ಗಂಟಲು ನೋವು, ಕೆಮ್ಮು, ಉಸಿರಾಟ ತೊಂದರೆ ಇತ್ಯಾದಿ ಕೊರೋನಾ ಲಕ್ಷಣ ಅಂತ ಭಾವಿಸಲಾಗಿತ್ತು. ಆದರೆ ಹೊಸ ಹೊಸ ಕೇಸ್‌ಗಳಲ್ಲಿ ಬೇರೆ ಬಗೆಯ ಲಕ್ಷಣಗಳು ಕಾಣಿಸುತ್ತಿವೆ. ಈ ಅನಾರೋಗ್ಯ ಚಿಹ್ನೆಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ.
ಅಲ್ಲೆಲ್ಲೋ ಯಾರಿಗೋ ಕೊರೋನಾ ಪಾಸಿಟಿವ್ ಬಂದಿದೆಯಂತೆ ಅಂತ ಮಾತಾಡಿಕೊಳ್ಳುತ್ತಿದ್ದವರಿಗೆ ಈಗ ತಮ್ಮ ಮನೆಯ ಪಕ್ಕದಲ್ಲೋ, ಮನೆಯಲ್ಲೋ ಕೊರೋನಾ ಪಾಸಿಟಿವ್ ಕೇಸ್‌ಗಳು ಕಂಡು ಬಂದು ಕಂಗಾಲಾಗುವ ಹಾಗಾಗಿದೆ. ಕೊರೋನಾದ ಕೆಲವು ಲಕ್ಷಣಗಳನ್ನಷ್ಟೇ ಗ್ರಹಿಸಿ ಆ ಲಕ್ಷಣಗಳು ನಮ್ಮಲ್ಲಿಲ್ಲ. ನಾವು ಕೊರೋನಾದಿಂದ ಬಚಾವ್ ಅಂತ ನೆಮ್ಮದಿಯಾಗಿರುವ ಕಾಲ ಹೋಯಿತು. ಹೊಸ ಹೊಸ ಲಕ್ಷಣಗಳಲ್ಲಿ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಇಲ್ಲಿ ಅಂಥಾ ಕೆಲವೊಂದು ಅನಾರೋಗ್ಯದ ಚಿಹ್ನೆಗಳ ವಿವರಗಳಿವೆ. ನಿಮಗೆ ಅಪ್ಪಿತಪ್ಪಿ ಹೀಗೇನಾದ್ರೂ ಆದ್ರೆ ಕೂಡಲೇ ಟೆಸ್ಟ್ ಗೆ ಒಳಗಾಗಿ.
1. ಸಡನ್ನಾಗಿ ರುಚಿ, ವಾಸನೆ ಗೊತ್ತಾಗದೇ ಹೋಗೋದು.
undefined
ಊಟ, ತಿಂಡಿಯ ರುಚಿ, ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳೋದು ಕೋವಿಡ್ 18ನ ಹೊಸ ಲಕ್ಷಣ. ನಮ್ಮ ದೇಶದಲ್ಲಿ ಲಕ್ಷಾಂತರ ಮಂದಿಗೆ ಕಳೆದ ಕೆಲವು ದಿನಗಳಿಂದ ಹೀಗೊಂದು ವಿಚಿತ್ರ ಚಿಹ್ನೆ ಕಾಣಿಸಿಕೊಂಡಿದೆ. ಇಂತವರಿಗೆ ಕೊರೋನಾ ಟೆಸ್ಟ್ ಮಾಡಿದಾಗ ಪಾಸಿಟಿವ್ ರಿಸಲ್ಟ್ ಬಂದಿತ್ತು. ಅನೋಸ್ಮಿಯಾ ಅನ್ನೋದು ಈಗ ಕೋವಿಡ್‌ನ ಹೊಸ ಲಕ್ಷಣವಾಗಿ ಸೇರ್ಪಡೆಯಾಗಿದೆ.
2. ಸ್ನಾಯು ಸೆಳೆತ
ಒಬ್ಬ ವ್ಯಕ್ತಿಗೆ ಜ್ವರವಾಗಲೀ, ನೆಗಡಿ, ಕೆಮ್ಮುಗಳಾಗಲೀ ಇರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಸ್ನಾಯು ಸೆಳೆತ ಶುರುವಾಯಿತ್ತು. ನೋವಿನ ಮಾತ್ರೆ ತಿಂದರೆ ಸಾಕು ಅಂದುಕೊಂಡವನು ಯಾಕೋ ಅನುಮಾನ ಬಂದು ಟೆಸ್ಟ್ ಮಾಡಿಸಿದರೆ ಕೋವಿಡ್ ಪಾಸಿಟಿವ್ ಬಂದಿತ್ತು. ಇದು ಕೊರೋನಾ ಲಕ್ಷಣ ಅಲ್ಲ ಅಂತ ನೆಮ್ಮದಿಯಿಂದ ರೋಗಿಯ ಜೊತೆಗೆ ಒಡನಾಡುತ್ತಿದ್ದ ಮನೆಮಂದಿ, ಸುತ್ತಲಿನವರು, ಕೊರೋನಾ ತಮಗೂ ಹರಡಿರಬಹುದಾ ಅನ್ನುವ ಭೀತಿಯಲ್ಲಿದ್ದಾರೆ.
