ಎಲ್ಲರಿಂದಲೂ ತಿನ್ನೋಕೆ ಆಗಲ್ಲ, ಈ ಮೊಟ್ಟೆ ತಿಂದ್ರೆ 7 ವರ್ಷ ಆಯಸ್ಸು ಹೆಚ್ಚಾಗುತ್ತೆ!

Published : Jul 11, 2026, 12:44 PM IST

ಸಲ್ಫರ್ ಹಬೆಯಲ್ಲಿ ಬೇಯಿಸಿದ ಕಪ್ಪು ಮೊಟ್ಟೆಗಳು ಪ್ರಸಿದ್ಧವಾಗಿವೆ. ಈ ಮೊಟ್ಟೆಗಳನ್ನು ತಿಂದರೆ ಏಳು ವರ್ಷ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದ್ದು, ಈ ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.

PREV
15
ಕಪ್ಪು ಬಣ್ಣದ ಮೊಟ್ಟೆ

ಕಪ್ಪು ಬಣ್ಣದ ಮೊಟ್ಟೆಗಳನ್ನು ತಿಂದ್ರೆ ಏಳು ವರ್ಷ ಆಯುಷ್ಯ ಹೆಚ್ಚಾಗುತ್ತೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಮೊಟ್ಟೆಯಲ್ಲಿರುವ ವಿಶೇಷ ಅಂಶಗಳು ಜೀವಿತಾವಧಿ ಹೆಚ್ಚಳಕ್ಕೆ ಕಾರಣವಾಗುತ್ತೆ ಎಂದು ಈ ವೈರಲ್ ವಿಡಿಯೋದಲ್ಲಿ ಹೇಳಲಾಗಿದೆ. ಈ ಮೊಟ್ಟೆಗಳ (ಸಲ್ಫರ್ ಹಾಟ್ ಸ್ಪ್ರಿಂಗ್ ಎಗ್) ವಿಶಿಷ್ಟ ರುಚಿ ಮತ್ತು ವಿಶಿಷ್ಟತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

25
ಜಪಾನ್‌ನ ಒವಾಕುಡಾನಿ ಪ್ರದೇಶ

ಜಪಾನ್‌ನ ಒವಾಕುಡಾನಿ ಪ್ರದೇಶದಲ್ಲಿ ಕಂಡುಬರುವ ಕಪ್ಪು ಬಣ್ಣದ ಮೊಟ್ಟೆಗಳನ್ನು ತಿನ್ನಲು ಜನರು ದೇಶ-ವಿದೇಶಗಳಿಂದ ಆಗಮಿಸುತ್ತಾರೆ. ಒವಾಕುಡಾನಿ ಪ್ರದೇಶದಲ್ಲಿ ಸಲ್ಫರ್ ಗಣಿಗಳು ಮತ್ತು ಬಿಸಿನೀರಿನ ಬುಗ್ಗೆಗಳಿದ್ದು, ಇಲ್ಲಿಯ ಗಣಿಗಾರಿಕೆ ಪ್ರದೇಶ ಪ್ರವಾಸಿತಾಣವಾಗಿ ಬದಲಾಗಿದೆ. ಹಾಗಾಗಿ ಈ ಪ್ರದೇಶ ಸಲ್ಫರ್ ವಾಸನೆಯಿಂದ ಕೂಡಿರುತ್ತದೆ. ಇಲ್ಲಿಯೇ ಸಿದ್ಧವಾಗುವ ಈ ಮೊಟ್ಟೆಗಳು ಅತ್ಯಂತ ಕೆಟ್ಟ ವಾಸನೆಯನ್ನು ಹೊಂದಿರುತ್ತವೆ.

35
ಈ ಮೊಟ್ಟೆಗಳನ್ನು ಹೇಗೆ ಮಾಡ್ತಾರೆ?

