
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅವರು ಈಗ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಕಳೆದ ಏಪ್ರಿಲ್ 4ರಂದು ಹೆಣ್ಣುಮಗುವಿನ ತಾಯಿಯಾಗಿರುವ ನಟಿ, ಮಗುವಾಗಿ ಎರಡೇ ತಿಂಗಳಿಗೆ ಮತ್ತೆ ಆ್ಯಕ್ಟೀವ್ ಆಗಿದ್ದಾರೆ, ಮೊದಲಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಆ್ಯಕ್ಟೀವ್ ಆಗಿರುವ ನಟಿ ವಿಭಿನ್ನ ರೀತಿಯ ಟಿಪ್ಸ್, ಅಡುಗೆ ಕುರಿತು ವಿಡಿಯೋ ಶೇರ್ ಮಾಡುತ್ತಿದ್ದರು. ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿಯೇ ಇದ್ದರು. ಗರ್ಭಿಣಿಯರಿಗೆ ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು. ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು. ಅದಾದ ಬಳಿಕ ಮಗುವಿಗೆ ಜನ್ಮ ನೀಡಿದ ಎರಡು ತಿಂಗಳಲ್ಲೇ ಮತ್ತೆ ಕೆಲಸ ಶುರು ಮಾಡಿಕೊಂಡಿದ್ದಾರೆ. ಇದೀಗ ಮಗುವಿನ ಆರೈಕೆ ಜೊತೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ ನಟಿ. ಅಷ್ಟೇ ಅಲ್ಲದೇ ರಿಯಾಲಿಟಿ ಷೋನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಮಗುವಾದ ಮೇಲೆ ದುಡಿಯುವ ಮಹಿಳೆಯರ ಕಷ್ಟಗಳು ಹಲವಾರು. ಅದರಲ್ಲಿಯೂ ಎದೆಹಾಲು ಉಣಿಸುವ ತಾಯಂದಿರ ಕಷ್ಟ ಅವರಿಗೇ ಗೊತ್ತು. ಅಮ್ಮನ ಎದೆಯಲ್ಲಿ ಹಾಲು ಹೆಚ್ಚಿದ್ದರೂ, ಅತ್ತ ಮಗುವಿಗೆ ಹಸಿವಾಗಿದ್ದರೂ ಕಚೇರಿಯಲ್ಲಿ ಇರುವ ಕಾರಣ, ಹಾಲುಣಿಸುವುದು ಕಷ್ಟ. ಅಂಥವರಿಗೆ ಹಾಲಿನ ಶೇಖರಣೆ ಮಷಿನ್ ಬಗ್ಗೆ ನಟಿ ಹೇಳಿದ್ದಾರೆ. ಹಾಲವನ್ನು ಶೇಖರಿಸಿಟ್ಟುಕೊಂಡು ಹೋಗುವಂತೆ ಟಿಪ್ಸ್ ಕೊಟ್ಟಿದ್ದಾರೆ. ಎದೆಹಾಲು ಹೆಚ್ಚಾದಾಗ ಅದು ಸೋರದಂತೆ ಬ್ರೆಸ್ಟ್ಪ್ಯಾಡ್ ಬಗ್ಗೆ, ಹೊರಗಡೆ ಮಗುವಿಗೆ ಹಾಲುಣಿಸುವಾಗ ಮುಜುಗರ ಆಗದಂತೆ ಸಿಗುವ ಬಟ್ಟೆ ಇತ್ಯಾದಿಗಳ ಕುರಿತು ನಟಿ ಹೇಳಿದ್ದಾರೆ.
