ಇರಾನ್ ವಿರುದ್ಧ ಇಸ್ರೇಲ್ 'ಬ್ಲೂ ಸ್ಪ್ಯಾರೋ' ಎಂಬ ಅತ್ಯಾಧುನಿಕ ಕ್ಷಿಪಣಿ ಬಳಸಿದೆ ಎನ್ನಲಾಗಿದೆ. ವಿಮಾನದಿಂದ ಉಡಾಯಿಸಬಹುದಾದ ಈ ಬ್ಯಾಲಿಸ್ಟಿಕ್ ಕ್ಷಿಪಣಿಯು, ಅಂತರಿಕ್ಷದಿಂದ ಲಂಬವಾಗಿ ಗುರಿಯತ್ತ ನುಗ್ಗುವುದರಿಂದ ಇದನ್ನು ಪತ್ತೆಹಚ್ಚಿ ತಡೆಯುವುದು ಅತ್ಯಂತ ಕಷ್ಟಕರವಾಗಿದೆ.
ಟೆಲ್ ಅವೀವ್: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಬೇಟೆಗೆ ಇಸ್ರೇಲ್ ‘ಬ್ಲೂ ಸ್ಪ್ಯಾರೋ’ ಎಂಬ ಭಯಾನಕ ಕ್ಷಿಪಣಿ ಬಳಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಹಾರಾಟದಲ್ಲಿ ಅತ್ಯಂತ ಕೌಶಲ್ಯ ಹೊಂದಿರುವ ಇದನ್ನು ಪತ್ತೆ ಮಾಡಿ ಹೊಡೆಯುವುದು ಬಹಳ ಕಷ್ಟವಾದ ಕಾರಣ, ಇದನ್ನು ವಿಶ್ವದ ಅತ್ಯಾಧುನಿಕ ಕ್ಷಿಪಣಿಗಳ ಪೈಕಿ ಒಂದು ಎಂದು ಬಣ್ಣಿಸಲಾಗಿದೆ.
24
ಬ್ಯಾಲಿಸ್ಟಿಕ್ ಕ್ಷಿಪಣಿ
ವಿಮಾನದ ಮೂಲಕ ಹಾರಿಸುವ ಈ ಬ್ಯಾಲಿಸ್ಟಿಕ್ ಕ್ಷಿಪಣಿಯು ಅರೆಕ್ಷಣ ಭೂವಾತಾವರಣವನ್ನು ದಾಟಿ ಸಾಗಿ ನಂತರ ನೇರವಾಗಿ ಗುರಿಯತ್ತ ನುಗ್ಗುತ್ತದೆ. ಇದೇ ಕಾರಣಕ್ಕೆ ಈ ಕ್ಷಿಪಣಿಯನ್ನು ‘ಅಂತರಿಕ್ಷದ ಕ್ಷಿಪಣಿ’ ಎಂದೂ ಕರೆಯಲಾಗುತ್ತದೆ.
34
ಬ್ಲೂಸ್ಪ್ಯಾರೋ ಕ್ಷಿಪಣಿ ವಿಶೇಷತೆ ಏನು?
ಇಸ್ರೇಲ್‌ನ ಬತ್ತಳಿಕೆಯಲ್ಲಿರುವ ಆಗಸದ ಮೂಲಕ ಹಾರಿಸಬಹುದಾದ ಮೂರು ಬ್ಯಾಲಿಸ್ಟಿಕ್ ಗುರಿ ನಿರ್ದೇಶಿತ ಕ್ಷಿಪಣಿಗಳ ಕುಟುಂಬಕ್ಕೆ ಸೇರಿದ ಮಿಸೈಲ್‌ಗಳಲ್ಲಿ ಬ್ಲೂಸ್ಪ್ಯಾರೋ ಕೂಡ ಒಂದು. ಬ್ಲ್ಯಾಕ್ ಸ್ಪ್ಯಾರೋ, ಸಿಲ್ವರ್ ಸ್ಪ್ಯಾರೋ ಈ ಕುಟುಂಬದ ಇನ್ನಿತರ ಎರಡು ಕ್ಷಿಪಣಿಗಳಾಗಿವೆ. ಇಸ್ರೇಲ್‌ನ ರಫೇಲ್ ಅಡ್ವಾನ್ಸ್‌ಡ್ ಡಿಫೆನ್ಸ್ ಸಿಸ್ಟಮ್ಸ್ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಈ ಕ್ಷಿಪಣಿಯು ಸುಮಾರು 2 ಸಾವಿರ ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, 6.5 ಮೀಟರ್ ಉದ್ದ, 1.9 ಟನ್ ತೂಕ ಹೊಂದಿದೆ.
ಹೆಚ್ಚಿನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಆಗಸದಿಂದ ಅಡ್ಡವಾಗಿ ತೂರಿಬರುವ ಕ್ಷಿಪಣಿಗಳನ್ನು ಹೊಡೆದುರುಳಿಸುವ ರೀತಿಯಲ್ಲಿ ರೂಪಿಸಲಾಗಿದೆ. ಆದರೆ ಬ್ಲೂಸ್ಪ್ಯಾರೋ ಕ್ಷಿಪಣಿ ಭೂವಾತಾವರಣದ ತುದಿಯಿಂದ ಲಂಬವಾಗಿ ಗುರಿಯತ್ತ ಸಾಗುವ ಕಾರಣ ಇದನ್ನು ತಡೆಯುವುದು ಕಷ್ಟ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