ನವರಾತ್ರಿಯಲ್ಲಿ ಸಮಯದಲ್ಲಿ ಮನೆಯಲ್ಲಿ ಇದನ್ನ ಮಾಡಿದ್ರೆ ಲಕ್ಷ್ಮಿ ಒಲಿದು ಬರುತ್ತಾಳೆ!

First Published | Sep 24, 2022, 4:58 PM IST

ನವರಾತ್ರಿ ಹಬ್ಬ ಬಂದೇ ಬಿಟ್ಟಿದೆ. ಈ ಸಂಭ್ರಮದಂದು ದೇವಿಯನ್ನು ನವ ದುರ್ಗೆಯ ಅವತಾರದಲ್ಲಿ ಪೂಜಿಸಲಾಗುತ್ತದೆ. ಮನೆಗಳಲ್ಲೂ ಸಹ ನವರಾತ್ರಿ ಪೂಜೆಯನ್ನು ಮಾಡಲಾಗುತ್ತದೆ. ನವರಾತ್ರಿಯಲ್ಲಿ, ದುರ್ಗಾ ಮಾತೆಯ ಮೇಲಿನ ಭಕ್ತಿಯ ಪರಿಣಾಮದಿಂದಾಗಿ, ದುರ್ಗೆಯ ಶಕ್ತಿಯ ಪರಿಣಾಮವಾಗಿ ಸುತ್ತಲೂ ಸಾಕಷ್ಟು ಸಕಾರಾತ್ಮಕ ಶಕ್ತಿ ಉಂಟಾಗುತ್ತೆ, ಹಾಗಾಗಿ, ನೀವು ಮುಖ್ಯ ದ್ವಾರದಲ್ಲಿ ಕೆಲವು ವಾಸ್ತು ತಂತ್ರಗಳನ್ನು ಮಾಡಿದರೆ, ತಾಯಿ ಲಕ್ಷ್ಮಿ ಸ್ವತಃ ನಿಮ್ಮ ಮನೆಗೆ ಬರುತ್ತಾಳೆ. ಅದಕ್ಕಾಗಿ ಏನು ಮಾಡಬೇಕು ನೋಡೋಣ.
 

Navratri vastu tips for money benefit and removing the negativity of the house

ನವರಾತ್ರಿಯಲ್ಲಿ(Navarathri) ವಾಸ್ತುವಿನ ಕೆಲವು ಪರಿಹಾರಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇವುಗಳನ್ನು ಮಾಡೋದರಿಂದ, ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಹೆಚ್ಚಾಗುತ್ತೆ. ಈ ಪರಿಹಾರಗಳು ಯಾವುವು, ನೋಡೋಣ.

Navratri vastu tips for money benefit and removing the negativity of the house

 ನಿಮ್ಮ ಮನೆಯಲ್ಲಿ ಒಂದು ರೀತಿಯ ನಕಾರಾತ್ಮಕತೆ (Negativity) ಇದೆ ಮತ್ತು ನಿಮ್ಮ ಯಾವುದೇ ಕೆಲಸವು ಸರಿಯಾಗಿ ನಡೆಯುತ್ತಿಲ್ಲ ಎಂದು ನಿಮಗೆ ಅನಿಸಿದರೆ, ಈ ಕ್ರಮಗಳನ್ನು ತೆಗೆದುಕೊಳ್ಳಬೇಕು, ಈ ತಂತ್ರಗಳು ತುಂಬಾ ಪರಿಣಾಮಕಾರಿ. ಈ ತಂತ್ರಗಳು ಯಾವುವು ಎಂದು ನೋಡೋಣ. ಮತ್ತು ಅದನ್ನು ಅನುಸರಿಸೋಣ.

Tap to resize

ನವರಾತ್ರಿಯ ಮೊದಲ ದಿನ, ಪೂಜೆಯನ್ನು ಪ್ರಾರಂಭಿಸುವ ಮೊದಲು, ಮಾವಿನ ಎಲೆಗಳು(Mango leaf) ಅಥವಾ ಅಶೋಕ ಎಲೆಗಳನ್ನು ಮನೆಯ ಮುಖ್ಯ ದ್ವಾರದಲ್ಲಿ ಇರಿಸಿ. ಇದನ್ನು ಮಾಡೋದರಿಂದ, ಮುಖ್ಯ ಬಾಗಿಲಿನ ಸುತ್ತಲಿನ ಎಲ್ಲಾ ನಕಾರಾತ್ಮಕತೆಯನ್ನು ತೆಗೆದುಹಾಕಲಾಗುತ್ತೆ .

