ಸೋಫಿಯಾ ಖುರೇಷಿ ಹೆಸ್ರು ಹೇಳಿ ಪಾಕ್ ನಾಯಕನ ಬಾಯಿ ಮುಚ್ಚಿಸಿದ ಈಜಿಪ್ಟ್ ಪತ್ರಕರ್ತ

Published : Jun 05, 2025, 10:19 AM ISTUpdated : Jun 05, 2025, 11:33 AM IST

ಪಾಕಿಸ್ತಾನದಲ್ಲಿ ಮುಸ್ಲಿಮರನ್ನು ಕ್ರೂರಿಗಳಂತೆ ಬಿಂಬಿಸಲು ಪಹಲ್ಗಾಮ್ ದಾಳಿಯನ್ನು ಬಳಸಲಾಗುತ್ತಿದೆ ಎಂಬ ಬಿಲಾವಲ್ ಭುಟ್ಟೋ ಅವರ ಹೇಳಿಕೆಗೆ ಈಜಿಪ್ಟ್ ಮೂಲದ ಪತ್ರಕರ್ತ ತಿರುಗೇಟು ನೀಡಿದ್ದಾರೆ. 

PREV
15

ವಾಷಿಂಗ್ಟನ್: 'ಭಾರತದಲ್ಲಿ ಮುಸ್ಲಿಮರನ್ನು ಕ್ರೂರಿಗಳಂತೆ ಬಿಂಬಿಸಲು ಪಹಲ್ದಾ೦ ದಾಳಿಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ' ಎಂದ ಪಾಕಿಸ್ತಾನದ ಪಿಪಿಪಿ ನಾಯಕ ಬಿಲಾವಲ್ ಭುಟೊಗೆ ಮುಖ ಭಂಗವಾಗಿದೆ. ಅವರು ಈ ಆರೋಪ ಮಾಡಿದ್ದಕ್ಕೆ ಪ್ರತಿಯಾಗಿ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಈಜಿಪ್ಟ್ ಮೂಲದ ಪತ್ರಕರ್ತ ಅಹ್ಮದ್ ಫಾತಿ ಅವರು ಕಃ ಸೋಫಿಯಾ ಖುರೇಷಿ ಅವರ ಹೆಸರನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದರು.

25

'ಭುಟ್ಟೋ ಅವರೇ, ನೀವು ಹೀಗೆ ಹೇಳುತ್ತಿದ್ದೀರಲ್ಲ. ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರದ ಬಗ್ಗೆ ಮಾಹಿತಿ ನೀಡಿದ್ದ ಆ ಮಹಿಳಾ ಸೇನಾ ಧಿಕಾರಿ (ಕ| ಸೋಫಿಯಾ ಖುರೇಷಿ) ಯಾರು?' ಎಂದು ಕೇಳಿದರು. ಆಗ ಭುಟ್ರೊ ಬಾಯಿ ಮುಚ್ಚಿಕೊಂಡರು.

35

ಭಾರತದ ಪ್ರವಾಸಿತಾಣ ಪಹಲ್ಗಾಮ್ ನಲ್ಲಿದ್ದ ಪ್ರವಾಸಿಗರ ಮೇಲೆ ಪಾಕ್ ಪೋಷಿತ ಉಗ್ರರು ಗುಂಡಿನ ದಾಳಿ ನಡೆಸಿ, 26 ಜನರಿಗೆ ಗುಂಡಿಟಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತ, ಅಪರೇಷನ್ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು.

45

ಈ ಯಶಸ್ವಿ ಆಪರೇಷನ್ ಸಿಂದೂರದ ಮಾಹಿತಿಯನ್ನು ಕರ್ನಲ್‌ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾಧ್ಯಮಗಳಿಗೆ ನೀಡಿದ್ದರು. ಕರ್ನಲ್‌ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಇಬ್ಬರು ಮಹಿಳೆಯರು. ಸಿಂಧೂರ ಕಾರ್ಯಾಚರಣೆಯ ಬಗ್ಗೆ ಎಳೆ ಎಳೆಯಾಗಿ ಹಾಗೂ ಅತ್ಯಂತ ಸ್ಪಷ್ಟವಾಗಿ ಜಗತ್ತಿಗೆ ಇವರಿಬ್ಬರು ಹೇಳಿದ್ದರು.

55

ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಅಳೆದು ತೂಗಿ. ಒಂದೊಂದು ಪದವನ್ನೂ ಅವಶ್ಯವಿದ್ದರೆ ಮಾತ್ರ ಬಳಸಿರುವುದಕ್ಕೆ ಹಾಗೂ ಇಡೀ ಪತ್ರಿಕಾಗೋಷ್ಠಿಯ ಬಗ್ಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories