ಭೀತಿ ನಡುವೆ ಪಾಕಿಸ್ತಾನ ISI ಮುಖ್ಯಸ್ಥನ ಹೆಗಲಿಗೆ NSA ಜವಾಬ್ದಾರಿ, ಯಾರು ಈ ಆಸೀಮ್ ಮಲಿಕ್

Published : May 01, 2025, 02:25 PM ISTUpdated : May 01, 2025, 02:58 PM IST

ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಆಸಿಂ ಮಲಿಕ್ ಈಗ ISI ಮುಖ್ಯಸ್ಥರ ಜೊತೆಗೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಆಗಿ ನೇಮಕಗೊಂಡಿದ್ದಾರೆ. ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ ಈ ದ್ವಿಪಾತ್ರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಸಿಂ ಮಲಿಕ್ ಯಾರು, ಭಾರತದ ವಿರುದ್ದ ಆಸೀಮ್ ಮಲಿಕ್ ತೆಗೆದುಕೊಂಡಿರುವ ನಿರ್ಣಯಗಳೇನು? 

PREV
15
ಭೀತಿ ನಡುವೆ ಪಾಕಿಸ್ತಾನ ISI ಮುಖ್ಯಸ್ಥನ ಹೆಗಲಿಗೆ NSA ಜವಾಬ್ದಾರಿ, ಯಾರು ಈ ಆಸೀಮ್ ಮಲಿಕ್
ಆಸಿಂ ಮಲಿಕ್ ಪಾಕಿಸ್ತಾನದ ಹೊಸ NSA & ISI ಮುಖ್ಯಸ್ಥ

ಪಾಕಿಸ್ತಾನವು ಇತ್ತೀಚೆಗೆ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಆಸಿಂ ಮಲಿಕ್ ಅವರನ್ನು ದೇಶದ ಹೊಸ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ (NSA) ನೇಮಿಸಿದೆ. ಈ ಹುದ್ದೆಯ ಜೊತೆಗೆ ಅವರು ISI ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ ಈ ನೇಮಕ ಮಹತ್ವ ಪಡೆದುಕೊಂಡಿದೆ. ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಆಸಿಂ ಮಲಿಕ್ ಯಾರು?

25
ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಆಸಿಂ ಮಲಿಕ್ ಯಾರು?

ಆಸಿಂ ಮಲಿಕ್ ಬಲೂಚಿಸ್ತಾನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ನಂತರ ಅವರು ಅಮೆರಿಕದ ಫೋರ್ಟ್ ಲೆವೆನ್‌ವರ್ತ್ ಮತ್ತು ಲಂಡನ್‌ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಿಂದ ಉನ್ನತ ಮಿಲಿಟರಿ ಶಿಕ್ಷಣವನ್ನು ಪಡೆದಿದ್ದಾರೆ. ಭಾರತದಲ್ಲಿ ನಡೆಸಿದ ಹಲವು ಉಗ್ರರ ಕೃತ್ಯಗಳ ಹಿಂದೆ ಇವರ ಕೈವಾಡವಿದೆ ಅನ್ನೋ ಆರೋಪವಿದೆ. ಉಗ್ರರನ್ನು ಬಳಸಿಕೊಂಡು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವುದು, ಭಾರತದಲ್ಲಿ ಸ್ಫೋಟಕ ಕೃತ್ಯ ಎಸಗುವ ಐಎಸ್ಐನ ಮುಖ್ಯಸ್ಥನೇ ಈ ಆಸಿಮ್ ಮಲಿಕ್. 

35
ಮಲಿಕ್ ಮಿಲಿಟರಿ ವೃತ್ತಿಜೀವನ

ಮಲಿಕ್ 1989 ರಲ್ಲಿ 12 ನೇ ಬಲೂಚ್ ರೆಜಿಮೆಂಟ್‌ನಲ್ಲಿ ಕಮಿಷನ್ ಪಡೆದರು. ಅವರು ಬಲೂಚಿಸ್ತಾನದಲ್ಲಿ 41 ನೇ ಪದಾತಿ ದಳ ಮತ್ತು ವಜಿರಿಸ್ತಾನದಲ್ಲಿ ಪದಾತಿ ದಳದ ನೇತೃತ್ವ ವಹಿಸಿದ್ದಾರೆ. ಪಾಕಿಸ್ತಾನದ ಐಎಸ್ಐ ಮೂಲಕ ಭಾರತದ ಶಾಂತಿ ಕೆಡಿಸುತ್ತಿರುವ ಈ ಅಸೀಮ್ ಮಲಿಕ್ ಇದೀಗ ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಆಯ್ಕೆಯಾಗಿದ್ದರೆ. ಇದು ಭಾರತ ಹಾಗೂ ಪಾಕಿಸ್ತಾನ ನಡುವಿನ ಆತಂಕ ಮತ್ತಷ್ಟು ಹೆಚ್ಚಿಸಿದೆ. 

45
ಮಲಿಕ್ ಆಡಳಿತಾತ್ಮಕ ಪಾತ್ರಗಳು

ಅಕ್ಟೋಬರ್ 2021 ರಲ್ಲಿ, ಅವರನ್ನು ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಬಡ್ತಿ ನೀಡಲಾಯಿತು ಮತ್ತು ಜನರಲ್ ಹೆಡ್‌ಕ್ವಾರ್ಟರ್ಸ್ (GHQ) ನಲ್ಲಿ ಅಡ್ಜುಟಂಟ್ ಜನರಲ್ ಆಗಿ ನೇಮಕಗೊಂಡರು. ಸೆಪ್ಟೆಂಬರ್ 2024 ರಲ್ಲಿ, ಮಲಿಕ್ ಅವರನ್ನು ಪಾಕಿಸ್ತಾನದ ಪ್ರಮುಖ ಗುಪ್ತಚರ ಸಂಸ್ಥೆ ISI ಯ ಮಹಾನಿರ್ದೇಶಕರಾಗಿ ನೇಮಿಸಲಾಯಿತು.

55
NSA ಆಗಿ ಮಲಿಕ್ ಹೊಸ ಪಾತ್ರ

ಏಪ್ರಿಲ್ 2025 ರಲ್ಲಿ, ಮಲಿಕ್ ಅವರಿಗೆ NSA ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಯಿತು.ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಆಸಿಂ ಮಲಿಕ್ ಅವರ ISI ಮುಖ್ಯಸ್ಥ ಮತ್ತು NSA ಎಂಬ ದ್ವಿಪಾತ್ರವು ಪಾಕಿಸ್ತಾನದ ಭದ್ರತಾ ರಚನೆಯಲ್ಲಿ ಒಂದು ಮಹತ್ವದ ಬದಲಾವಣೆಯನ್ನು ತೋರಿಸುತ್ತದೆ.

Read more Photos on
click me!

Recommended Stories