ನವರಾತ್ರಿಯಲ್ಲಿ ಮೊದಲ ದಿನದಿಂದ ಪ್ರಾರಂಭಿಸಿ, ಪ್ರತಿದಿನ ಮುಖ್ಯ ದ್ವಾರದಲ್ಲಿ ಕುಂಕುಮದೊಂದಿಗೆ ಬಾಗಿಲಿನ ಎರಡೂ ಬದಿಗಳಲ್ಲಿ ಸ್ವಸ್ತಿಕ್(Swasthik) ಬರೆದು ಮತ್ತು ಅರಿಶಿನ ಮಿಶ್ರಿತ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿಯ ಆಗಮನ ಆಗೋದಿಲ್ಲ ಎಂದು ನಂಬಲಾಗಿದೆ.
 

ನವರಾತ್ರಿಯ ಮೊದಲ ದಿನದಂದು, ಮನೆಯ ಒಳಗೆ ಬರುವ ದಿಕ್ಕಿನಲ್ಲಿ ದುರ್ಗಾ (Durga)ಮಾತೆಯ ಹೆಜ್ಜೆಗಳ ಗುರುತುಗಳನ್ನು ಮಾಡಿ. ಇದನ್ನು ಮಾಡಲು, ನೀವು ಕೆಂಪು ಬಣ್ಣವನ್ನು ಬಳಸೋದು ಉತ್ತಮ, ಇದರಿಂದ ಈ ಗುರುತುಗಳು ಅದೇ ರೀತಿ ಉಳಿಯುತ್ತವೆ. ಇವು ಲಕ್ಷ್ಮಿಯ ಆಗಮನವನ್ನು ಸೂಚಿಸುತ್ತವೆ. ಮನೆಗೆ ಒಳಿತಾಗುತ್ತೆ.

ದೀರ್ಘಕಾಲದವರೆಗೆ ಹಣದ ಕೊರತೆಯಿಂದ ಬಳಲುತ್ತಿದ್ದರೆ ಅಥವಾ ಹಣವು ನಿಮ್ಮ ಬಳಿ ನಿಲ್ಲದೇ ಇದ್ದರೆ, ನವರಾತ್ರಿಯಲ್ಲಿ ಲಕ್ಷ್ಮಿ(Lakshmi) ಮಾತೆಯ ದೇವಾಲಯಕ್ಕೆ ಹೋಗಿ ಕೆಂಪು ಬಟ್ಟೆಯಲ್ಲಿ ಸ್ವಲ್ಪ ಕೇಸರಿ ಮತ್ತು ಅರಿಶಿನ ಮತ್ತು ಅಕ್ಕಿಯನ್ನು ಕಟ್ಟಿ ಅರ್ಪಿಸಿ. ಅಲ್ಲಿಂದ ಸ್ವಲ್ಪ ಅಕ್ಕಿಯನ್ನು ತಂದು ನಿಮ್ಮ ಹಣದ ಜಾಗದಲ್ಲಿ ಇಡಿ. ಇದನ್ನು ಮಾಡೋದ್ರಿಂದ ಹಣ ಉಳಿಯುತ್ತೆ.
 

ನವರಾತ್ರಿಯ ಒಂಬತ್ತು ದಿನಗಳವರೆಗೆ ಪ್ರತಿದಿನ ಪೂಜೆ ಮಾಡಿದ ನಂತರ, ತಾಮ್ರದ ಲೋಟದಲ್ಲಿ ನೀರನ್ನು ತುಂಬಿಸಿ ಮತ್ತು ಅದನ್ನು ಮುಖ್ಯ ದ್ವಾರದಲ್ಲಿ(Main door) ಇರಿಸಿ ಮತ್ತು ಅದಕ್ಕೆ ಗುಲಾಬಿ ಎಸಳುಗಳು ಮತ್ತು ಸ್ವಲ್ಪ ಸುಗಂಧದ್ರವ್ಯವನ್ನು ಸೇರಿಸಿ. ಇದನ್ನು ಮಾಡೋದರಿಂದ, ಸುತ್ತಲಿನ ಎಲ್ಲಾ ನಕಾರಾತ್ಮಕತೆಯನ್ನು ತೆಗೆದುಹಾಕಲಾಗುತ್ತೆ ಮತ್ತು ತಾಯಿ ಲಕ್ಷ್ಮಿ ನಿಮ್ಮ ಮನೆಯನ್ನು ಪ್ರವೇಶಿಸುತ್ತಾಳೆ.

ನವರಾತ್ರಿಯ ಯಾವುದೇ ದಿನದಂದು, ಮನೆಯ ಈಶಾನ್ಯ ಮೂಲೆಯಲ್ಲಿ ತುಳಸಿ ಗಿಡವನ್ನು(Tulasi plant) ನೆಡುವುದು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತೆ. ಈ ಎಲ್ಲಾ ನಿಯಮಗಳನ್ನು ಪಾಲಿಸುವುದರಿಂದ ದೇವಿಯ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ. ಅಲ್ಲದೇ ನಿಮ್ಮ ಕೆಲಸಗಳಲ್ಲಿ ಒಳಿತಾಗುತ್ತೆ ಎನ್ನಲಾಗುತ್ತೆ. 

Latest Videos

click me!