ಈ ಮೊಟ್ಟೆಗಳನ್ನು ಗಣಿಗಾರಿಕೆಯ ಹಬೆಯಲ್ಲಿ ಕುದಿಸಲಾಗುತ್ತದೆ. ಈ ಹಬೆಯಲ್ಲಿರುವ ಸಲ್ಫರ್ ಮತ್ತು ಇತರ ಖನಿಜಗಳು ಮೊಟ್ಟೆಗಳಿಗೆ ಕಪ್ಪು ಬಣ್ಣವನ್ನು ನೀಡುತ್ತವೆ. ಹಾಗಾಗಿ ಇವುಗಳನ್ನು ಕಪ್ಪು ಮೊಟ್ಟೆಗಳು (Black Eggs) ಎಂದು ಕರೆಯಲಾಗುತ್ತದೆ. ಆವಿಯಲ್ಲಿ ಬೇಯಿಸುವುದರಿಂದ ಮೊಟ್ಟೆಗಳಲ್ಲಿ ಖನಿಜಾಂಶ ಹೆಚ್ಚಾಗುತ್ತದೆ. ಈ ಮೊಟ್ಟೆಗಳನ್ನು ಸಲ್ಫರ್ ಗಣಿಯ ಬಳಿಯ ಕೆಫೆಯಲ್ಲಿ ಮಾರಾಟ ಮಾಡಲಾಗುತ್ತದೆ. ಸಲ್ಫರ್ ಗಣಿಯ ಹಬೆಯಲ್ಲಿ ಬೇಯಿಸುವದರಿಂದ ಮೊಟ್ಟೆಗಳು ಕೆಟ್ಟ ಅಥವಾ ಒಂದು ರೀತಿಯ ಗಾಢವಾದ ವಾಸನೆಯನ್ನು ಹೊಂದಿರುತ್ತವೆ.

45
ಏಳು ವರ್ಷ ಜೀವಿತಾವಧಿ ಹೆಚ್ಚಳ?

ಈ ವಾಸನೆಯಿಂದ ಎಲ್ಲರಿಂದಗೂ ಕಪ್ಪು ಮೊಟ್ಟೆಗಳನ್ನು ತಿನ್ನಲು ಸಾಧ್ಯವಿಲ್ಲ. ಆದ್ರೆ ಈ ಮೊಟ್ಟೆ ಸೇವನೆ ಏಳು ವರ್ಷ ಜೀವಿತಾವಧಿಯನ್ನು ಹೆಚ್ಚಳ ಮಾಡುತ್ತದೆ ಎಂದು ವೈರಲ್ ವಿಡಿಯೋದಲ್ಲಿ ಹೇಳಲಾಗಿದೆ. ಆದರೆ ವಿಡಿಯೋದಲ್ಲಿ ವ್ಲಾಗರ್ ನೀಡಿದ ಹೇಳಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು, ಜೀವಿತಾವಧಿ ಹೆಚ್ಚಳ ಹೆಸರಿನಲ್ಲಿ ಮೊಟ್ಟೆಗಳನ್ನು ಮಾರಾಟ ಮಾಡುತ್ತಿರಬೇಕು. ಅದನ್ನೇ ವ್ಲಾಗರ್ ಹೇಳಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

55
ಮೊಟ್ಟೆಯ ಬೆಲೆ ಎಷ್ಟು?

ಈ ಕಪ್ಪು ಮೊಟ್ಟೆಗಳು ವಿಭಿನ್ನವಾದ ರುಚಿಯನ್ನು ಹೊಂದಿರುತ್ತವೆ ಎಂದು ತಿಂದವರು ಹೇಳುತ್ತಾರೆ. ಪ್ರತಿ ಮೊಟ್ಟೆಯ ಬೆಲೆ ಸುಮಾರು 500-600 ಜಪಾನೀಸ್ ಯೆನ್ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 300-400 ರೂ. ಆಗುತ್ತದೆ. ಈ ಮೊಟ್ಟೆ ಸೇವನೆ ಜೀವಿತಾವಧಿ ಹೆಚ್ಚಳ ಮಾಡುತ್ತೆ ಎಂಬುವುದು ವೃಜ್ಞಾನಿಕವಾಗಿ ದೃಢಪಟ್ಟಿಲ್ಲ.

Read more Photos on
click me!

Recommended Stories