ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಹೆಚ್ಚಿನ ಮಹತ್ವವಿದೆ. ಯಾವುದೇ ಪೂಜೆ ಅಥವಾ ಶುಭಕಾರ್ಯಗಳು ಇದ್ದಾಗಲೆಲ್ಲಾ ತೆಂಗಿನಕಾಯಿ ಬಳಸಲಾಗುತ್ತದೆ.
28
ಯಾವ ದೇವರಿಗೆ ಯಾವ ರೀತಿ?
ಆದರೆ ಇಂದು ನಾವು ಯಾವ ದೇವರಿಗೆ ಯಾವ ರೀತಿ ತೆಂಗಿನಕಾಯಿ ಅರ್ಪಿಸಬೇಕೆಂಬುದು ಹೇಳುತ್ತೇವೆ. ಅದಕ್ಕೂ ಮೊದಲು ತೆಂಗಿನಕಾಯಿ ಮಹತ್ವ ತಿಳಿದುಕೊಳ್ಳೋಣ.
38
ತೆಂಗಿನಕಾಯಿ ಮಹತ್ವ
ದಂತಕಥೆಯ ಪ್ರಕಾರ, ವಿಷ್ಣು ಭೂಮಿಗೆ ಇಳಿದಾಗ ತನ್ನೊಂದಿಗೆ ಲಕ್ಷ್ಮೀ ದೇವತೆ, ತೆಂಗಿನಮರ ಮತ್ತು ಕಾಮಧೇನು ಹಸುವನ್ನು ತಂದನು.
48
ಶಿವನ ಕಣ್ಣಿಗೆ ಹೋಲಿಕೆ
ತೆಂಗಿನಕಾಯಿಯಲ್ಲಿ ಬಹ್ಮ, ವಿಷ್ಣು, ಮಹೇಶ್ವರ ಎಂಬ ತ್ರಿಮೂರ್ತಿಗಳು ವಾಸಿಸುತ್ತಾರೆ. ತೆಂಗಿನಕಾಯಿಯ ಮೇಲಿನ ರಂಧ್ರವನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಇದನ್ನು ಶ್ರೀಫಲ ಎಂದು ಕರೆಯಲಾಗುತ್ತದೆ. ಶ್ರೀಫಲ ಎಂದರೆ ಲಕ್ಷ್ಮೀ ದೇವತೆ.
58
ಸಿಪ್ಪೆ ಇದ್ದರೆ ಮಾತ್ರ ದೇವರಿಗೆ ಅರ್ಪಣೆ
ಕೆಲವು ಶಿವ ದೇವಾಲಯದಲ್ಲಿ ತೆಂಗಿನಕಾಯಿಯನ್ನು ಎಂದಿಗೂ ಒಡೆಯುವುದಿಲ್ಲ. ಇಡೀ ತೆಂಗಿನಕಾಯಿ ಮಾತ್ರ ಅರ್ಪಿಸಲಾಗುತ್ತದೆ. ಒಡೆದ ತೆಂಗಿನಕಾಯಿಯನ್ನು ಸಹ ಸಿಪ್ಪೆ ಇದ್ದರೆ ಮಾತ್ರ ದೇವರಿಗೆ ಅರ್ಪಿಸಬೇಕು.
68
ಹಸಿರು ತೆಂಗಿನಕಾಯಿ
ಪೂಜೆಯಲ್ಲಿ ಹಸಿರು ತೆಂಗಿನಕಾಯಿ ಬಳಸುವುದಿಲ್ಲ. ಇದನ್ನು ಪಾನೀಯವಾಗಿ ಮಾತ್ರ ಬಳಸಲಾಗುತ್ತದೆ.
78
ವಿಷ್ಣು ಮತ್ತು ಲಕ್ಷ್ಮೀಗೆ
ವಿಷ್ಣು ಮತ್ತು ಲಕ್ಷ್ಮೀಗೆ ತೆಂಗಿನಕಾಯಿಯನ್ನು ಒಡೆದು ಅರ್ಪಿಸಬೇಡಿ. ನೀವು ಇಡೀ ತೆಂಗಿನಕಾಯಿ ಅರ್ಪಿಸಬಹುದು.
88
ತಾಮಸಿಕ ದೇವತೆಗಳಿಗೆ ಮತ್ತು ಹನುಮಂತನಿಗೆ
ಸಿಪ್ಪೆ ಸಹಿತ ತೆಂಗಿನಕಾಯಿಯನ್ನು ಎಲ್ಲಾ ತಾಮಸಿಕ ದೇವತೆಗಳಿಗೆ ಮತ್ತು ಹನುಮಂತನಿಗೆ ಅರ್ಪಿಸಬಹುದು.