Men Helath : ಎಚ್ಚರ…! ಈ ಕಾರಣಕ್ಕೆ ಪುರುಷರನ್ನು ಕಾಡುತ್ತೆ ಮುಟ್ಟು

By Roopa HegdeFirst Published Jul 9, 2022, 1:11 PM IST
Highlights

ಪುರುಷರೂ ಮುಟ್ಟಾಗ್ತಾರೆ ಎಂಬ ವಿಷ್ಯ ನಿಮಗೆ ಗೊತ್ತಾಗಿದೆ. ಪುರುಷರ ಮುಟ್ಟಿನ ಲಕ್ಷಣವೇನು ಎಂಬುದನ್ನು ನಾವು ಹೇಳಿದ್ದೇವೆ. ಇಂದು ಪುರುಷರ ಈ ಮುಟ್ಟಿಗೆ ಕಾರಣವೇನು ಎಂಬುದನ್ನು ಹೇಳ್ತೇವೆ. ಕೆಲ ಎಚ್ಚರಿಕೆ ತೆಗೆದುಕೊಂಡ್ರೆ ನೀವು ಈ ಸಮಸ್ಯೆಯಿಂದ ಹೊರಗುಳಿಯಬಹುದು.
 

ಮಹಿಳೆ (Woman) ಯರಂತೆ  ಪುರುಷ (Male)ರ ದೇಹದಲ್ಲೂ ಅನೇಕ ಹಾರ್ಮೋನು (Hormone) ಗಳು ಬದಲಾಗುತ್ತಿರುತ್ತವೆ. ಹಾರ್ಮೋನುಗಳ ಬದಲಾವಣೆ ಪುರುಷರ ದೇಹದಲ್ಲಿ ಮಾತ್ರವಲ್ಲದೆ ಮಾನಸಿಕ ಆರೋಗ್ಯ (health) ದ ಮೇಲೂ ಪರಿಣಾಮ ಬೀರುತ್ತದೆ. ಹಾರ್ಮೋನ್ ಬದಲಾವಣೆ ಕಾರಣದಿಂದಾಗಿ ಮಹಿಳೆಯರಂತೆ ಪುರುಷರೂ ಮುಟ್ಟಿನ ಲಕ್ಷಣಗಳನ್ನು ಎದುರಿಸುತ್ತಾರೆ. ಇದನ್ನು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (Premenstrual syndrome) ಲಕ್ಷಣ ಎನ್ನಲಾಗುತ್ತದೆ. ಈ ಸಮಯದಲ್ಲಿ ಪುರುಷರಿಗೆ ಮಹಿಳೆಯರಂತೆ ರಕ್ತಸ್ರಾವ (Bleeding) ವಾಗುವುದಿಲ್ಲ.  ಆದರೆ ಬ್ಲೀಡಿಂಗ್ ಹೊರತುಪಡಿಸಿ ಉಳಿದೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿಯೇ ಅನೇಕ ಜನರು ಇದನ್ನು ಪುರುಷರ ಮುಟ್ಟು ಎಂದೂ ಕರೆಯುತ್ತಾರೆ. ಪುರುಷರಿಗೂ ಮುಟ್ಟಿನ ಸಮಸ್ಯೆ ಕಾಡುತ್ತೆ ಎಂದು ಅನೇಕ ಸಂಶೋಧನೆಗಳು ಸ್ಪಷ್ಟಪಡಿಸಿವೆ. ಇಂದು ಪುರುಷ ಮುಟ್ಟಿಗೆ ಕಾರಣವೇನು ಎಂಬ ಬಗ್ಗೆ ಮತ್ತೊಂದಿಷ್ಟು ಮಾಹಿತಿಯನ್ನು ಇಂದು ನೀಡ್ತೇವೆ. 

ಪುರುಷರ ಮುಟ್ಟಿನ ಲಕ್ಷಣಗಳು : ಪುರುಷರ ಮುಟ್ಟಿನ ಸಮಯದಲ್ಲಿ ಮೂಡ್ ಸ್ವಿಂಗ್ (Mood Swings) ಆಗುತ್ತದೆ. ಪುರುಷರು ಹತಾಶೆ, ಆತಂಕ ಮತ್ತು ಕೋಪ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. 

ಪುರುಷರ ಮುಟ್ಟಿನ ಸಮಸ್ಯೆಗೆ ಮುಖ್ಯ ಕಾರಣ : ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್‌ನ ಏರಿಳಿತದಿಂದಾಗಿ ಈ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಲಕ್ಷಣ ಕಾಣಿಸಿಕೊಳ್ಳುತ್ತದೆ. ಇದು ಬಹಳ ಕಾಲ ಇರೋದಿಲ್ಲ. ಪುರುಷರಲ್ಲಿ ಈ ರೋಗಲಕ್ಷಣ ಕೇವಲ 24 ಗಂಟೆಗಳವರೆಗೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ಟೆಸ್ಟೋಸ್ಟೆರಾನ್ ಹಾರ್ಮೋನ್ ಪುರುಷರ ಫಲವತ್ತತೆಯನ್ನು ಸುಧಾರಿಸುವಲ್ಲಿ ಮತ್ತು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಮುಖ್ಯವಾಗಿದೆ.

