ಪ್ರತಿಯೊಬ್ಬರಿಗೂ ಇಂಥದ್ದೊಂದು ಅನುಭವ ಆಗಾಗ್ಗೆ ಆಗುತ್ತಿರುತ್ತದೆ. ಅದೇ ಗೂಸ್‌ಬಂಪ್ (ರೋಮಗಳು ಎದ್ದು ನಿಲ್ಲುತ್ತವೆ). ಚಳಿಗೂ ಇದು ಕಾಣಿಸುತ್ತಿದೆಯಾದರೂ ಇದಕ್ಕೆ ಅನೇಕ ಕಾರಣಗಳಿವೆ.
webstories/lifestyle Sep 20 2025
Author: Ashwini HR Image Credits:instagram
Kannada
ಗೂಸ್‌ಬಂಪ್ಸ್ ಯಾವಾಗ ಬರುತ್ತೆ?
ನೀವು ಇದ್ದಕ್ಕಿದ್ದಂತೆ ಅತಿಯಾಗಿ ಭಯಪಟ್ಟಾಗ, ಕೋಪ ಅಥವಾ ಉತ್ಸಾಹ ತೋರಿದಾಗ, ಥ್ರಿಲ್ಲರ್ ಚಿತ್ರ, ಸಂಗೀತ ಅಥವಾ ಪವರ್‌ಫುಲ್ ಭಾಷಣವನ್ನು ನೋಡುವುದು ಅಥವಾ ಕೇಳಿದಾಗ, ಆತ್ಮೀಯರು ಎದುರಾದಾಗ ಈ ಗೂಸ್‌ಬಂಪ್ಸ್ ಸಂಭವಿಸುತ್ತದೆ.
Image credits: Instagram
Kannada
ಗೂಸ್‌ಬಂಪ್ಸ್ ಬರೋದು ಯಾಕೆ?
ನಮ್ಮ ಸ್ನೇಹಿತರ ಬಳಿ ಅಥವಾ ಸ್ವತಃ ಸ್ನೇಹಿತರು ನನಗಂತೂ ಕೇಳಿಯೇ, ನೋಡಿಯೇ ಗೂಸ್‌ಬಂಪ್ ಬಂತು ಎನ್ನುತ್ತೇವೆ. ಆದರೆ ಈ ಗೂಸ್‌ಬಂಪ್ ಬರೋದು ಯಾಕೆ ಅಂತ ನಿಮಗೆ ಗೊತ್ತಾ?.
Image credits: Instagram
Kannada
ಗೂಸ್‌ಬಂಪ್ಸ್ ಅನ್ನೋದು..
ಗೂಸ್‌ಬಂಪ್ಸ್ ಎನ್ನುವುದು ಮನೋ-ಶಾರೀರಿಕ ಪ್ರತಿಕ್ರಿಯೆಯಾಗಿದ್ದು, ಇದು ಭಾವನಾತ್ಮಕ ಪ್ರಚೋದನೆ ಹೆಚ್ಚಾದಾಗ ಉಂಟಾಗುತ್ತದೆ.
Image credits: Instagram
Kannada
ಸಂಶೋಧನೆ ಹೇಳುವುದೇನು?
ಸಂಶೋಧನೆಯ ಪ್ರಕಾರ, ಇದು ಮೆದುಳಿನ ಪ್ರತಿಫಲ ವ್ಯವಸ್ಥೆಯಲ್ಲಿ ಡೋಪಮೈನ್ ಬಿಡುಗಡೆಗೆ ಸಂಬಂಧಿಸಿದೆ. ವಿಶೇಷವಾಗಿ ಪ್ರಮುಖ ಬದಲಾವಣೆಗಳು, ಅನಿರೀಕ್ಷಿತ ಕ್ಷಣಗಳಲ್ಲಿ ಗೂಸ್‌ಬಂಪ್ಸ್ ಬರುತ್ತದೆ.
Image credits: Instagram
Kannada
55% ಜನಕ್ಕೆ ಗೂಸ್‌ಬಂಪ್ಸ್
ಸುಮಾರು 55% ಜನರು ಗೂಸ್‌ಬಂಪ್ಸ್ ಅನುಭವಿಸುತ್ತಾರೆ. ಆ ರೀತಿ ಬರುವುದರಿಂದ ಹೆಚ್ಚಿನ ಭಾವನಾತ್ಮಕ ಬುದ್ಧಿವಂತಿಕೆ, ಸಹಾನುಭೂತಿ ಮತ್ತು ಹೊಸ ಅನುಭವಗಳಿಗೆ ಮುಕ್ತತೆಯನ್ನು ಪ್ರದರ್ಶಿಸುತ್ತಾರೆ.