪಾನೀಯವನ್ನು ಸಕ್ಕರೆ, ಬೆಲ್ಲ ಬಳಸದೇ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದರು. ಕುದಿಯುವ ನೀರಿಗೆ ಸ್ವಲ್ಪ ಚಹದ ಪುಡಿ ಹಾಕಿ. ಸಕ್ಕರೆ ಬದಲು ಸ್ಟಿವಿಯಾ ಲೀವ್ಸ್​ (stevia leaves) ಹಾಕಿದ್ದಾರೆ. ಇದು ಎಲ್ಲಾ ಅಂಗಡಿಗಳಲ್ಲಿಯೂ ಲಭ್ಯ ಎಂದಿದ್ದಾರೆ ನಟಿ. ಸ್ಟಿವಿಯಾ ಎಲೆಗಳು ಸಕ್ಕರೆಗಿಂತಲೂ ರುಚಿ ಇರುತ್ತದೆ ಎಂದಿದ್ದಾರೆ.  ಈ ಪಾನೀಯಕ್ಕೆ ಸ್ವಲ್ಪ  ಪುದಿನಾ ಎಲೆ ಹಾಕಿದರೆ ಇನ್ನೂ ಟೇಸ್ಟ್​ ಬರುತ್ತದೆ ಎಂದಿದ್ದಾರೆ. ಇದಾದ ಬಳಿಕ ಎಲ್ಲವನ್ನೂ ಒಮ್ಮೆ ಚೆನ್ನಾಗಿ ಕುದಿಸಿ ಸೋಸಿದರೆ ಮಾರ್ನಿಂಗ್​ ಡ್ರಿಂಕ್ಸ್​ ರೆಡಿ ಎಂದಿದ್ದಾರೆ.  

ಮಿಕ್ಕಿರೋ ಇಡ್ಲಿಯಿಂದ ನಟಿ ಅದಿತಿ ಮಾಡಿದ್ರು ಯಮ್ಮಿ ಬ್ರೇಕ್​ಫಾಸ್ಟ್​, ಸುಲಭದ ಟೊಮ್ಯಾಟೊ ಚಟ್ನಿ!

 

click me!