Health Tips : ಟೂತ್ ಪೇಸ್ಟ್ ತೆಗದೆುಕೊಳ್ಳುವಾಗ ಇದನ್ನು ಗಮನಿಸ್ತೀರಾ?

By Suvarna News  |  First Published May 27, 2022, 4:56 PM IST

ಇತ್ತೀಚಿನ ದಿನಗಳಲ್ಲಿ ಹಲ್ಲಿನ ಸಮಸ್ಯೆ ಹೆಚ್ಚಾಗ್ತಿದೆ. ಅನೇಕರು ಹಲ್ಲು ನೋವು, ಸೆನ್ಸಿಟಿವಿಟಿ (Sensitivity) ಸೇರಿದಂತೆ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ದಿನ ಟೂತ್ಪೇಸ್ಟ್ ನಲ್ಲಿ ಹಲ್ಲುಜ್ಜಿದ್ರೂ ಹಲ್ಲು ನೋವು ಬಂತು ಎನ್ನುತ್ತಾರೆ. ಅಂಥವರು ಯಾವ ಪೇಸ್ಟ್ ಖರೀದಿ ಮಾಡಿದ್ದಾರೆ ಎಂಬುದನ್ನು ನೋಡ್ಬೇಕು. ಎಲ್ಲ ಟೂತ್ಪೇಸ್ಟ್ ನಿಮ್ಮ ಹಲ್ಲಿಗೆ ಒಳ್ಳೆಯದಲ್ಲ.  


ಎಲ್ಲರೂ ಮುತ್ತಿನಂತಹ ಹೊಳೆಯುವ (Shiny) ಹಲ್ಲು (Tooth) ಗಳನ್ನು ಇಷ್ಟಪಡ್ತಾರೆ. ಹೊಳೆಯುವ ಬಿಳಿ (White) ಹಲ್ಲುಗಳು ನಿಮ್ಮ ಸೌಂದರ್ಯ (Beauty) ವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಿಮ್ಮ ವ್ಯಕ್ತಿತ್ವ ತೋರಿಸುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆರೋಗ್ಯಕ್ಕೂ ಒಳ್ಳೆಯದು. ಇದೆಲ್ಲ ಕಾರಣಕ್ಕೆ ನಾವು ಹಲ್ಲನ್ನು ಟೂತ್ಪೇಸ್ಟ್ ಮೂಲಕ ಉಜ್ಜುತ್ತೇವೆ. ಅನೇಕರು ದಿನಕ್ಕೆ ಮೂರ್ನಾಲ್ಕು ಸಲ ಹಲ್ಲುಜ್ಜುತ್ತಾರೆ. ಮಾರುಕಟ್ಟೆಯಲ್ಲಿ ನಾನಾ ರೀತಿಯ ಟೂತ್ಪೇಸ್ಟುಗಳು ಲಭ್ಯವಿದೆ. ಹೊಸ ಹೊಸ ಜಾಹೀರಾತುಗಳ ಮೂಲಕ ಕಂಪನಿಯವರು ನಮ್ಮ ಗಮನ ಸೆಳೆಯುತ್ತಾರೆ. ಹಲ್ಲಿಗೆ ಟೂತ್ಪೇಸ್ಟ್ ಹಾಕ್ತಿದ್ದಂತೆ ಹಲ್ಲು ಹೊಳೆಯಲು ಶುರುವಾಗುತ್ತದೆ. ಅದನ್ನು ನೋಡಿ ನಾವು ಮರುಳಾಗ್ತೇವೆ. ಆದರೆ ನಿಮ್ಮ ಹಲ್ಲುಗಳು ಹೊಳೆಯಲು ಕಾರಣವಾಗುವ ಟೂತ್ಪೇಸ್ಟ್ ಗೆ ಏನೇನು ವಸ್ತು ಹಾಕ್ತಾರೆ ಎಂಬುದು ನಿಮಗೆ ಗೊತ್ತಾ? ಟೂತ್ ಪೇಸ್ಟ್ ನಲ್ಲಿ ಸಕ್ರಿಯ ಹಾಗೂ ನಿಷ್ಕ್ರಿಯ ಪದಾರ್ಥಗಳನ್ನು ಬಳಸಲಾಗುತ್ತದೆ.