ದಿನಪೂರ್ತಿ ಚುರುಕಾಗಿರಬೇಕಾ? ಬೇವು, ನಿಂಬೆ, ಜೇನುತುಪ್ಪದ ಗುಟ್ಟು ತಿಳಿಸಿಕೊಟ್ಟ ನಟಿ ಅದಿತಿ ಪ್ರಭುದೇವ
ಇದೇ ವೇಳೆ, ನಟಿ ಅದಿತಿ ಪ್ರಭುದೇವ ಅವರು ದೊಡ್ಡಪತ್ರೆಯ ಮಹತ್ವ ತಿಳಿಸಿಕೊಟ್ಟಿದ್ದಾರೆ. ದೊಡ್ಡ ಪತ್ರೆ, ಸಾಂಬರ್ ಸೊಪ್ಪು, ಸಾಸಂಬರ್ ಸೊಪ್ಪು, ಸಾವಿರ ಸೊಪ್ಪು ಎಂದೆಲ್ಲಾ ಕರೆಸಿಕೊಳ್ಳುವ ಈ ಪುಟ್ಟ ಎಲೆಯಿಂದ ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ಇದನ್ನು ಇಂಗ್ಲಿಷ್ನಲ್ಲಿ Coleus aromaticus ಎನ್ನುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅದ್ಭುತ ಔಷಧಿಯ ಸಸ್ಯಗಳನ್ನು ಬೆಳೆಯುವುದು ಮಾಮೂಲು. ದೊಡ್ಡ ಪತ್ರೆಯ ಚಟ್ನಿ, ತಂಬುಳಿ, ಸಾಸಿವೆ... ಹೀಗೆ ಹಲವಾರು ಅಡುಗೆಗಳನ್ನು ಮಾಡಿ ಆಗಾಗ್ಗೆ ಇದನ್ನು ಅನ್ನದ ಜೊತೆ ಬಳಸುತ್ತಾರೆ. ಆದರೆ ಬೆಂಗಳೂರಿನಂಥ (Bangalore) ಪ್ರದೇಶಗಳಲ್ಲಿ ಹಲವರ ಮನೆಯ ಕುಂಡಗಳಲ್ಲಿ ಇದು ಅಲಂಕರಿಸುತ್ತದೆ. ಆದರೆ ಇದರ ಪ್ರಯೋಜನ ಮಾತ್ರ ತಿಳಿದಿರುವುದು ಕೆಲವೇ ಜನರಿಗೆ. ಚಿಕ್ಕದೊಂದು ಟೊಂಗೆ ನೆಟ್ಟರೂ ಕೆಲವೇ ದಿನಗಳಲ್ಲಿ ವಿಸ್ತರಿಸಿ ನೋಡಲು ಚೆಂದ ಕಾಣುವ ಕಾರಣದಿಂದ ಹಲವರು ಇದನ್ನು ಕುಂಡದಲ್ಲಿ ಬೆಳೆಯುವುದುಂಟು. ಆದರೆ ಇದರ ಆರೋಗ್ಯ ಪ್ರಯೋಜನಗಳು ಗೊತ್ತಿರುವುದಿಲ್ಲ.
ಇದರ ಆರೋಗ್ಯ ಪ್ರಯೋಜನವನ್ನು ನಟಿ ಅದಿತಿ ಪ್ರಭುದೇವ ತಿಳಿಸಿಕೊಟ್ಟಿದ್ದಾರೆ. ತಮ್ಮ ಅಮ್ಮನಿಗೆ ಆಗಿರುವ ಹಲವು ಅನುಭವಗಳ ಕುರಿತು ನಟಿ ಹೇಳಿದ್ದಾರೆ. 'ನನ್ನ ಅಮ್ಮನಿಗೆ ಸಿಕ್ಕಾಪಟ್ಟೆ ಸೀನು ಬರುತ್ತಿತ್ತು. ಅನೇಕ ಮಂದಿ ಹಲವಾರು ರೀತಿಯ ಮಾತ್ರೆಗಳನ್ನು ಹೇಳಿದರು. ಆದರೆ ನೋಡಿಯೇ ಬಿಡೋಣ ಎಂದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ದೊಡ್ಡಪತ್ರೆ ಎಲೆಯನ್ನು ತಿಂದು ನಸುಬೆಚ್ಚಗಿನ ನೀರನ್ನು ಕುಡಿಯುತ್ತಾ ಬಂದರು. ಒಂದೇ ತಿಂಗಳಿನಲ್ಲಿ ಸೀನು ಸಂಪೂರ್ಣ ನಿಂತೇ ಹೋಯಿತು ಎಂದಿದ್ದಾರೆ. ದೊಡ್ಡಪತ್ರೆಯನ್ನು ಹಿಂಡಿದಾಗ ರಸ ಬರುತ್ತದೆ. ಇಲ್ಲದೇ ಹೋದರೆ ಗ್ಯಾಸ್ ಮೇಲೆ ಎಲೆಯನ್ನು ತುಸು ಬೆಚ್ಚಗೆ ಮಾಡಿ ಹಿಂಡಿದರೂ ರಸ ಬರುತ್ತದೆ. ಆ ರಸವನ್ನು ಕುಡಿಯುತ್ತಾ ಬಂದರೆ, ಕೆಮ್ಮು, ಶೀತ , ಸ್ಕಿನ್ ಅಲರ್ಜಿ, ಕ್ರಿಮಿ ಕಡಿದಿದ್ದರೆ ಎಲ್ಲವೂ ಮಾಯವಾಗುತ್ತದೆ. ಬಾಣಲೆಯಲ್ಲಿ ಎಲೆಯನ್ನು ಬಿಸಿ ಮಾಡಿ ನೆತ್ತಿಗೆ ಹೆಚ್ಚುವುದರಿಂದಲೂ ನೆಗಡಿ, ಕೆಮ್ಮು ಕಡಿಮೆ ಆಗುತ್ತದೆ ಎಂದಿದ್ದಾರೆ. ಒಂದು ಟೊಂಗೆ ಗಿಡವನ್ನು ಮನೆಯಲ್ಲಿ ನೆಟ್ಟರೆ 10 ಟೈಪ್ ಮಾತ್ರೆಯನ್ನು (Medicines) ಹೊರಕ್ಕೆ ಹಾಕಬಹುದು ಎಂದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.