Gowri Kannada Serial: ಪ್ರೀತಿಸಿ, ವಿಮಾನದಲ್ಲಿಯೇ ಮದುವೆಯಾದ್ರು; ಫಸ್ಟ್‌ನೈಟ್‌ನಲ್ಲಿ ಮಹಾಸತ್ಯ ಬಯಲು!

Published : Dec 15, 2025, 10:59 AM IST

Gowri Kannada Serial Episode Update: ಕಿರುತೆರೆಯ ಖ್ಯಾತ ನಟಿ ಕಾವ್ಯಶ್ರೀ ಗೌಡ ಹಾಗೂ ಸುಷ್ಮಿತ್ ಜೈನ್, ಕರಣ್, ಸುಷ್ಮಿತಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಗೌರಿ ಧಾರಾವಾಹಿ ತನ್ನ ವಿಭಿನ್ನ ಕಥಾ ಹಂದರದಿಂದ ಈಗಾಗಲೇ ಕನ್ನಡಿಗರ ಮನೆ ತಲುಪಿದೆ. 

PREV
15
ಗೌರಿ ಧಾರಾವಾಹಿ ಕಥೆ ಏನು?

ನಿಸ್ವಾರ್ಥ ಮನಸ್ಸಿನ ಹಳ್ಳಿ ಹುಡುಗಿ ಗೌರಿ, ಸ್ವಾರ್ಥವೇ ತುಂಬಿರುವ ಸಹೋದರಿ ಗೌತಮಿ ಎರಡು ವಿಭಿನ್ನ ಮನಸ್ಸುಗಳ ಕಥೆಯೇ ಗೌರಿ ಧಾರಾವಾಹಿ. ಬದುಕಲ್ಲಿ ಧಿಡೀರ್ ಉಂಟಾದ ಘಟನೆಗಳಿಂದ ಹಳ್ಳಿ ತೊರೆದು ಪೇಟೆಗೆ ಸೇರಿದ ಗೌರಿ ಹೀರೋ ಜಗತ್ತನ್ನು ಸೇರುತ್ತಾಳೆ.

25
ಕಥೆ ಎಲ್ಲಿಂದ ಶುರುವಾಗುವುದು?

ಅಕ್ಕ ಗೌತಮಿ ಪಟ್ಟಣದಲ್ಲೇ ಇದ್ದರೂ ಕೂಡ, ಅವಳಿಂದ ಯಾವುದೇ ಸಹಾಯ ದೊರೆಯದೇ ಸಂಕಷ್ಟಗಳಲ್ಲೇ ಇದ್ದವಳಿಗೆ ಪ್ರೀತಮ್ ಹೆಗಲಾಗುತ್ತಾನೆ. ಅಲ್ಲಿಂದ ಕಥೆ ಶುರುವಾಗುವುದು.

35
ಈಗ ಇರುವ ಟ್ವಿಸ್ಟ್‌ ಏನು?

ಹಣದ ಆಸೆ, ವ್ಯಾಮೋಹ ಹೊಂದಿರುವ ಗೌತಮಿ ಮಾತ್ರ ಅಭಿಮನ್ಯು ವರ್ಧನ್‌ನನ್ನು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಾಳೆ. ಇದೀಗ ಫ್ಲೈಟ್‌ನಲ್ಲಿ ಗೌತಮಿ ಅಭಿಮನ್ಯು ಹೊಸ ಬದುಕಿನ ಬಾಗಿಲು ತಟ್ಟಿದ್ದಾರೆ. ಗೌತಮಿ ಯಾರು ಎನ್ನೋದು ಈಗ ಇರುವ ಟ್ವಿಸ್ಟ್.

45
ಮುಂದೆ ಏನಾಗುವುದು?

ಅಂದಹಾಗೆ ವಿಮಾನದಲ್ಲಿ ಗೌತಮಿ, ಅಭಿಮನ್ಯುನನ್ನು ಮದುವೆ ಆಗುತ್ತಾಳೆ. ಇದು ಕಿರುತೆರೆಯಲ್ಲಿ ಮೊದಲ ಬಾರಿಗೆ ಎನ್ನಬಹುದು. ಮುಂದೆ ಅಕ್ಕ ತಂಗಿ ಒಂದೇ ಮನೆಗೆ ಸೇರ್ತಾರಾ ? ಸ್ವಾರ್ಥ , ನಿಸ್ವಾರ್ಥ ಮನಸ್ಸಿನ ಸಹೋದರಿಯರು ಒಂದೇ ಮನೆ ಸೊಸೆಯಾಗಿ ಬದುಕು ಹೇಗೆ ಸಾಗತ್ತೆ ? ಗೌರಿ ಧಾರಾವಾಹಿಯಲ್ಲಿ ಇನ್ನೇನೆಲ್ಲ ತಿರುವುಗಳು ಪಡೆದುಕೊಳ್ಳತ್ತೆ? ಎಂಬ ಕುತೂಹಲವಿದೆ.

55
ವಿಮಾನದಲ್ಲಿ ಮದುವೆ

ಝೀ ಪವರ್ ವಾಹಿನಿಯಲ್ಲಿ ರಾತ್ರಿ 7:30 ಕ್ಕೆ ಪ್ರಸಾರವಾಗುತ್ತಿರುವ ಗೌರಿ ಧಾರಾವಾಹಿಯಲ್ಲೊಂದು ಅನಿರೀಕ್ಷಿತ ತಿರುವು ಕಂಡಿದೆ. ಬಾನು ಭುವಿಯ ನಡುವೆ ಮೂರು ಗಂಟಿನ ನಂಟು. ಪ್ರೀತಿಸುತ್ತಿದ ಜೋಡಿ ವಿಮಾನದಲ್ಲೇ ಮದುವೆಯಾಗುವ ವಿಭಿನ್ನ ಸನ್ನಿವೇಶ.

Read more Photos on
click me!

Recommended Stories