ಮೀನುಗಾರನ ಬಲೆಗೆ ಬಿದ್ದ ಅಪರೂಪದ ಕಡಲ ಹಸು, ಆತ್ಮೀಯವಾಗಿ ಮರಳಿ ಸಮುದ್ರಕ್ಕೆ ಬಿಟ್ಟು ಮಾನವೀಯತೆ

Published : Jul 13, 2026, 02:19 PM IST

ತಮಿಳುನಾಡಿನ ಪುದುಕ್ಕೊಟ್ಟೈ ಕರಾವಳಿಯಲ್ಲಿ, ಮೀನುಗಾರನೊಬ್ಬ ತನ್ನ ಬಲೆಗೆ ಸಿಕ್ಕ ಅಪರೂಪದ ಕಡಲ ಹಸುವನ್ನು (ಡುಗಾಂಗ್) ಪ್ರೀತಿಯಿಂದ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾನೆ. ಈ ಮಾನವೀಯ ಘಟನೆಯು, ವನ್ಯಜೀವಿ ಸಂರಕ್ಷಣಾ ಇಲಾಖೆಯು ವರ್ಷಗಳಿಂದ ನಡೆಸಿದ ಜಾಗೃತಿ ಕಾರ್ಯಕ್ರಮಗಳ ಯಶಸ್ಸಿಗೆ ಸಾಕ್ಷಿಯಾಗಿದೆ.

PREV
16
ಆಕಸ್ಮಿಕವಾಗಿ ಬಲೆಗೆ ಬಿದ್ದ ಕಡಲ ಹಸು

ತಮಿಳುನಾಡಿನ ಪುದುಕ್ಕೊಟ್ಟೈ ಕರಾವಳಿಯಲ್ಲಿ ಮೀನುಗಾರನೊಬ್ಬ ತನ್ನ ಬಲೆಗೆ ಆಕಸ್ಮಿಕವಾಗಿ ಬಿದ್ದ ಅಪರೂಪದ ಸಣ್ಣ ಕಡಲ ಹಸುವನ್ನು (ಡುಗಾಂಗ್) ಅತ್ಯಂತ ಜಾಗರೂಕತೆಯಿಂದ ಮರಳಿ ಸಮುದ್ರಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ತಮಿಳು ಭಾಷೆಯಲ್ಲಿ ಅತ್ಯಂತ ಪ್ರೀತಿಯ ಮಾತುಗಳನ್ನು ಆಡುತ್ತಾ ಆತ ಈ ಜಲಚರವನ್ನು ಮುಕ್ತಗೊಳಿಸಿದ ವಿಡಿಯೋ ಈಗ ಪರಿಸರ ಪ್ರೇಮಿಗಳ ಮನಗೆದ್ದಿದೆ.

26
ಅಕ್ಕರೆಯ ವಿದಾಯ ನೀಡಿದ ಮೀನುಗಾರ

ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಆತನ ಬಲೆಗೆ ಈ ಪುಟ್ಟ ಕಡಲ ಹಸು (ಡುಗಾಂಗ್) ಸಿಲುಕಿತ್ತು. ಆದರೆ, ಆ ಮೀನುಗಾರ ಅದನ್ನು ಹಾನಿ ಮಾಡದೇ ಅತ್ಯಂತ ಮೃದುವಾಗಿ, ಪ್ರೀತಿಯ ತಮಿಳು ನುಡಿಗಳನ್ನು ಆಡುತ್ತಾ ಮರಳಿ ಸಮುದ್ರದ ಆಳಕ್ಕೆ ಬಿಟ್ಟಿದ್ದಾನೆ. ಈ ಸುಂದರ ಕ್ಷಣವು ಕೇವಲ ಬರೀ ಆಕಸ್ಮಿಕ ಘಟನೆಯಲ್ಲ, ಇದರ ಹಿಂದೆ ವರ್ಷಗಳ ಕಾಲ ನಡೆದ ನಿರಂತರ ಜಾಗೃತಿಯ ಶ್ರಮ ಅಡಗಿದೆ.