ಸಕ್ರಿಯ ಪದಾರ್ಥಗಳು ಬ್ಯಾಕ್ಟೀರಿಯಾ ಮತ್ತು ಪ್ಲೇಕ್ ವಿರುದ್ಧ ಹೋರಾಡುವಾಗ, ನಿಷ್ಕ್ರಿಯ ಪದಾರ್ಥಗಳು ಟೂತ್ಪೇಸ್ಟ್ ನ ಸುವಾಸನೆ ಮತ್ತು ವಿನ್ಯಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  ಮುಂದಿನ ಬಾರಿ ನೀವು ಟೂತ್‌ಪೇಸ್ಟ್ ಖರೀದಿಸಲು ಹೋದಾಗ, ಟೂತ್‌ಪೇಸ್ಟ್ ಬಾಕ್ಸ್ ನ ಹಿಂಭಾಗದಲ್ಲಿರುವ ಪದಾರ್ಥಗಳನ್ನು ಓದಿ, ಖಚಿತಪಡಿಸಿಕೊಳ್ಳಿ. ಇದರಿಂದ ನೀವು ಬಳಸುತ್ತಿರುವ ಟೂತ್‌ಪೇಸ್ಟ್ ನಿಮ್ಮನ್ನು ರಕ್ಷಿಸುತ್ತದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿಯುತ್ತದೆ. 

Tap to resize

Latest Videos

ಟೂತ್ಪೇಸ್ಟ್ ನಲ್ಲಿ ಫ್ಲೋರೈಡ್ : ಹಲ್ಲಿನ ಕುಳಿಗಳ ವಿರುದ್ಧ ಹೋರಾಡುವಲ್ಲಿ ಫ್ಲೋರೈಡ್ ಪ್ರಮುಖ ಪಾತ್ರ ವಹಿಸುತ್ತದೆ. ಫ್ಲೋರೈಡ್ ಒಂದು ಖನಿಜವಾಗಿದ್ದು ಇದನ್ನು ಹೆಚ್ಚಾಗಿ ಟೂತ್ಪೇಸ್ಟ್ ಗೆ  ಸೇರಿಸಲಾಗುತ್ತದೆ. ಇದು ದಂತಕವಚವನ್ನು ಬಲಪಡಿಸುತ್ತದೆ ಮತ್ತು ಪ್ಲೇಕ್ ಮೇಲೆ ಆಮ್ಲವನ್ನು ನಿರ್ಮಿಸುವ ಸಾಮರ್ಥ್ಯವನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ಹಲ್ಲುಗಳಲ್ಲಿ ಕೊಳೆತ ಇರುವುದಿಲ್ಲ. ಆದ್ದರಿಂದ, ನೀವು ಯಾವುದೇ ಟೂತ್ಪೇಸ್ಟ್ ಖರೀದಿಸಿದರೂ, ಅದರಲ್ಲಿ ಫ್ಲೋರೈಡ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು.

ಅಬ್ರಸಿವ್ : ಅಬ್ರಸಿವ್ ಒಂದು ಕಣವಾಗಿದೆ. ಇದು ಹಲ್ಲುಗಳಿಂದ ಕಸ ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಬ್ರಸಿವ್ ಸಾಮಾನ್ಯವಾಗಿ ಕ್ಯಾಲ್ಸಿಯಂ ಕಾರ್ಬೋನೇಟ್, ಹೈಡ್ರೀಕರಿಸಿದ ಅಲ್ಯೂಮಿನಿಯಂ ಆಕ್ಸೈಡ್ ಅನ್ನು ಒಳಗೊಂಡಿರುತ್ತವೆ. ನಿಮ್ಮ ಹಲ್ಲುಗಳಿಗೆ ಹಾನಿಯಾಗದಂತೆ ಹಲ್ಲುಗಳ ಮೇಲ್ಮೈಯನ್ನು ನಿಧಾನವಾಗಿ ಸ್ವಚ್ಛಗೊಳಿಸುವುದು ಅಬ್ರಸಿವ್ ಉದ್ದೇಶವಾಗಿದೆ.

ಹೃದಯಾಘಾತದ ಲಕ್ಷಣ ಮುಖದ ಮೇಲೂ ಕಾಣಿಸಿಕೊಳ್ಳುತ್ತೆ, ಗಮನವಿರಲಿ !