3. ಡಯೇರಿಯಾದ ಲಕ್ಷಣ
ಡಯೇರಿಯಾ, ಅತಿಸಾರ ಅಥವಾ ಅತಿ ಭೇದಿಯೂ ಕೊರೋನಾದ ಹೊಸ ಲಕ್ಷಣಗಳಲ್ಲೊಂದು. ಭೇದಿಯಾದ ಕೂಡಲೇ ಫುಡ್ ಪಾಯಿಸನ್ ಆಗಿರುತ್ತೆ. ಅಜೀರ್ಣ ಆಗಿರುತ್ತೆ ಅಂತೆಲ್ಲ ತೀರ್ಮಾನಕ್ಕೆ ಬಂದು ಮನೆಯಲ್ಲೇ ನಮಗೆ ಗೊತ್ತಿರುವ ಯಾವುದೋ ಮೆಡಿಸಿನ್ ತಿಂದು ಸುಮ್ಮನಾಗುತ್ತೇವೆ. ಆದರೆ ಇದು ಕೊರೋನಾ ಲಕ್ಷಣವೂ ಆಗಿರಬಹುದು. ಹೀಗೆ ಅತಿ ಭೇದಿಯಾಗೋದರಿಂದ ದೇಹದಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕಡಿಮೆಯಾಗಿ ನಿರ್ಜಲೀಕರಣ ಉಂಟಾದರಂತೂ ಕೋವಿಡ್ ಮಾರಣಾಂತಿಕವಾಗಬಹುದು. ಇಂಥಾ ಲಕ್ಷಣಗಳಿದ್ದಾಗ ಅತಿಯಾಗಿ ನೀರು ಸೇವಿಸುವುದು ಬಹಳ ಮುಖ್ಯ.
ಮಳೆಗಾಲದ ರೋಗಗಳಿಂದ ಮಕ್ಕಳ ರಕ್ಷಣೆ ಹೀಗಿರಲಿ!
4. ಎದೆನೋವು
ಎದೆಯಲ್ಲಿ ನೋವು ಕಾಣಿಸಿಕೊಂಡರೆ ಗ್ಯಾಸ್ಟ್ರಿಕ್ ಆಗಿರುತ್ತೆ ಅಂತ ತಪ್ಪಾಗಿ ಭಾವಿಸುತ್ತೇವೆ. ಕೆಲವೊಮ್ಮೆ ಗ್ಯಾಸ್ಟ್ರಿಕ್‌ನಂತೆ ಬರುವ ಈ ಎದೆನೋವು ಹೃದಯಾಘಾತದ ಸುಳಿವು ನೀಡಬಹುದು, ಇಲ್ಲವೇ ಕೊರೋನಾ ಬಂದಿರುವ ಲಕ್ಷಣವೂ ಆಗಿರಬಹುದು. ಅಸಹಜ ಅನಿಸುವ ಎದೆನೋವಿನ ಬಗ್ಗೆ ಉಡಾಫೆ ಮಾಡಲೇಬೇಡಿ.
5. ಚರ್ಮದಲ್ಲಿ ಗುಳ್ಳೆಗಳೇಳುವುದು, ವಾಂತಿ
ಇದನ್ನಂತೂ ನಂಬುವುದೇ ಕಷ್ಟ. ಏಕೆಂದರೆ ಮುಖ, ಮೈಯಲ್ಲಿ rashes ಆದರೆ ಏನೋ ಅಲರ್ಜಿಯಾಗಿರುತ್ತೆ ಅಂತ ಹೆಚ್ಚಿನವರು ಯಾವ್ದೋ ಲೋಶನ್ ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ. ಆದರೆ ಈಗ ಹೆಚ್ಚುತ್ತಿರುವ ಡೆಂಗ್ಯೂ ಕೇಸ್‌ನಲ್ಲೂ ಮೈಮೇಲೆ ರಾರಯಶಸ್ ಆಗೋದು ಮುಖ್ಯ ಲಕ್ಷಣ. ಅದೇ ರೀತಿ ಕೋವಿಡ್ ಬಂದಾಗಲೂ ಮೈಮೇಲೆ ಗುಳ್ಳೆಗಳೇಳಬಹುದು, ಈ ಬಗ್ಗೆ ಹುಷಾರಾಗಿರಿ. ಜೊತೆಗೆ ವಾಂತಿಯಂಥಾ ಲಕ್ಷಣಗಳೂ ಕಾಣಿಸಬಹುದು.