34 ಅಗತ್ಯ ಔಷಧಗಳ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ

Published : Sep 14, 2022, 10:44 AM ISTUpdated : Sep 14, 2022, 11:08 AM IST
34 ಅಗತ್ಯ ಔಷಧಗಳ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ

ಸಾರಾಂಶ

ಕೇಂದ್ರ ಸರ್ಕಾರವು ದೇಶದ ಜನಸಾಮಾನ್ಯರಿಗೆ ಗುಡ್ ನ್ಯೂಸ್ ನೀಡಿದೆ. 34 ಹೊಸ ಅಗತ್ಯ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ಹಾಗೂ ವಿವಿಧ ಸೋಂಕು ನಿವಾರಣೆಗೆ ಬಳಕೆ ಮಾಡುವ ಔಷಧ ಸೇರಿ ಹಲವು ಔಷಧಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಅತ್ಯಗತ್ಯ ಔಷಧಗಳ ಪಟ್ಟಿಗೆ ಸೇರ್ಪಡೆ ಮಾಡಿದ್ದು ಇದು ಜನಸಾಮಾನ್ಯರ ನೆರವಾಗಲಿದೆ

ನವದೆಹಲಿ: ಕ್ಯಾನ್ಸರ್‌ ಚಿಕಿತ್ಸೆ, ವಿವಿಧ ಸೋಂಕು ನಿವಾರಣೆಗೆ ಬಳಸುವ ಔಷಧ ಸೇರಿದಂತೆ ಹೊಸದಾಗಿ 34 ಔಷಧಗಳನ್ನು ಕೇಂದ್ರ ಸರ್ಕಾರವು ‘ದರ ರಾಷ್ಟ್ರೀಯ ಅತ್ಯಗತ್ಯ ಔಷಧ’ಗಳ ಪಟ್ಟಿಗೆ ಸೇರಿಸಿದೆ. ಹೀಗಾಗಿ ಈ ಔಷಧಗಳ ದರ ಇಳಿಕೆಯಾಗಲಿದೆ. ಮಂಗಳವಾರ ಸೇರ್ಪಡೆಯಾದ 34 ಔಷಧಗಳು ಸೇರಿಸಿದರೆ ದರ ನಿಯಂತ್ರಣ ಪಟ್ಟಿಯಲ್ಲಿರುವ ಔಷಧಗಳ ಸಂಖ್ಯೆ 384ಕ್ಕೆ ತಲುಪಿದೆ. ಸಕ್ಕರೆ, ಕ್ಯಾನ್ಸರ್ ಮತ್ತು ಹೃದಯದ ಚಿಕಿತ್ಸೆಯಲ್ಲಿ ಬಳಸುವ ಅನೇಕ ಪ್ರಮುಖ ಔಷಧಿಗಳು ಶೀಘ್ರದಲ್ಲೇ ದೇಶದಲ್ಲಿ ಅಗ್ಗವಾಗಬಹುದು. ಆದರೆ ನಾನಾ ಕಾರಣಗಳಿಂದ ರಾರ‍ಯಂಟಿಡೈನ್‌, ಸುಕ್ರಾಲ್‌ಫೇಟ್‌, ವೈಟ್‌ ಪೆಟ್ರೋಲಿಯಂ, ಅಥೆನೋಲೋಲ್‌, ಮೀಥೈಲ್‌ಡೋಪಾ ಸೇರಿದಂತೆ 26 ಔಷಧಗಳನ್ನು ದರ ನಿಯಂತ್ರಣ ಪಟ್ಟಿಯಿಂದ ಕೈಬಿಡಲಾಗಿದೆ.