ಟೂತ್ಪೇಸ್ಟ್ ರುಚಿ : ಫ್ಲೋರೈಡ್ ಮತ್ತು ಅಬ್ರಸಿವ್ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ಹಲ್ಲನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಈ ಎರಡು ಪದಾರ್ಥಗಳು ರುಚಿಯನ್ನು ಹೊಂದಿರುವುದಿಲ್ಲ. ಬ್ರಷ್ ಮಾಡುವಾಗ ಸುವಾಸನೆ ಸಹ ಮುಖ್ಯ. ಟೂತ್ಪೇಸ್ಟ್ ರುಚಿ ಹೊಂದಿರುತ್ತದೆ. ಅದಕ್ಕೆ ಸ್ಯಾಕ್ರರಿನ್ ಮತ್ತು ಸೋರ್ಬಿಟೋಲ್‌ ಹಾಕಲಾಗುತ್ತದೆ. ಆದ್ರೆ ಈ ಟೂತ್‌ಪೇಸ್ಟ್ ಗಳು ಸಕ್ಕರೆ ಹೊಂದಿದೆಯೇ ಎಂಬುದನ್ನು ನೋಡಬೇಕು. ಸಕ್ಕರೆಯಿರುವ ಟೂತ್ ಪೇಸ್ಟ್ ಹಲ್ಲುಗಳು ಕೊಳೆಯಲು ಕಾರಣವಾಗುತ್ತವೆ. 

ಭಾರತದಲ್ಲಿ ಇನ್ನೂ ಮುಟ್ಟಿನ ಬಗ್ಗೆ ಮಿಥ್, ತೊಲಗುತ್ತೆ ಯಾವಾಗ?

ಸೆನ್ಸಿಟಿವಿಟಿಯಿಂದ ನೆಮ್ಮದಿ : ಇತ್ತೀಚಿನ ದಿನಗಳಲ್ಲಿ ತಪ್ಪು ಆಹಾರ ಪದ್ಧತಿಯಿಂದಾಗಿ ಹಲ್ಲುಗಳು ತುಂಬಾ ಸೂಕ್ಷ್ಮವಾಗುತ್ತವೆ. ತಣ್ಣೀರನ್ನು ಹಲ್ಲುಗಳಿಗೆ ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ. ತಣ್ಣನೆಯ ಆಹಾರ ಸೇವನೆ ಮಾಡಿದ್ರೆ ಹಲ್ಲು ನೋವಲು ಕಾರಣವಾಗುತ್ತದೆ. ಹಾಗಾಗಿ ಟೂತ್ಪೇಸ್ಟ್ ಖರೀದಿ ಮಾಡುವ ಮೊದಲು ಅದು ಸೆನ್ಸಿಟಿವಿಟಿಗೆ ಪರಿಹಾರ ನೀಡುತ್ತದೆಯೇ ಎಂಬುದನ್ನು ನೋಡಿ. ಅಲ್ಲದೆ ಪೊಟ್ಯಾಸಿಯಮ್ ನೈಟ್ರೇಟ್, ಸ್ಟ್ಯಾನಸ್ ಫ್ಲೋರೈಡ್ ಮತ್ತು ಸ್ಟ್ರಾಂಷಿಯಂ ಕ್ಲೋರೈಡ್ ಅನ್ನು ಇದಕ್ಕೆ ಬಳಸಲಾಗುತ್ತದೆ. ಟೂತ್ಪೇಸ್ಟ್ ನಲ್ಲಿರುವ ಈ ಪದಾರ್ಥಗಳು ನಿಮ್ಮ ಹಲ್ಲುಗಳಲ್ಲಿನ ನರಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಟೂತ್ ಪೇಸ್ಟ್ ಹಲ್ಲುಗಳ ಆರೋಗ್ಯಕ್ಕೆ ಬಹಳ ಮುಖ್ಯ. ಹಾಗಾಗಿ ಟೂತ್ಪೇಸ್ಟ್ ಖರೀದಿಸುವ ಮೊದಲು ಈ ಎಲ್ಲವನ್ನೂ ಗಮನಿಸಿ.

click me!