Child Care : ಮಕ್ಕಳ ಪಾದ ನೋವಿಗೆ ಇಲ್ಲಿದೆ ಮದ್ದು

By Roopa HegdeFirst Published Aug 22, 2022, 5:12 PM IST
Highlights

ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಜ್ವರ, ನೆಗಡಿಯಂತ ರೋಗ ಬೇಗ ಕಾಡುತ್ತದೆ. ಇದ್ರ ಜೊತೆ ಅನೇಕ ಮಕ್ಕಳು ರಾತ್ರಿಯಾಗ್ತಿದ್ದಂತೆ ಪಾದದ ನೋವು ಅಂತಾ ಅಳ್ತಾರೆ. ಇದಕ್ಕೆ ಕಾರಣ ಹಾಗೂ ಪರಿಹಾರವೇನು ಎಂಬುದು ಇಲ್ಲಿದೆ.
 

ಚಿಕ್ಕ ಮಕ್ಕಳ ಆಲೋಚನೆ ಸದಾ ಆಟದ ಮೇಲಿರುತ್ತದೆ. ಆಟ, ಪಾಠದಲ್ಲಿ ಬ್ಯುಸಿಯಾಗಿರುವ ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಈ ಕಾರಣದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಅವರ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅನೇಕ ಬಾರಿ ಈ ಕಾಲು ನೋವಿಗೆ ಮಗುವಿನ ತಪ್ಪು ಆಹಾರ ಪದ್ಧತಿ ಮತ್ತು ಕಡಿಮೆ ದೈಹಿಕ ಚಟುವಟಿಕೆ ಕೂಡ ಕಾರಣವಾಗುತ್ತದೆ. ಮಕ್ಕಳು ಸರಿಯಾಗಿ ಆಹಾರ ಸೇವನೆ ಮಾಡುವುದಿಲ್ಲ. ಪೌಷ್ಠಿಕಾಂಶವಿರುವ ಆಹಾರವನ್ನು ಮಕ್ಕಳಿಗೆ ನೀಡುವುದು ದೊಡ್ಡ ಸಮಸ್ಯೆ. ಇದ್ರಿಂದ ಮಕ್ಕಳಲ್ಲಿ ಶಕ್ತಿ ಕುಂದುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಅಧ್ಯಯನದ ಒತ್ತಡ ಹೆಚ್ಚುತ್ತಿದೆ. ಇದರಿಂದ ಅವರು ತಮ್ಮ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಅವರಿಗೆ ದೈಹಿಕ ತೊಂದರೆ ಉಂಟಾಗುತ್ತವೆ. ಮಕ್ಕಳ ಪಾದದ ನೋವಿಗೆ ಆರಂಭದಲ್ಲಿಯೇ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಪಾಲಕರು ಮಕ್ಕಳಿಗೆ ಉತ್ತಮ ಆಹಾರವನ್ನು ನೀಡಬೇಕು. ಇದ್ರ ಜೊತೆಗೆ ದೈಹಿಕ ಚಟುವಟಿಕೆಗೆ ಆದ್ಯತೆ ನೀಡ್ಬೇಕು. ಇದ್ರಿಂದ ಅವರ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ. 

ಮಕ್ಕಳ (Children) ಪಾದ (Foot) ದ ನೋವಿ (Pain) ಗೆ ನೀಡಿ ಮುಕ್ತಿ : 

ಓಟ (Run) : ಮಕ್ಕಳಿಗೆ ಪ್ರತಿ ದಿನ ದೈಹಿಕ ಚಟುವಟಿಕೆ ಅಗತ್ಯ. ಪ್ರತಿ  ದಿನ ಮಕ್ಕಳನ್ನು ಓಡಿಸಬಹುದು. ಇದು ತುಂಬಾ ಸುಲಭವಾದ ವ್ಯಾಯಾಮ. ಮಕ್ಕಳು ಸಹ ಅದನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಬಾಲ್ಯದಿಂದಲೇ ಮಕ್ಕಳಲ್ಲಿ ಓಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಅವರ ದೇಹವೂ ಚೆನ್ನಾಗಿ ಬೆಳವಣಿಗೆಯಾಗುತ್ತದೆ. ಇದು ಅವರಿಗೆ ಕಾಲು ನೋವು ಮತ್ತು ಸ್ನಾಯು ನೋವಿನಿಂದ ಪರಿಹಾರವನ್ನು ನೀಡುತ್ತದೆ.

