ತಮ್ಮ ನೋಟದಿಂದಲೇ ಬೆಚ್ಚಿ ಬೀಳಿಸುವ ಆದರೆ ಸ್ವಲ್ಪವೂ ಅಪಾಯಕಾರಿಯಲ್ಲದ ಪ್ರಾಣಿಗಳಿವು

Published : May 04, 2025, 09:06 AM IST

ಸಾಮಾನ್ಯವಾಗಿ ಕೆಲವು ಪ್ರಾಣಿಗಳ ದೇಹ ಆಕಾರವನ್ನು ನೋಡಿದರೆ ಭಯವಾಗುತ್ತದೆ. ಅವುಗಳ ಚೂಪಾದ ಉಗುರು ದೈತ್ಯ ಗಾತ್ರ, ಆಕಾರ ಇದಕ್ಕೆ ಕಾರಣ. ಆದರೆ ಅನೇಕ ಸಂದರ್ಭಗಳಲ್ಲಿ ಹೀಗೆ ನೋಡಿದಾಗ ಹೆದರಿಸುವಂತೆ ಕಾಣುವ ಕೆಲ ಪ್ರಾಣಿಗಳು ನಿಜವಾಗಿಯೂ ಅಪಾಯಕಾರಿಯ? ಖಂಡಿತ ಅಲ್ಲ, ಕೆಲವು ಪ್ರಾಣಿಗಳ ಆಕಾರ ನೋಟ ನಮ್ಮನ್ನು ಭಯಪಡಿಸಿದರೂ ಕೂಡ ಅವರು ಅಪಾಯಕಾರಿಯಲ್ಲ, ಅವುಗಳ ಉಪಸ್ಥಿತಿ ಪರಿಸರಕ್ಕೆ ತುಂಬಾ ಅಗತ್ಯವಾಗಿದೆ. ಇಲ್ಲಿ ನಾವು ನೋಡುವುದಕ್ಕೆ ಅಪಾಯಕಾರಿಯಾಗಿ ಕಂಡರೂ ಅಪಾಯಕಾರಿ ಅಲ್ಲದ ಕೆಲ ಪ್ರಾಣಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.

PREV
17
ತಮ್ಮ ನೋಟದಿಂದಲೇ ಬೆಚ್ಚಿ ಬೀಳಿಸುವ ಆದರೆ ಸ್ವಲ್ಪವೂ ಅಪಾಯಕಾರಿಯಲ್ಲದ ಪ್ರಾಣಿಗಳಿವು

ಮಾಂಟ ರೇ (Manta Ray) ಇದೊಂದು ತನ್ನ ಗಾತ್ರ ಹಾಗೂ ನೋಟದಿಂದ ದೆವ್ವದ ಮೀನು(devilfish) ಎಂದು  ಅಡ್ಡಹೆಸರನ್ನು ಹೊಂದಿದೆ. ಆದರೆ ನಿಜವಾಗಿಯೂ ಇದೊಂದು ಶಾಂತ ಮತ್ತು ಬುದ್ಧಿವಂತವಾದ ಮೀನು ಇದು ನಿರುಪದ್ರವಿ. ಇದು ಯಾರನ್ನೂ ಕುಟುಕುವುದಿಲ್ಲ, ಅಲ್ಲದೇ ನೀರಿನಲ್ಲಿರುವ ಸೂಕ್ಷ್ಮಜೀವಿಗಳನ್ನು ತಿಂದು ಬದುಕುತ್ತದೆ. ಇವು ಸಾಗರದಲ್ಲಿ ಶಾಂತಿಯುತವಾಗಿ ಈಜಾಡುತ್ತವೆ. ಜೊತೆಗೆ ಸಾಗರದಲ್ಲಿ ಡೈವರ್‌ಗಳ ಜೊತೆ ನಿಧಾನವಾಗಿ ಸಂವಹನವನ್ನು ನಡೆಸುತ್ತವೆ ಎಂಬ ಮಾಹಿತಿ ಇದೆ.