36
ವರ್ಷಗಳ ಕಾಲ ಮೀನುಗಾರರಿಗೆ ನೀಡಿದ ಜಾಗೃತಿ

ಸ್ಥಳೀಯ ಮೀನುಗಾರರೊಂದಿಗೆ ವನ್ಯಜೀವಿ ಸಂರಕ್ಷಣಾ ಇಲಾಖೆಯು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಸಮಾಲೋಚನೆಗಳು ಮತ್ತು ಅವರಲ್ಲಿ ಬಿತ್ತಿದ ನಂಬಿಕೆ ಈಗ ಫಲ ನೀಡಲಾರಂಭಿಸಿದೆ. ಕರಾವಳಿ ಸಮುದಾಯಗಳು ವನ್ಯಜೀವಿ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಈ ಅಭಿಯಾನ ಯಶಸ್ವಿಯಾಗಿದೆ.

46
ಅಪರೂಪದ ಜಲಚರಗಳನ್ನು ಉಳಿಸುವ ಜಾಗೃತಿ

ಸ್ಥಳೀಯ ಮೀನುಗಾರರನ್ನು ಈ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಪ್ರೋತ್ಸಾಹಕ ಮತ್ತು ಉತ್ತೇಜನಾ ಯೋಜನೆಗಳನ್ನು ಪರಿಚಯಿಸಲಾಗಿತ್ತು. ಇದು ಮೀನುಗಾರರಲ್ಲಿ ಹೊಸ ಉತ್ಸಾಹ ತುಂಬಿದ್ದು, ಅಪರೂಪದ ಜಲಚರಗಳು ಜಾಲಕ್ಕೆ ಬಿದ್ದಾಗ ಅವುಗಳನ್ನು ಕೊಲ್ಲದೆ ಸುರಕ್ಷಿತವಾಗಿ ರಕ್ಷಿಸಲು ಪ್ರೇರಣೆಯಾಗಿದೆ.

56
ದಾಖಲೆಯ 21 ಕಡಲ ಹಸುಗಳ (ಡುಗಾಂಗ್) ರಕ್ಷಣೆ

ಈ ನಿರಂತರ ಶ್ರಮದ ಫಲವಾಗಿ, ಕಳೆದ 2023 ರಿಂದ ಇಂದಿನವರೆಗೂ ಒಟ್ಟು 21 ಕಡಲ ಹಸುಗಳನ್ನು (Dugongs) ಮೀನುಗಾರರು ಮತ್ತು ಅರಣ್ಯ ಇಲಾಖೆಯ ಜಂಟಿ ಶ್ರಮದಿಂದ ಯಶಸ್ವಿಯಾಗಿ ರಕ್ಷಿಸಿ ಮರಳಿ ಸಮುದ್ರಕ್ಕೆ ಬಿಡಲಾಗಿದೆ. ಇದು ಕರಾವಳಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ಯಶಸ್ಸು ಎನ್ನಲಾಗಿದೆ.

66
ಹಸಿರು ಹಾಸಿನ ಪುನಶ್ಚೇತನ ಮತ್ತು ಅಧಿಕಾರಿಗಳಿಗೆ ಶ್ಲಾಘನೆ

ಕಡಲ ಹಸುಗಳ ಜೀವನಾಡಿಯಾಗಿರುವ ಸಮುದ್ರದೊಳಗಿನ ಹಸಿರು ಹುಲ್ಲುಗಾವಲನ್ನು (Seagrass) ರಕ್ಷಿಸಲು ಇಲಾಖೆ ಒತ್ತು ನೀಡಿದೆ. ಸದ್ಯ ಸುಮಾರು 3 ಎಕರೆ ವಿಸ್ತೀರ್ಣದ ಸಮುದ್ರದ ಹಸಿರು ಹುಲ್ಲುಗಾವಲನ್ನು ಯಶಸ್ವಿಯಾಗಿ ಪುನಶ್ಚೇತನಗೊಳಿಸಲಾಗಿದ್ದು, ಇದು ಈ ಜಲಚರಗಳ ಆವಾಸಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವುದರಿಂದ ಮಾತ್ರ ವನ್ಯಜೀವಿ ಸಂರಕ್ಷಣೆ ಸಾಧ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಈ ಅದ್ಭುತ ಕಾರ್ಯಕ್ಕಾಗಿ ಪುದುಕ್ಕೊಟ್ಟೈ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CF), ಜಿಲ್ಲಾ ಅರಣ್ಯ ಅಧಿಕಾರಿ (DFO) ಮತ್ತು ಅವರ ಇಡೀ ತಂಡಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Read more Photos on
click me!

Recommended Stories