ಪರಿಷ್ಕೃತ ಪಟ್ಟಿಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಆರೋಗ್ಯ ಖಾತೆ ಸಚಿವ ಮನ್‌ಸುಖ್‌ ಮಾಂಡವೀಯ, ‘27 ವಿಭಾಗಗಳಲ್ಲಿ ದರ ನಿಯಂತ್ರಣಕ್ಕೆ ಒಳಪಟ್ಟಹೊಸ 34 ಔಷಧ ಸೇರಿ 384 ಔಷಧಗಳ ಪಟ್ಟಿ (Medicine List) ಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಹಲವು ಆ್ಯಂಟಿ ಬಯಾಟಿಕ್ಸ್‌ಗಳು, ಲಸಿಕೆಗಳು (Vaccine), ಕ್ಯಾನ್ಸರ್‌ಗೆ ನೀಡುವ ಔಷಧ ಮತ್ತು ಇತರೆ ಹಲವು ಮಹತ್ವದ ಔಷಧಗಳು ಇನ್ನು ಮುಂದೆ ಜನರಿಗೆ ಅಗ್ಗದ ದರದಲ್ಲಿ ಸಿಗಲಿವೆ’ ಎಂದು ಹೇಳಿದ್ದಾರೆ.

Rantac - Zinetac, White Petroleum ನಿಷೇಧ: ಅಗತ್ಯ ಔಷಧಿ ಪಟ್ಟಿಯಿಂದ ತೆಗೆದು ಹಾಕಿದ ಕೇಂದ್ರ

ಮಾರ್ಜಿನ್‌ನ್ನು ಶೇಕಡಾ 30ರಿಂದ 50ರ ವರೆಗೆ ಇಡುವುದು ಇದರ ಉದ್ದೇಶ
ಮಾಹಿತಿಯ ಪ್ರಕಾರ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳು (Kidney disease) ಇತ್ಯಾದಿಗಳ ಚಿಕಿತ್ಸೆ (Treatment)ಯಲ್ಲಿ ಬಳಸುವ ಔಷಧಿಗಳು, ಕೆಲವು ದುಬಾರಿ ಪ್ರತಿಜೀವಕಗಳು, ಆಂಟಿ-ವೈರಲ್ ಮತ್ತು ಕೆಲವು ಕ್ಯಾನ್ಸರ್ ಔಷಧಿಗಳನ್ನು ಮೊದಲು ಈ ವ್ಯಾಯಾಮದ ವ್ಯಾಪ್ತಿಗೆ ತರುವ ಸಾಧ್ಯತೆಯಿದೆ. ವಾಸ್ತವವಾಗಿ, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಅಂಚುಗಳನ್ನ ಮಿತಿಗೊಳಿಸುವುದು ಇದರ ಉದ್ದೇಶವಾಗಿದೆ. ಔಷಧ ತಯಾರಕರು ತಮ್ಮ ಉತ್ಪನ್ನಗಳನ್ನ ಸಗಟು ಮಾರಾಟಗಾರನಿಗೆ ಮಾರಾಟ ಮಾಡುತ್ತಾರೆ. ಅವ್ರು ಅವುಗಳನ್ನ ಸ್ಟಾಕಿಸ್ಟ್ ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಕಂಪನಿಯು ಸಗಟು ಮಾರಾಟಗಾರನಿಗೆ ಔಷಧವನ್ನ ನೀಡುವ ಬೆಲೆ ಮತ್ತು ಸಾಮಾನ್ಯ ಗ್ರಾಹಕರು ಪಾವತಿಸುವ ಗರಿಷ್ಠ ಚಿಲ್ಲರೆ ಬೆಲೆಯ ನಡುವಿನ ವ್ಯತ್ಯಾಸವು ವ್ಯಾಪಾರದ ಮಾರ್ಜಿನ್ ಆಗಿದೆ. ಈ ಮಾರ್ಜಿನ್‌ನ್ನು ಶೇಕಡಾ 33ರಿಂದ 50ಕ್ಕೆ ಉಳಿಸಿಕೊಳ್ಳಲು ಸರ್ಕಾರ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಯಾವ್ಯಾವುದು ಸೇರ್ಪಡೆ ?
ಸೋಂಕು ನಿಗ್ರಹಕ್ಕೆ ಬಳಸುವ ಐವರ್‌ಮೆಸಿಟಿನ್‌, ಮುಪಿರೋಸಿನ್‌, ಓರ್ಲೋಮೆಲೋಕ್ಸಿಫೆನ್‌, ಇನ್‌ಸುಲಿನ್‌ ಗ್ಲಾರ್ಗಿನ್‌, ಟೆನಿಲಿಜಿಟಲಿನ್‌, ಮೋಂಟೆಲುಕಾಸ್ಟ್‌, ಲಾಟೋಪ್ರಾಸ್ಟ್‌, ಅಮಿಕಾಸಿನ್‌ ಮೊದಲಾದವು.

