ಮಕ್ಕಳಾದ್ರೆ ಈ ಥರ ಮಗು ಬೇಕು ಎಂದ ವೈಷ್ಣವಿ ಗೌಡ… ಸಂಬಂಧಗಳ ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಝೀ ಕುಟುಂಬ ವೇದಿಕೆ

First Published | Oct 17, 2024, 9:05 PM IST

ಝೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮಕ್ಕೂ ಮುನ್ನ ನಾಮಿನೇಶನ್ ಪಾರ್ಟಿ ಅದ್ಧೂರಿಯಾಗಿ ನಡೆದಿದ್ದು, ತಾರೆಯರು ಭಾವುಕರಾದ ಕ್ಷಣಗಳು ಮನಮುಟ್ಟುವಂತಿದೆ. 
 

ಝೀವಾಹಿನಿಯ ಅತಿದೊಡ್ಡ ಹಬ್ಬವಾಗಿರುವ ಝೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದ ನಾಮಿನೇಶನ್ ಪಾರ್ಟಿ ಬಹಳ ಸಂಭ್ರಮ ಸಡಗರದಿಂದ ನಡೆದಿದ್ದು, ತಾರೆಯರು ತಮ್ಮ ಅನುಭವವನ್ನು ಮೆಲುಕು ಹಾಕುವ ಮೂಲಕ ತನ್ನ ಸಂಭ್ರಮದ ಜೊತೆಗೆ, ಭಾವನಾತ್ಮಕ ಕ್ಷಣಗಳನ್ನ (emotional moments) ಹಂಚಿಕೊಂಡಿದ್ದಾರೆ. 
 

ಬ್ರಹ್ಮಗಂಟು ಧಾರಾವಾಹಿಯ ದೀಪಾ ಅವರ ಮೊದಲ ಅವಾರ್ಡ್ ಕಾರ್ಯಕ್ರಮ ಇದಾಗಿದ್ದು, ಚೊಚ್ಚಲ ಅವಾರ್ಡ್ ಗಾಗಿ ನಟಿ ಕಣ್ಣೀರಿಟ್ಟರು, ಭೂಮಿಕಾ ಅವರನ್ನ ಸಮಾಧಾನ ಪಡಿಸಿದ್ದಾರೆ. ಅಲ್ಲದೇ ಭೂಮಿಕಾ ನಾನು ಇವತ್ತು ಇಲ್ಲಿ ಇದ್ದೇನೆ ಅಂದ್ರೆ ಅದಕ್ಕೆ ಕಾರಣ ನನ್ನ ತಾಯಿ ಎನ್ನುತ್ತಾ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. 
 

Tap to resize

ಲಕ್ಷ್ಮೀ ನಿವಾಸದ ಭಾವನಾ, ಧಾರಾವಾಹಿಯಲ್ಲಿ ತಮ್ಮ ಅಣ್ಣನ ಪಾತ್ರ ವಹಿಸುವ ವೆಂಕಿಯವರನ್ನ ನೋಡಿ, ಮನಸಾರೆ ಇವರನ್ನ ಅಣ್ಣ ಅಂತ ಕರೆಬೇಕು ಅನಿಸಿದೆ ಎಂದಿದ್ದಾರೆ. ಅಣ್ಣನ ಸ್ಥಾನದಲ್ಲಿರೋ ವೆಂಕಿ ಭಾವನಾರನ್ನ ಅಪ್ಪಿ ಹಣೆಗೊಂದು ಸಿಹಿಮುತ್ತನ್ನ ನೀಡಿ, ನನ್ನ ತಂಗಿ ಎನ್ನುವಂತೆ ಹಾರೈಸಿದ್ದಾರೆ. 
 

ಇನ್ನು ಸೀತಾರಾಮ ಧಾರಾವಾಹಿಯ ಸೀತಾ ಸಿಹಿಯನ್ನು ನೋಡಿ, ನನಗೆ ಮಗು ಅಂತ ಆದ್ರೆ ಅದು ಈ ಥರನೇ ಇರ್ಬೇಕು ಅಂತ ಹೇಳಿದ್ದಾರೆ. ಕೊನೆಗೆ ಸಿಹಿಯ ನಿಜವಾದ ಅಮ್ಮ ಹಾಗೂ ಸೀತಾ ಸಿಹಿ ಎರಡು ಕೆನ್ನೆಗೆ ಜೊತೆಯಾಗಿ ಮುತ್ತನ್ನಿಟ್ಟಿದ್ದಾರೆ. 
 

ನಾಮಿನೇಶನ್ ಪಾರ್ಟಿನೇ ತುಂಬಾನೆ ಅದ್ಧೂರಿಯಾಗಿ ಮಾಡಿರುವ ಝೀ ಕನ್ನಡ ಇನ್ನು ಅವಾರ್ಡ್ಸ್ ಕಾರ್ಯಕ್ರಮ ಇನ್ನೆಷ್ಟು ಅದ್ಧೂರಿಯಾಗಿ ಮಾಡಲಿದೆ ಅಲ್ವಾ? ನಾಮಿನೇಶನ್ ಪಾರ್ಟಿಯಲ್ಲಿ ಜೋಡಿಗಳ ಡ್ಯಾನ್ಸ್, ಮೋಜು, ಮಸ್ತಿ ಎಲ್ಲವೂ ನಡೆದಿದೆ. ‘ಲಕ್ಷ್ಮೀ ನಿವಾಸ’ (Lakshmi Nivasa) ಧಾರಾವಾಹಿಯ ದಿಶಾ ಮದನ್, ಧನಂಜಯ್, ‘ಸೀತಾರಾಮ’ ಧಾರಾವಾಹಿ ಜೋಡಿ ವೈಷ್ಣವಿ ಗೌಡ ಹಾಗೂ ಗಗನ್, ಅಮೃತಧಾರೆ ಛಾಯಾ ಸಿಂಗ್, ರಾಜೇಶ್ ಸೇರಿ ಎಲ್ಲಾ ಧಾರಾವಾಹಿಗಳ ಜೋಡಿಗಳು ಸಂಭ್ರಮದಲ್ಲಿ ಮಿಂಚಿದ್ದಾರೆ. 
 

ಇನ್ನು ಅಕುಲ್ ಬಾಲಾಜಿಯವರು ಈ ಕಾರ್ಯಕ್ರಮ ನಿರೂಪಣೆ ಮಾಡಿದ್ದು, ನಾಮಿನೇಶನ್ ಪಾರ್ಟಿಯಲ್ಲಿ (nomination event) ಆಯ್ಕೆಯಾದವರಿಗೆಲ್ಲರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇಲ್ಲಿ ಪ್ರತಿಯೊಂದು ಕೆಟಗರಿಗಳಲ್ಲೂ ಹೆಚ್ಚಿನ ವೋಟ್ ಗಳ ಮೂಲಕ ಆಯ್ಕೆಯಾದ ನಾಲ್ವರನ್ನು ಮುಂದೆ ನಡೆಯಲಿರುವ ಝೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹೆಸರಿಸಲಿದ್ದು, ಅದರಲ್ಲಿ ಒಬ್ಬರನ್ನು ವಿನ್ನರ್ ಆಗಿ ಆಯ್ಕೆ ಮಾಡಲಾಗುತ್ತದೆ. ನಾಮಿನೇಶನ್ ಕಾರ್ಯಕ್ರಮದ ಪ್ರಸಾರ ಇದೇ ಅಕ್ಟೋಬರು 19 ಮತ್ತು 20 ರಂದು ನಡೆಯಲಿದೆ. 
 

Latest Videos

click me!