ಮಲಗೋ ಮೊದಲು ಈ 3 ಯೋಗಾಸನ ಮಾಡಿದ್ರೆ ಗಾಢ ನಿದ್ದೆ ಗ್ಯಾರಂಟಿ!

By Kannadaprabha NewsFirst Published Jun 25, 2020, 9:16 AM IST
Highlights

ದೇಹದಿಂದ ದೇಹಕ್ಕೆ ನಿದ್ರೆಯ ಅವಧಿ ಬದಲಾಗುತ್ತೆ. ಆದರೆ ನಮ್ಮಲ್ಲಿ ಹಲವರು ಮಲಗಿದ ಎಷ್ಟೋ ಹೊತ್ತಿನ ಮೇಲೆ ನಿದ್ರೆಗೆ ಜಾರುತ್ತಾರೆ. ಮತ್ತೆ ಕೆಲವರಿಗೆ ಕಣ್ಮುಚ್ಚಿದ್ದ ತಕ್ಷಣ ನಿದ್ದೆ ಗ್ಯಾರಂಟಿ. ಮಲಗೋ ಮೊದಲು ಒಂದಿಷ್ಟುಯೋಗಾಸನ ಮಾಡಿ, ತಕ್ಷಣ ನಿದ್ದೆ ಬರುತ್ತೆ, ಬೆಳಗಿನವರೆಗೂ ಎಚ್ಚರಾಗದಷ್ಟುಗಾಢ ನಿದ್ದೆಯಿಂದ ನಿಮ್ಮ ಎಷ್ಟೋ ಸಮಸ್ಯೆಗೆ ಪರಿಹಾರ ಸಿಗುತ್ತೆ.

1. ವಿಪರೀತ ಕರಣಿ

ಈ ಯೋಗಾಸನದಿಂದ ನಿದ್ರೆ ಚೆನ್ನಾಗಿ ಬರುತ್ತೆ. ಪೀರಿಯೆಡ್ಸ್‌ ಸಮಸ್ಯೆಗಳು, ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತೆ. ರಕ್ತ ಪರಿಚಲನೆ ಸರಾಗವಾಗುವ ಹಾಗೆ ಮಾಡುತ್ತೆ. ತಿಂದದ್ದು ಚೆನ್ನಾಗಿ ಜೀರ್ಣವಾಗುತ್ತೆ.

ಮಾಡುವ ವಿಧಾನ- ಅಂಗಾತ ಮಲಗಿ, ಬೆನ್ನಿನ ಅಡಿಭಾಗಕ್ಕೆ ದಿಂಬು ಇಡಿ. ಕೈಗಳು ಫ್ರೀಯಾಗಿರಲಿ. ನಿಧಾನಕ್ಕೆ ಕಾಲುಗಳನ್ನು ಮೇಲೆತ್ತುತ್ತಾ ಬನ್ನಿ. ಭುಜದ ಭಾಗ ಮಾತ್ರ ನೆಲದ ಮೇಲೆರಲಿ. ಉಳಿದೆಲ್ಲ ಭಾಗಗಳನ್ನು ಮೇಲಕ್ಕೆತ್ತಿ. ಹತ್ತು ಸೆಕುಂಡುಗಳಷ್ಟುಈ ಭಂಗಿಯಲ್ಲಿದ್ದು ನಿಧಾನಕ್ಕೆ ಬೆನ್ನು, ಹಿಂಭಾಗ, ಕಾಲುಗಳನ್ನು ಕೆಳಗಿಳಿಸಿ. ಮಲಗುವ ಮೊದಲು ಐದು ಬಾರಿ ಈ ಆಸನ ಮಾಡಿ.

