ಫೆಂಗ್ ಶುಯಿಯ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ಹೆಚ್ಚುತ್ತೆ !

First Published | Sep 27, 2022, 7:39 PM IST

ಫೆಂಗ್ ಶುಯಿ ಚೀನಾದ ವಾಸ್ತು ಶಾಸ್ತ್ರವಾಗಿದೆ. ಫೆಂಗ್ ಮತ್ತು ಶುಯಿ ಎಂದರೆ ಗಾಳಿ ಮತ್ತು ನೀರು ಎಂದರ್ಥ. ಭಾರತೀಯ ವಾಸ್ತು ಶಾಸ್ತ್ರದಂತೆಯೇ, ಫೆಂಗ್ ಶುಯಿ ಕೂಡ ಸಾಕಷ್ಟು ಜನಪ್ರಿಯವಾಗಿದೆ. ಫೆಂಗ್ ಶುಯಿಯಲ್ಲಿ ಉಲ್ಲೇಖಿಸಲಾದ ಅನೇಕ ಪರಿಹಾರೋಪಾಯಗಳ ಸಹಾಯದಿಂದ, ಸಂತೋಷ ಮತ್ತು ಸಮೃದ್ಧಿ ಮನೆಯಲ್ಲಿ ನೆಲೆಸುತ್ತೆ ಮತ್ತು ವಾಸ್ತು ದೋಷಗಳನ್ನು ತೆಗೆದುಹಾಕಲಾಗುತ್ತೆ. ಅದಕ್ಕಾಗಿ ನೀವು ಏನೇನು ಮಾಡಬಹುದು ಅನ್ನೋದನ್ನು ನೋಡೋಣ. 

ವಿಂಡ್ ಚೈಮ್, ಲಾಫಿಂಗ್ ಬುದ್ಧ, ಪ್ಲಾಸ್ಟಿಕ್ ಹೂವು, ಆಮೆ, ನಾಣ್ಯ ಮತ್ತು ಹಡಗು ಇತ್ಯಾದಿಗಳು ಫೆಂಗ್ ಶುಯಿಯಲ್ಲಿ(Feng Shui) ವಿಶೇಷ ಮಹತ್ವವನ್ನು ಹೊಂದಿವೆ. ಅವುಗಳನ್ನು ಮನೆ ಅಥವಾ ಆಫೀಸ್ನಲ್ಲಿ ನಿಗದಿತ ದಿಕ್ಕಿನಲ್ಲಿ ಇರಿಸುವ ಮೂಲಕ, ನೀವು ಜೀವನದಲ್ಲಿ ಸಂತೋಷ ಮತ್ತು ಸಂಪತ್ತನ್ನು ಪಡೆಯಬಹುದು ಎಂದು ನಂಬಲಾಗಿದೆ. ಫೆಂಗ್ ಶುಯಿ ಪರಿಹಾರಗಳ ಬಗ್ಗೆ ಇಲ್ಲಿ ತಿಳಿಯಿರಿ.

ಲಾಫಿಂಗ್ ಬುದ್ಧ (Laughing buddha)- ಲಾಫಿಂಗ್ ಬುದ್ಧನನ್ನು ಫೆಂಗ್ ಶುಯಿಯಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಪ್ರತಿಮೆಯನ್ನು ಡ್ರಾಯಿಂಗ್ ರೂಮಿನ ಮುಂಭಾಗ ಇಟ್ಟರೆ ಸಕಾರಾತ್ಮಕ ಶಕ್ತಿಯು ಮನೆಗೆ ಬರುತ್ತೆ ಎಂದು ನಂಬಲಾಗಿದೆ. ಹಾಗೆಯೇ ಅದೃಷ್ಟವೂ ನಮ್ಮನ್ನು ಹುಡುಕಿಕೊಂಡು ಬರುವುದು.

