ಸದ್ದಿಲ್ಲದೆ ಮದುವೆಯಾದ ಬ್ರಹ್ಮಗಂಟು ಧಾರಾವಾಹಿ ನಟಿ Geetha Bharathi Bhat; ಸುಂದರ ಫೋಟೋಗಳಿವು

Published : Dec 15, 2025, 10:30 AM IST

Actress Geetha Bharati Bhat Photos: ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾ ಭಾರತಿ ಭಟ್‌ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹಳ ಖಾಸಗಿಯಾಗಿ ಈ ಮದುವೆ ನಡೆದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್‌ ಆಗುತ್ತಿವೆ. 

PREV
15
ಬ್ರಹ್ಮಗಂಟು ಧಾರಾವಾಹಿ ಕತೆ ಏನು?

ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಪಾತ್ರದಲ್ಲಿ ಅವರು ನಟಿಸಿದ್ದರು. ಗುಂಡಮ್ಮ ಎಂದು ಕರೆಸಿಕೊಳ್ಳುತ್ತಿದ್ದ ಈ ಪಾತ್ರವು ಅನೇಕರಿಗೆ ಇಷ್ಟ ಆಗಿತ್ತು. ತುಂಬ ದಪ್ಪಗಿದ್ದ ಗೀತಾ, ಹ್ಯಾಂಡ್‌ಸಮ್‌ ಹುಡುಗನನ್ನು ಮದುವೆ ಆಗ್ತಾಳೆ. ಆದರೆ ಆ ಹುಡುಗನಿಗೆ ಈ ಮದುವೆ ಇಷ್ಟವಿರೋದಿಲ್ಲ. ಇನ್ನೊಂದು ಕಡೆ ಅವಳ ಆಂತರಿಕ ಸೌಂದರ್ಯಕ್ಕೆ ಮನಸೋತು ಅವನು ಪ್ರೀತಿಯಲ್ಲಿ ಬೀಳುತ್ತಾನೆ. ಈ ಕಥೆ ಅನೇಕ ವರ್ಷಗಳ ಕಾಲ ಪ್ರಸಾರ ಆಗಿತ್ತು.

25
ಬಿಗ್‌ ಬಾಸ್‌ ಶೋನಲ್ಲಿ ಭಾಗಿ

ಬ್ರಹ್ಮಗಂಟು ಧಾರಾವಾಹಿ ಬಳಿಕ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 8ರಲ್ಲಿ ಭಾಗವಹಿಸಿದ್ದರು. ಬಹುಬೇಗ ಅವರು ಆಟದಿಂದ ಹೊರಗಡೆ ಬಂದಿದ್ದರು. ಬೇಗ ಔಟ್‌ ಆಗಿರೋದಿಕ್ಕೆ ಅವರು ಬೇಸರ ಹೊರಹಾಕಿದ್ದರು.

35
ಅಮೃತಧಾರೆ ಧಾರಾವಾಹಿಯಲ್ಲಿ ನಟನೆ

ಅಂದಹಾಗೆ ಇತ್ತೀಚೆಗೆ ಅಮೃತಧಾರೆ ಧಾರಾವಾಹಿಯಲ್ಲಿ ಕಾವೇರಿ ಪಾತ್ರದಲ್ಲಿ ಗೀತಾ ನಟಿಸಿದ್ದರು. ಇದು ಪೋಷಕ ಪಾತ್ರ, ಅಪರೂಪಕ್ಕೆ ಆಗಾಗ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ನಾಯಕಿಯ ಫ್ರೆಂಡ್‌ ಪಾತ್ರ ಇದಾಗಿದೆ.

45
ತೂಕ ಇಳಿಸಿಕೊಂಡರು

ಫಿಟ್‌ನೆಸ್‌ ಕಡೆಗೆ ಗಮನಕೊಟ್ಟಿದ್ದ ಗೀತಾ ಭಾರತಿ ಭಟ್‌ ಅವರು 30kg ತೂಕ ಇಳಿಸಿಕೊಂಡಿದ್ದರು. ಅದಾದ ಬಳಿಕ ಅವರು ಫಿಟ್‌ನೆಸ್‌ ಕುರಿತಂತೆ ಯಾವುದೇ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ, ಸಣ್ಣ ಕೂಡ ಆಗಿರಲಿಲ್ಲ.

55
ಹುಡುಗ ಯಾರು?

ಅಂದಹಾಗೆ ಗೀತಾ ಭಾರತಿ ಭಟ್‌ ಅವರು ಬ್ರಹ್ಮಾವರ ರಾಜಾರಾಮ್‌ ಭಟ್‌ ಅವರನ್ನು ಮದುವೆಯಾಗಿದ್ದಾರೆ. ಆದರೆ ನಿಜಕ್ಕೂ ರಾಜಾರಾಮ್‌ ಭಟ್ ಯಾರು, ವೃತ್ತಿ ಏನು ಎಂಬ ಬಗ್ಗೆ ಮಾಹುತಿ ಇಲ್ಲ. ಅರೇಂಜ್‌ ಮ್ಯಾರೇಜ್?‌ ಲವ್‌ ಮ್ಯಾರೇಜ್?‌ ಎಂಬ ಬಗ್ಗೆ ಮಾಹಿತಿ ಇಲ್ಲ. ಮದುವೆ ಎಲ್ಲಿ ನಡೆದಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ.

Read more Photos on
click me!

Recommended Stories