ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಬೆಂಗಳೂರಿನಲ್ಲಿ ಸಂಭ್ರಮ

Published : Jan 22, 2024, 03:49 PM ISTUpdated : Jan 22, 2024, 06:45 PM IST

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಬೆಂಗಳೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಗಿದೆ.

PREV
14
ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಬೆಂಗಳೂರಿನಲ್ಲಿ ಸಂಭ್ರಮ

 ಅಯೋಧ್ಯೆಯಲ್ಲಿ‌ ಬಾಲರಾಮನ ಪ್ರಾಣ ಪ್ರತಿಷ್ಠಪಾನೆ ಹಿನ್ನೆಲೆ ಬೆಂಗಳೂರಿನ ಬಹುತೇಕ ದೇಗುಲಗಳಲ್ಲಿ ವಿಶೇಷ ಅಭಿಷೇಕ, ಪೂಜೆ, ಹೋಮ ಹವನ ಮಾಡಲಾಗಿದೆ.
 

24

ರಾಮಲಲ್ಲಾ ಪ್ರತಿಷ್ಟಾಪನೆ ಹಿನ್ನೆಲೆ ಇಡೀ ದಿನ ಭಜನೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನಲೆ, ಸಾರ್ವಜನಿಕರ ಅನುಕೂಲಕ್ಕೆ ಎಲ್ ಇಡಿ ವ್ಯವಸ್ಥೆ ಕೂಡ ಮಾಡಲಾಗಿತ್ತು.

34

ಬೆಂಗಳೂರಿನಲ್ಲಿರು ರಾಮಭಂಟ ಹನುಮನ ದೇವಾಲಯಗಳ ಮುಂದೆ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಹೊಸ ಗುಡ್ಡದ ಹಳ್ಳಿಯ ವೀರಾಂಜನೇಯ ಸ್ವಾಮಿ ದೇವಸ್ಥಾನ, ಯಲಹಂಕ, ಬ್ಯಾಟರಾಯನಪುರ, ರಾಜಾಜಿನಗರದ ವೀರಾಂಜನೇಯ ಸ್ವಾಮಿ ದೇವಸ್ಥಾನ, ದೀಪಾಂಜಲಿನಗರದಲ್ಲಿರುವ ಗಾಳಿ ಆಂಜನೇಯ ಸ್ವಾಮಿದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನಗಳ ಮುಂದೆ ಖಾಕಿ ಕಣ್ಗಾವಲು ಇರಿಸಲಾಗಿತ್ತು.

44

ರಾಮಲಲ್ಲಾ ಪ್ರತಿಷ್ಟಾಪನೆ ಹಿನ್ನೆಲೆ  ಭಕ್ತಾದಿಗಳಿಗೆ ಪಾನೀಯ ಪ್ರಸಾದ ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಕೂಡ ಮಾಡಲಾಗಿತ್ತು.

Read more Photos on
click me!

Recommended Stories