27

ದೈತ್ಯ ಆಫ್ರಿಕನ್ ಸಹ್ರಸಪದಿ (Giant African Millipede)ಈ ಪ್ರಭೇದವು ಒಂದು ಅಡಿಗಿಂತ ಹೆಚ್ಚು ಉದ್ದ ಬೆಳೆಯಬಲ್ಲದು ಮತ್ತು ಹಲವಾರು ಕಾಲುಗಳನ್ನು ಹೊಂದಿದ್ದು, ಇದು ಬೆದರಿಸುವಂತಿದೆ. ಆದರೆ ಇದು ನಿಧಾನವಾಗಿ ಚಲಿಸುವ ಜೀವಿ ಇದಾಗಿದ್ದು, ಸತ್ತ ಸಸ್ಯ ಪದಾರ್ಥಗಳನ್ನು ತಿನ್ನುತ್ತದೆ ಮತ್ತು ಕಚ್ಚುವುದಿಲ್ಲ ಅಥವಾ ಯಾರನ್ನೂ ಕುಟುಕುವುದಿಲ್ಲ. ಇದಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇರುವ ಏಕೈಕ ತಂತ್ರವೆಂದರೆ ಅಹಿತಕರ ವಾಸನೆಯನ್ನು ಹೊಂದಿರುವ ಆದರೆ ಮನುಷ್ಯರಿಗೆ ಹಾನಿಕಾರಕವಲ್ಲದ ಸೌಮ್ಯ ರಾಸಾಯನಿಕವನ್ನು ಬಿಡುಗಡೆ ಮಾಡುವುದು.

37

ಮಿಲ್ಕ್‌ ಸ್ನೇಕ್‌(Milk Snake)ಈ ಹಾಡವಿನ ವಿಭಿನ್ನ ಬಣ್ಣ ನೋಡಿ ಅನೇಕರು ಇದು ವಿಷಪೂರಿತ ಹಾವು ಎಂದು ಭಾವಿಸುತ್ತಾರೆ. ಆದರೆ ಈ ಹಾವು ವಿಷಕಾರಿ ಅಲ್ಲ ಇದು ಜನರಿಗೆ ಹಾನಿಕಾರಕವಲ್ಲ ಮತ್ತು ಇದನ್ನು ಹೆಚ್ಚಾಗಿ ಸಾಕುಪ್ರಾಣಿಯಾಗಿ ಸಾಕಲಾಗುತ್ತದೆ. ನೋಡುವುದಕ್ಕೆ ಅಪಾಯಕಾರಿಯಾಗಿ ಕಾಣುವ ಇದರ ನೋಟವೂ ಅದರ ಮೇಲೆ ಪರಭಕ್ಷಕಗಳ ಪ್ರಾಣಿಗಳ ದಾಳಿಯನ್ನು ತಡೆಯುವುದಕ್ಕೆಇರುವ ಒಂದು ತಂತ್ರವಾಗಿದೆಯೇ ಹೊರತು ಅಪಾಯದ ಸಂಕೇತವಲ್ಲ.

47


ಘರಿಯಾಲ್(Gharial)ಇದೊಂದು ಮೊಸಳೆ ತರಹದ ಸರೀಸೃಪವಾಗಿದ್ದು, ಉದ್ದವಾದ, ಕಿರಿದಾದ ಮೂತಿಯನ್ನು ಹೊಂದಿದ್ದು, ಚೂಪಾದ ಹಲ್ಲುಗಳನ್ನು ಹೊಂದಿದೆ. ನೋಡುವುದಕ್ಕೆ ಇದು ಅಪಾಯಕಾರಿಯಾಗಿ ಕಂಡರೂ  ಇದು ಅಂತಹ ಅಪಾಯಕಾರಿಯಲ್ಲ,  ಈಈ ಚೂಪಾದ ಮೂತಿ ಹಾಗೂ ಹಲ್ಲು ಇದು ಮೀನು ಹಿಡಿದು ಜೀವಿಸುವುದಕ್ಕೆ ಸಹಾಯಕವಾಗಿದೆಯೇ ಹೊರತು ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ಅಲ್ಲ. ಇದು ತನ್ನ ನಾಚಿಕೆ ಹಾಗು ಏಕಾಂತದ ಸ್ವಭಾವವನ್ನು ಹೊಂದಿದ್ದು, ಮನುಷ್ಯರ ಕಂಡರೆ ದೂರ ಓಡುತ್ತದೆ.