2. ಜಠರ ಪರಿವರ್ತನಾಸನ

ಸ್ಪೈನಲ್‌ ಕಾರ್ಡ್‌ ಭಾಗದ ಸ್ಟಿಫ್‌ನೆಸ್‌ ಅನ್ನು ಸಡಿಲಮಾಡುತ್ತದೆ. ಭುಜ, ಸ್ನಾಯುಗಳು ಫ್ಲೆಕ್ಸಿಬಲ್‌ ಆಗುತ್ತವೆ. ಜೀರ್ಣಕ್ರಿಯೆಗೆ ಉತ್ತಮ. ಹಿಂಭಾಗದ ಬೊಜ್ಜು ಕರಗಿಸುತ್ತದೆ.

ಮಾಡುವ ವಿಧಾನ- ಕೈಗಳರೆಡನ್ನೂ ಅಗಲಕ್ಕೆ ಚಾಚಿ. ಕಾಲುಗಳನ್ನು ಜೋಡಿಸಿ ಹಿಂದಕ್ಕೆ ಮಡಿಚಿ. ಹಾಗೇ ಮೇಲೆತ್ತಿ. ಪಕ್ಕಕ್ಕೆ ತನ್ನಿ. ತಲೆ ನೇರವಾಗಿರಲಿ, ನಿಧಾನಕ್ಕೆ ತಲೆಯನ್ನು ಕಾಲುಗಳ ವಿರುದ್ಧ ದಿಕ್ಕಿಗೆ ತಿರುಗಿಸಿ. ಕೆಲವು ಸೆಕೆಂಡ್‌ ಇದೇ ಭಂಗಿಯಲ್ಲಿರಿ. ಬಳಿಕ ಯಥಾಸ್ಥಾನಕ್ಕೆ ಮರಳಿ, ಮತ್ತೊಂದು ಬದಿಗೆ ಕಾಲನ್ನು ಹೊರಳಿ, ತಲೆ ವಿರುದ್ಧ ಬದಿಯಲ್ಲಿರಲಿ.

ಆರೋಗ್ಯಕ್ಕಾಗಿ ಯೋಗ: ಡಾ.ರಾಜ್ ಹೀಗ್ ಮಾಡ್ತಿದ್ದರು, ನೋಡಿ ವೀಡಿಯೋ! 

3. ಬಾಲಾಸನ

ಇದು ಮಗು ಮಲಗುವ ಭಂಗಿಯನ್ನು ಹೋಲುತ್ತದೆ. ಇದು ದೇಹ, ಮನಸ್ಸನ್ನು ಶಾಂತಗೊಳಿಸುತ್ತದೆ. ಸೆಂಟ್ರಲ್‌ ನರ್ವಸ್‌ ಸಿಸ್ಟಮ್‌ಗೂ ಉತ್ತಮ. ಒತ್ತಡ, ಆಯಾಸ, ಟೆನ್ಶನ್‌ಅನ್ನೂ ನಿವಾರಿಸುತ್ತದೆ.

ಮಾಡುವ ವಿಧಾನ- ಮೊದಲು ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳಿ. ಆ ಬಳಿಕ ವಜ್ರಾಸನ ಮಾಡುವಂತೆ ಬಲಗಾಲನ್ನು ಹಿಂದಕ್ಕೆ ಮಡಚಿ ಪೃಷ್ಠದಡಿ ತನ್ನಿ, ಮತ್ತೊಂದು ಕಾಲನ್ನೂ ಹಿಂದಕ್ಕೆ ಮಡಿಚಿ. ವಜ್ರಾಸನ ಭಂಗಿಯಲ್ಲಿ ಕೂತು ಮುಂದಕ್ಕೆ ಬಾಗಿ. ಕೈಗಳೆರಡೂ ಚಾಚಿದ ಭಂಗಿಯಲ್ಲಿರಲಿ, ತಲೆ ನೆಲಕ್ಕೆ ಬಾಗಿರಲಿ. ಇನ್ನೊಮ್ಮೆ ಕೈಗಳನ್ನು ಹಿಂದಕ್ಕೆ ತಂದು ಮುಂದಕ್ಕೆ ಬಾಗಿ ನೆಲದ ಮೇಲೆ ತಲೆ ಬಾಗಿಸಿ.

click me!