Tap to resize

ಡೈನಿಂಗ್ ಟೇಬಲ್(Dining table)- ಫೆಂಗ್ ಶುಯಿ ಪ್ರಕಾರ, ವೃತ್ತಾಕಾರದ ಡೈನಿಂಗ್ ಟೇಬಲ್ ಅನ್ನು ಫೆಂಗ್ ಶುಯಿಯಲ್ಲಿ ತುಂಬಾನೆ ಮಂಗಳಕರವೆಂದು ಪರಿಗಣಿಸಲಾಗುತ್ತೆ. ನೀವು ಮನೆಗೆ  ಡೈನಿಂಗ್ ಟೇಬಲ್ ತರುವಾಗ ಕಡಿಮೆ ಸಂಖ್ಯೆಯ ಕುರ್ಚಿಗಳನ್ನು ಜೋಡಿಸಿರುವ ಟೇಬಲ್ ತರಬೇಕು ಎಂಬುದನ್ನು ನೆನಪಿನಲ್ಲಿಡಿ.

ಫೆಂಗ್ ಶುಯಿ ನಾಣ್ಯ(Feng shui coin): ಫೆಂಗ್ ಶುಯಿ ಪ್ರಕಾರ, ಮನೆಯ ಬಾಗಿಲಿನ ಹ್ಯಾಂಡಲ್ ನಲ್ಲಿ ನಾಣ್ಯಗಳನ್ನು ನೇತುಹಾಕುವುದು ಸಂಪತ್ತು ಮತ್ತು ಅದೃಷ್ಟವನ್ನು ತರುತ್ತೆ. ಮೂರು ಹಳೆಯ ಫೆಂಗ್ ಶುಯಿ ನಾಣ್ಯಗಳನ್ನು ಕೆಂಪು ದಾರ ಅಥವಾ ರಿಬ್ಬನ್ ನಲ್ಲಿ ಕಟ್ಟಿ ಬಾಗಿಲಿನ ಹ್ಯಾಂಡಲ್ ನಲ್ಲಿ ನೇತುಹಾಕಬೇಕು. ಹಾಗೆ ಮಾಡೋದರಿಂದ ಹಣ ಗಳಿಕೆಯಲ್ಲಿ  ಪ್ರಯೋಜನವಾಗುತ್ತೆ ಎಂದು ನಂಬಲಾಗಿದೆ.

ಫಿಶ್ ಅಕ್ವೇರಿಯಂ(Fish Aquarium) - ಫೆಂಗ್ ಶುಯಿ ಪ್ರಕಾರ, ಮೀನಿನ ಅಕ್ವೇರಿಯಂ ಪ್ರಗತಿಯ ಸಂಕೇತವಾಗಿದೆ. ಮನೆಯಲ್ಲಿ ಮೀನಿನ ಅಕ್ವೇರಿಯಂ ಅನ್ನು ಇಡುವುದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತೆ. ಹಾಗಾಗಿ ಫಿಶ್ ಅಕ್ವೇರಿಯಂ ಮನೆಗೆ ತರೋದನ್ನು ಮರೀಬೇಡಿ.  

ಬಿದಿರಿನ(Bamboo) ಮರ- ಫೆಂಗ್ ಶುಯಿ ಪ್ರಕಾರ, ಬಿದಿರಿನ ಮರವನ್ನು ಮನೆಯಲ್ಲಿ ಇಡುವುದು ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಕಡಿಮೆ ಮಾಡುತ್ತೆ  ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತೆ. ಹಾಗಾಗಿ ಬಿದಿರಿನ ಮರವನ್ನು ಮನೆಗೆ ತಂದು ಫೆಂಗ್ ಶುಯಿಯ ಮ್ಯಾಜಿಕ್ ನೀವೇ ನೋಡಿ.  

ಉಪ್ಪು(Salt) ಅಥವಾ ಆಲಮ್ - ಫೆಂಗ್ ಶುಯಿ ಪ್ರಕಾರ, ಸ್ನಾನಗೃಹದಲ್ಲಿ ಒಂದು ಬೌಲ್ ಉಪ್ಪು ಅಥವಾ ಆಲಮ್ ಅನ್ನು ಇರಿಸಿ. ಒಂದು ತಿಂಗಳ ನಂತರ ಈ ಬೌಲ್ ನ ಉಪ್ಪು ಅಥವಾ ಅಲಮ್ ಅನ್ನು ಬದಲಾಯಿಸುತ್ತಲೇ ಇರಿ. ಹಾಗೆ ಮಾಡೋದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತೆ ಎಂದು ನಂಬಲಾಗಿದೆ.

Latest Videos

click me!