ಈ ತಪ್ಪುಗಳಿಂದ ಪುರುಷರಲ್ಲಿ ಕಾಣಿಸಿಕೊಳ್ಳುತ್ತೆ ಸಮಸ್ಯೆ : 

ಅತಿಯಾದ ಒತ್ತಡ ಅಪಾಯಕಾರಿ :  ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್‌ನಲ್ಲಿನ ಅಡಚಣೆಗಳಿಗೆ ದೊಡ್ಡ ಕಾರಣವೆಂದರೆ ಮಾನಸಿಕ ಒತ್ತಡ. ನೀವು ಅತಿಯಾದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ   ಮಹಿಳೆಯರಂತೆ ಪ್ರತಿ ತಿಂಗಳು ಮೂಡ್ ಸ್ವಿಂಗ್ ಮತ್ತು ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ. ಮುಟ್ಟಿನ ಲಕ್ಷಣ ನಿಮ್ಮಲ್ಲಿ ಕಾಣಿಸಿಕೊಳ್ಳಬಾರದು ಎನ್ನುವವರು ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ. 

ಅನಾರೋಗ್ಯಕರ ಅಭ್ಯಾಸಗಳು ಹಾರ್ಮೋನ್  ಅಸಮತೋಲನಕ್ಕೆ ಕಾರಣ : ಅಸಮತೋಲಿತ ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ದೇಹದಲ್ಲಿ ಅನೇಕ ರೋಗಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಮದ್ಯಪಾನ, ಧೂಮಪಾನ ಸೇರಿದಂತೆ ಅನೇಕ ಕೆಟ್ಟ ಅಭ್ಯಾಸಗಳು ಕೂಡ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತವೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕೂಡ ಇದರ ಪರಿಣಾಮವಾಗಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ರೋಗಿಗಳಲ್ಲಿ ಮುಟ್ಟಿನ ಲಕ್ಷಣ ಹೆಚ್ಚಾಗಿ ಕಾಣಿಸುತ್ತದೆ. ಇದ್ರಿಂದ ಪುರುಷರು ಹೆಚ್ಚು ಕೋಪಗೊಳ್ಳಲು ಶುರು ಮಾಡ್ತಾರೆ.

ಇದನ್ನೂ ಓದಿ: ಕುತ್ತಿಗೆ ಕೊಳೆ ಹೆಚ್ಚಾಗಿ ಕಪ್ಪಾಗಿದ್ಯಾ ? ಮುಲ್ತಾನಿ ಮಿಟ್ಟಿ ಬಳಸಿ ನೋಡಿ

ನಿದ್ರೆಯ ಕೊರತೆಯು ಮುಟ್ಟಿನ ರೋಗ ಲಕ್ಷಣಕ್ಕೆ ಕಾರಣ : ನಿದ್ರೆಯ ಕೊರತೆಯು ಅನೇಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದರೆ ಪುರುಷರು ಸಾಕಷ್ಟು ನಿದ್ದೆ ಮಾಡದಿದ್ದರೆ, ಈ ಕಾರಣವು ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಅಡ್ಡಿಪಡಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅವರು  ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಗೆ ಬಲಿಯಾಗುತ್ತಾರೆ. ದಿನಕ್ಕೆ ಆರರಿಂದ ಏಳು ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯವಾಗುತ್ತದೆ.

ಇದನ್ನೂ ಓದಿ: ಜಿಟಿಜಿಟಿ ಮಳೆ..ಮರೆಯಲಾಗದ ಬೆಚ್ಚನೆಯ ಸವಿ ಸವಿ ನೆನಪು

ತೂಕದೊಂದಿಗೆ ಹಾರ್ಮೋನುಗಳ ಏರುಪೇರು : ತೂಕದ ನಷ್ಟವು ದೇಹದ ಆಕಾರದಲ್ಲಿ ಮಾತ್ರ ಬದಲಾವಣೆಯನ್ನು ಉಂಟುಮಾಡುವುದಿಲ್ಲ. ಆಂತರಿಕವಾಗಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ನೀವು ಆಗಾಗ್ಗೆ ತೂಕ ಇಳಿಕೆ ಅಥವಾ ಏರಿಕೆಗೆ ಒಳಗಾಗ್ತಿದ್ದರೆ ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆ ಅಥವಾ ಹೆಚ್ಚಾಗಲು ಶುರುವಾಗುತ್ತದೆ. ಇದ್ರಿಂದ ಮುಟ್ಟಿನ ಸಮಸ್ಯೆ ಪುರುಷರಲ್ಲಿ ಕಾಡಲು ಶುರುವಾಗುತ್ತದೆ. 

click me!