Published : Mar 08, 2026, 08:24 AM ISTUpdated : Mar 08, 2026, 09:21 AM IST
ಇರಾನ್‌ನಿಂದ ಸೌದಿ ಅರೇಬಿಯಾ ಮೇಲೆ ನಿರಂತರ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನವು ಸೌದಿಗೆ ಸಂಪೂರ್ಣ ಸೇನಾ ಮತ್ತು ವ್ಯೂಹಾತ್ಮಕ ನೆರವು ನೀಡುವುದಾಗಿ ಭರವಸೆ ನೀಡಿದೆ. ಆದರೆ ಈ ಭರವಸೆಯು ಇರಾನ್‌ನೊಂದಿಗೆ ಗಡಿ ಹಂಚಿಕೊಂಡಿರುವ ಪಾಕಿಸ್ತಾನವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.
ರಿಯಾದ್: ಸೌದಿ ಅರೇಬಿಯಾದ ಮೇಲೆ ಇರಾನ್ ಸತತ ದಾಳಿ ನಡೆಸುತ್ತಿರುವ ಹೊತ್ತಿನಲ್ಲೇ ಸೌದಿಗೆ ಎಲ್ಲಾ ರೀತಿಯ ಸೇನಾ ಮತ್ತು ವ್ಯೂಹಾತ್ಮಕ ನೆರವಿನ ಭರವಸೆಯನ್ನು ಪಾಕಿಸ್ತಾನ ನೀಡಿದೆ. ಈ ಮೂಲಕ ಅಗತ್ಯ ಬಿದ್ದರೆ ಇರಾನ್ ಯುದ್ದಕ್ಕೆ ಧುಮುಕುವ ಭರವಸೆ ನೀಡಿದೆ.
25
ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಪಾಕ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಸಿಂ ಮುನೀರ್
ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಶನಿವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಪಾಕ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಸಿಂ ಮುನೀರ್, ಸೌದಿ ರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್ ಜತೆ ಮಾತುಕತೆ ನಡೆಸಿದರು. ಈ ವೇಳೆ, ಸೌದಿಯ ಭದ್ರತೆಗೆ ಎದುರಾಗಬಹುದಾದ ಯಾವುದೇ ಅಪಾಯವನ್ನು ತಡೆಗಟ್ಟಲು ಮಿಲಿಟರಿ ಮತ್ತು ವ್ಯೂಹಾತ್ಮಕ ನೆರವು ನೀಡಲು ಪಾಕಿಸ್ತಾನ ಸಿದ್ದ ಎಂಬ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
35
ಸೌದಿಯ ರಕ್ಷಣಾ ಸಚಿವ ಸಲ್ಮಾನ್ ಹೇಳಿದ್ದೇನು?
ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಸೌದಿಯ ರಕ್ಷಣಾ ಸಚಿವ ಸಲ್ಮಾನ್, ಸೌದಿಯ ಮೇಲೆ ಇರಾನ್‌ನ ದಾಳಿ ಮತ್ತು ಅದನ್ನು ಪಾಕ್ ಹಾಗೂ ಸೌದಿ ಅರೇಬಿಯಾ ನಡುವಣ ರಕ್ಷಣಾ ಒಪ್ಪಂದದ ವ್ಯಾಪ್ತಿಯಲ್ಲಿ ಹೇಗೆ ತಡೆಗಟ್ಟಬಹುದು ಎಂಬುದರ ಬಗ್ಗೆ ನಾವು ಚರ್ಚಿಸಿದೆವು ಎಂದು ಹೇಳಿದ್ದಾರೆ.
ಕಳೆದ ವರ್ಷ ಸೌದಿ ಅರೇಬಿಯಾದೊಂದಿಗೆ ಪಾಕಿಸ್ತಾನ ರಕ್ಷಣಾ ಒಪ್ಪಂದ
ರಕ್ಷಣಾ ಒಪ್ಪಂದ: ತನ್ನ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ವರ್ಷ ಸೌದಿ ಅರೇಬಿಯಾವು ಅಣ್ವಸ್ತ್ರ ಶಕ್ತ ದೇಶವಾದ ಪಾಕಿಸ್ತಾನದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದದ ಅನ್ವಯ ಉಭಯ ದೇಶಗಳ ಪೈಕಿ ಯಾರ ಭದ್ರತೆಗೆ ಅಪಾಯ ಬಂದರೂ ಮತ್ತೊಂದು ದೇಶ ಅದರ ನೆರವಿಗೆ ಧಾವಿಸಬೇಕು ಎಂದು ಸ್ಪಷ್ಟಪಡಿಸಲಾಗಿತ್ತು.
ಪಾಕ್‌ಗೆ ಅಡಕತ್ತರಿ: ಒಪ್ಪಂದ ಮಾಡಿಕೊಳ್ಳುವ ಮೂಲಕ ಪಾಕಿಸ್ತಾನ ಸೌದಿ ಅರೇಬಿಯಾದಿಂದ ಸಾಕಷ್ಟು ಸಾಲದ ನೆರವು ಪಡೆದು ಕೊಂಡಿತ್ತು. ಇದೀಗ ಒಪ್ಪಂದದ ಅನ್ವಯ ಮಿತ್ರ ದೇಶದ ನೆರವಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ ಪಾಕಿಸ್ತಾನ ಇರಾನ್ ಜೊತೆ ದೀರ್ಘವಾದ ಗಡಿ ಹೊಂದಿದೆ. ಸೌದಿಯ ನೆರವಿಗೆ ಹೋದರೆ ಇರಾನ್ ತನ್ನ ಮೇಲೆ ಗಡಿಯಲ್ಲಿ ಭೀಕರ ದಾಳಿ ನಡೆಸಬಹುದು ಎಂಬ ಆತಂಕ ಪಾಕಿಸ್ತಾನವನ್ನು ಕಾಡುತ್ತಿದೆ. ಹೀಗಾಗಿ ಅಡಕತ್ತರಿಗೆ ಸಿಕ್ಕಿದ ಪರಿಸ್ಥಿತಿಗೆ ಪಾಕಿಸ್ತಾನ ತಲುಪಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