ಹೃದಯ ಕಾಯಿಲೆಯ ಆರಂಭದಲ್ಲಿ ಕಂಡುಬರುವ ಲಕ್ಷಣಗಳಿವು

Published : Oct 29, 2025, 05:13 PM IST

Heart Disease Symptoms: ಹೃದಯ ಕಾಯಿಲೆ ಇದ್ದಕ್ಕಿದ್ದಂತೆ ಬರುವುದಿಲ್ಲ. ಇದು ಬಹಳ ಮೊದಲೇ ಪ್ರಾರಂಭವಾಗುತ್ತದೆ. ನಮ್ಮ ದೇಹವೂ ಸಂಕೇತಗಳನ್ನ ನೀಡುತ್ತದೆ. ಆದರೂ ಈ ಲಕ್ಷಣಗಳನ್ನು ನಿರ್ಲಕ್ಷಿಸುತ್ತೇವೆ. ಇದರಿಂದಾಗಿ ಸಮಸ್ಯೆ ಕ್ರಮೇಣ ಉಲ್ಬಣಗೊಳ್ಳುತ್ತದೆ. ಆದ್ದರಿಂದ ಮೊದಲೇ ಗುರುತಿಸುವುದು ಬಹಳ ಮುಖ್ಯ.  

PREV
15
ಪ್ರಮುಖ ಕಾರಣ

ಕಳೆದ ಕೆಲವು ವರ್ಷಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿವೆ. ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಹೃದಯ ಸಂಬಂಧಿತ ಕಾಯಿಲೆಗಳಿಗೆ ಪ್ರಮುಖ ಕಾರಣಗಳಾಗಿರಬಹುದು.

25
ಮೊದಲೇ ಗುರುತಿಸಿ

ಆರೋಗ್ಯ ತಜ್ಞರ ಪ್ರಕಾರ, ಹೃದಯ ಸಂಬಂಧಿತ ಕಾಯಿಲೆಗಳ ಲಕ್ಷಣಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ನಿಮ್ಮ ಹೃದಯದ ಆರೋಗ್ಯ ಮೊದಲಿನಂತಾಗುತ್ತದೆ.

35
ದೇಹ ದಣಿದಂತೆ ಭಾಸ

ಹೃದಯ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ದೇಹವು ದಣಿದಂತೆ ಭಾಸವಾಗುತ್ತದೆ. ನಿಮಗೆ ಶಕ್ತಿ ಕಡಿಮೆಯಿದ್ದರೆ, ಹೃದಯ ಕಾಯಿಲೆ ಬರುವ ಅಪಾಯ ಹೆಚ್ಚಾಗಬಹುದು. ಅಷ್ಟೇ ಅಲ್ಲ, ಹೃದಯ ಕಾಯಿಲೆ ಇರುವ ಜನರು ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವ ಸಮಸ್ಯೆ ಅನುಭವಿಸಬಹುದು.

45
ಉಸಿರಾಟದ ತೊಂದರೆ

ನೀವು ಆಗಾಗ್ಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದೀರಾ?. ಹಾಗಿದ್ದಲ್ಲಿ, ನೀವು ಈ ಲಕ್ಷಣವನ್ನು ನಿರ್ಲಕ್ಷಿಸಬಾರದು. ಟೆಸ್ಟ್ ಮಾಡಿಸಿಕೊಳ್ಳಬೇಕು. ನಿಮ್ಮ ಹೃದಯ ಬಡಿತ ಹೆಚ್ಚಾದರೆ ನೀವು ತಕ್ಷಣ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

55
ಅನಗತ್ಯ ಬೆವರು

ಶ್ರಮವಿಲ್ಲದೆ ಬೆವರುವುದು ಸಣ್ಣ ಲಕ್ಷಣವಂತೂ ಅಲ್ಲ. ಅನಗತ್ಯವಾಗಿ ಬೆವರುವುದು ಹೃದ್ರೋಗದ ಸಂಕೇತವಾಗಿರಬಹುದು. ಪಾದಗಳು ಅಥವಾ ಕಣಕಾಲುಗಳಲ್ಲಿ ಊತವು ಹೃದಯ ಕಾಯಿಲೆಯನ್ನು ಸೂಚಿಸುತ್ತದೆ. ನೀವು ಈ ಲಕ್ಷಣಗಳನ್ನು ಏಕಕಾಲದಲ್ಲಿ ಅನುಭವಿಸಿದರೆ ನೀವು ತಕ್ಷಣ ಟೆಸ್ಟ್ ಮಾಡಿಸಲೇಬೇಕು.

Read more Photos on
click me!

Recommended Stories