57

ರಣಹದ್ದುಗಳು(Vultures) ತಮ್ಮ ಬೋಳು ತಲೆ ಹಾಗೂ ಸಾವಿಗೆ ಸಂಪರ್ಕವನ್ನು ಹೊಂದಿರುವುದರಿಂದ ಅವುಗಳ ಬಗ್ಗೆ ಕೆಟ್ಟ ಹೆಸರಿದೆ. ಆದೆ ಅವುಗಳು ಯಾವುದೇ ಪ್ರಾಣಿಗಳನ್ನು ಬೇಟೆಯಾಡಿ ಸಾಯಿಸುವುದಿಲ್ಲ, ಅವುಗಳು ಕೇವಲ ಮೃತದೇಹವನ್ನು ಮಾತ್ರ ತಿನ್ನುತ್ತವೆ. ಹಾಗೆ ಮಾಡುವುದರಿಂದ, ರೋಗ ಹರಡುವುದನ್ನು ತಡೆಗಟ್ಟುವಲ್ಲಿ ಮತ್ತು ಪರಿಸರ ವ್ಯವಸ್ಥೆಗಳನ್ನು ಸ್ವಚ್ಛವಾಗಿಡುವಲ್ಲಿ ಅವು ಪ್ರಮುಖ ಪಾತ್ರವಹಿಸುತ್ತವೆ. ಈ ಪಕ್ಷಿಗಳು ಆಕ್ರಮಣಕಾರಿಯಲ್ಲ ಮತ್ತು ಸಾಮಾನ್ಯವಾಗಿ ಮಾನವನ ಜೊತೆ ಸಂಪರ್ಕವನ್ನು ತಪ್ಪಿಸುತ್ತವೆ.

67

ಬಾಸ್ಕಿಂಗ್ ಶಾರ್ಕ್ (Basking Shark) ಇದು ನೋಡುವುದಕ್ಕೆ ಅದರ ದೈತ್ಯವಾದ ಆಕಾರ ಹಾಗೂ ಅಗಲವಾಗಿ ತೆರೆಯುವ ಬಾಯಿಯಿಂದ ನಿಮ್ಮನ್ನು  ಭಯಭೀತಗೊಳಿಸಬಹುದು. ಆದರೆ ಇದೂ ಸಂಪೂರ್ಣವಾಗಿ ಸ್ವಲ್ಪವೂ ಹಾನಿ ಮಾಡದ ಸಾಧು ಪ್ರಾಣಿ. ಇದು ಪ್ರಪಂಚದಲ್ಲೇ 2ನೇಯ ಅತೀ ದೊಡ್ಡ ಮೀನು ಎನಿಸಿದ್ದರೂ ಕೂಡ  ಇದು ನೀರಿನಲ್ಲಿರುವ ಸಣ್ಣ ಸಣ್ಣ ಸೂಕ್ಷಾಣು ಜೀವಿಗಳನ್ನು(plankton)ಫಿಲ್ಟರ್ ಮಾಡಿ ತಿನ್ನುತ್ತದೆ.  ಇದು ತುಂಬಾ ಶಾಂತ ಜಲಚರವಾಗಿದ್ದು, ಜನರಿಗೆ ಹಾನಿ ಮಾಡುವುದಿಲ್ಲ,

77

ಆಯೆ-ಆಯೆ (Aye-Aye) ಎಂಬುದು ಉದ್ದನೆಯ ಬೆರಳುಗಳನ್ನು ಹೊಂದಿರುವ ಸಸ್ತನಿ ಆಗಿದೆ. ಉದ್ದವಾದ ಉಗುರುಗಳನ್ನು ಇದು ಹೊಂದಿದ್ದು, ಇದು ಕಾಡುಗಳಲ್ಲಿ ದೊಡ್ಡ ದೊಡ್ಡ ಮರಗಳಲ್ಲಿ ಇರುವ ಕೀಟಗಳನ್ನು ಮರದಿಂದ ಹೊರತೆಗೆದು ತಿನ್ನುವುದು ಇದರ ನೋಡ ಕೆಲವು ಪ್ರದೇಶಗಳಲ್ಲಿ ಮೂಢನಂಬಿಕೆಗೆ ಕಾರಣವಾಗಿದೆ. ಕೆಲವರು ಇದು ಕಾಣಸಿಗುವುದು ಕೆಟ್ಟ ಶಕುನ ಎಂದು ನಂಬುತ್ತಾರೆ. ಆದರೆ ಆಯೆ-ಆಯೆ ಜನರಿಗೆ ಹಾನಿಕಾರಕವಲ್ಲ ಮತ್ತು ಅದು ಪರಿಸರ ವ್ಯವಸ್ಥೆಯೊಳಗೆ ಕೀಟ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಫ್ರಿಕಾದ ದ್ವೀಪ ರಾಷ್ಟ್ರವಾದ ಮಡಗಾಸ್ಕರ್ ನಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ. 

Read more Photos on
click me!

Recommended Stories