ಸೈಕ್ಲಿಂಗ್ (Cycling) : ನೀವು ನಿಮ್ಮ ಮಕ್ಕಳಿಗೆ ಸೈಕ್ಲಿಂಗ್ ಮಾಡಿಸಬಹುದು. ಇದು ಅವರ ಕಾಲುಗಳ ಸ್ನಾಯುಗಳನ್ನು ಬಲಪಡಿಸುತ್ತದೆ. ಇದರಿಂದ ಅವರ ಒಟ್ಟಾರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಬೆಳಿಗ್ಗೆ ಅಥವಾ ಸಂಜೆ ಯಾವುದೇ ಸಮಯದಲ್ಲಿ ನೀವು ಮಕ್ಕಳಿಗೆ ಸೈಕ್ಲಿಂಗ್ ಮಾಡಿಸಬಹುದು.  ಸೈಕಲ್ ತುಳಿಯುವುದರಿಂದ ಮಕ್ಕಳ ಹೃದಯವೂ ಆರೋಗ್ಯವಾಗಿರುತ್ತದೆ.  

ಈಜು (Swimming) :  ಮಕ್ಕಳ ದೈಹಿಕ ಆರೋಗ್ಯ ಚೆನ್ನಾಗಿರಬೇಕೆಂದ್ರೆ ಈಜು ಒಳ್ಳೆಯದು. ಮಕ್ಕಳಿಗೆ ಸ್ವಿಮ್ಮಿಂಗ್ ಅಭ್ಯಾಸ ಮಾಡಿಸಬೇಕು. ಈಜು ಮಕ್ಕಳಲ್ಲಿ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಇದಲ್ಲದೆ, ಈಜು ಅವರ ಇಡೀ ದೇಹಕ್ಕೆ ವ್ಯಾಯಾಮ ನೀಡುತ್ತದೆ.  ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮವಾಗಿರುತ್ತದೆ. ಮಕ್ಕಳಿಗೂ ಕಾಲು ನೋವಿನಿಂದ ಪರಿಹಾರ ಸಿಗುತ್ತದೆ ಮತ್ತು ಉಸಿರಾಟದ ತೊಂದರೆಯೂ ಗುಣವಾಗುತ್ತದೆ. ಈಜು ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದೆಂದು ಪರಿಗಣಿಸಲಾಗಿದೆ.  

ಇದನ್ನೂ ಓದಿ: ದೇಶಾದ್ಯಂತ ಟೊಮೆಟೋ ಫ್ಲೂ ಭೀತಿ: ಕೇರಳ, ಒಡಿಶಾದಲ್ಲಿ ಕಟ್ಟೆಚ್ಚರ

ಬೇರ್ ಕ್ರಾಲ್ (Bear Crawl) : ನೀವು ಮಕ್ಕಳಿಗೆ ಬೇರ್ ಕ್ರಾಲ್ ವ್ಯಾಯಾಮವನ್ನು ಮಾಡಿಸಬಹುದು.  ಇದನ್ನು ದೇಹದ ಎಲ್ಲ ಭಾಗಕ್ಕೆ ಸಂಪೂರ್ಣ ವ್ಯಾಯಾಮ (Exercise) ವನ್ನು ನೀಡುತ್ತದೆ ಎಂದು ಪರಿಗಣಿಸಲಾಗುತ್ತದೆ. ಕೈಕಾಲುಗಳನ್ನು ಕೆಳಗೆ ಇಟ್ಟು ಪ್ರಾಣಿಗಳಂತೆ ನಡೆಯುವುದನ್ನು ಬೇರ್ ಕ್ರಾಲ್ ಎಕ್ಸರ್ಸೈಸ್ ಎನ್ನುತ್ತಾರೆ. ಕೈ ಮತ್ತು ಪಾದಗಳನ್ನು ಬಲಪಡಿಸಲು, ದೇಹವನ್ನು ಹೊಂದಿಕೊಳ್ಳುವಂತೆ ಮಾಡಲು ಈ ವ್ಯಾಯಾಮ ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಕ್ಯಾನ್ಸರ್ ಅಪಾಯ ಹೆಚ್ಚಿಸುವ ಮೂರು ಕಾರಣಗಳು!

ಪುಲ್ ಅಪ್ಸ್ : ಪುಲ್ ಅಪ್ಸ್ ಮಕ್ಕಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಕಾಲು ನೋವಿನಿಂದ ಬಳಲುವ ಮಕ್ಕಳು ಈ ವ್ಯಾಯಾಮ ಮಾಡಿದ್ರೆ ಅವರಿಗೆ ಸಾಕಷ್ಟು ಪರಿಹಾರ ಸಿಗುತ್ತದೆ. ಕೈಕಾಲುಗಳೂ ಬಲಿಷ್ಠವಾಗುತ್ತವೆ. ಈ ವ್ಯಾಯಾಮವು ಕಾಲುಗಳ ಸ್ನಾಯುಗಳನ್ನು ಹಿಗ್ಗಿಸಲು ಮತ್ತು ದೇಹವನ್ನು ಬಲಪಡಿಸಲು ಈ ವ್ಯಾಯಾಮ ತುಂಬಾ ಪ್ರಯೋಜನಕಾರಿಯಾಗಿದೆ.

click me!