ಆ್ಯಸಿಟಿಡಿಗೆ ಬಳಸುವ ರಾರ‍ಯಂಟಿಡೈನ್‌ನಿಂದ ಕ್ಯಾನ್ಸರ್‌ ಆತಂಕ
ಕಾನ್ಸರ್‌ಗೆ ಕಾರಣವಾಗಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ, ಆ್ಯಸಿಡಿಟಿಗೆ ಪ್ರಮುಖವಾಗಿ ಬಳಸುವ ರಾರ‍ಯಂಟಿಡೈನ್‌ ಔಷಧವನ್ನು ಕೇಂದ್ರ ಸರ್ಕಾರ ದರ ನಿಯಂತ್ರಣ ಪಟ್ಟಿಯಿಂದ ಹೊರಗಿಟ್ಟಿದೆ. ರಾರ‍ಯಂಟಿಡೈನ್‌ ಅನ್ನು ರಾರ‍ಯನ್‌ಟ್ಯಾಕ್‌, ಜಿನಿಟಾಕ್‌, ಆ್ಯಸಿಲೋಕ್‌ ಮೊದಲಾದ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡಲಾಗುತ್ತದೆ.

ಇವುಗಳನ್ನು ತಿಂದ ಬಳಿಕ ಮೆಡಿಸಿನ್ ತೆಗೊಂಡ್ರೆ ಅಪಾಯ !

ಆದರೆ ಈ ಔಷಧದಲ್ಲಿ ಎನ್‌ಡಿಎಂಎ (ನೈಟ್ರೋಸೋಡಿಯಂಮೀಥೈಲಮೈನ್‌) ಎಂಬ ಅಂಶ ಸಣ್ಣ ಪ್ರಮಾಣದಲ್ಲಿ ಪತ್ತೆಯಾಗಿತ್ತು. ಇಂಡಿಯನ್‌ ಜರ್ನಲ್‌ ಆಫ್‌ ಫಾರ್ಮೋಕಾಲಜಿಯಲ್ಲಿ ಪ್ರಕಟವಾಗಿದ್ದ ವರದಿ ಅನ್ವಯ ಎನ್‌-ನೈಟ್ರೋಸ್‌ಮೈನ್ಸ್‌ ಹೊಟ್ಟೆ, ಅನ್ನನಾಳ, ಮೂಗಿನ ನಾಳ ಮತ್ತು ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗಬಲ್ಲದು. ಹೀಗಾಗಿ 2020ರಲ್ಲಿ ಆಹಾರ (Food) ಮತ್ತು ಔಷಧ ಪ್ರಾಧಿಕಾರವು ಎಲ್ಲಾ ರಾರ‍ಯಂಟಿಡೈನ್‌ ಉತ್ಪನ್ನಗಳನ್ನು ಹಿಂದಕ್ಕೆ ಪಡೆದಿತ್ತು. ಇದೇ ಕಾರಣದಿಂದಾಗಿ ಇದೀಗ ಕೇಂದ್ರ ಸರ್ಕಾರ ಈ ಔಷಧವನ್ನು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯಿಂದ ಹೊರಗಿಟ್ಟಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