ತೆಲುಗು ಝೀ ಕುಟುಂಬಂ ವೇದಿಕೆ ನೀಡಿದ ಸ್ಪೆಷಲ್ ಗಿಫ್ಟ್ ನೋಡಿ ಕಣ್ಣೀರಿಟ್ಟ ನಮ್ಮನೆ ಯುವರಾಣಿ ನಟ ರಘು

Published : Oct 17, 2024, 12:15 PM ISTUpdated : Oct 17, 2024, 12:19 PM IST

ನಮ್ಮನೆ ಯುವರಾಣಿಯಲ್ಲಿ ಸಾಕೇತ್ ರಾಜ್ ಗುರು ಆಗಿ ಜನಪ್ರಿಯತೆ ಪಡೆದ ನಟ ರಘು ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.  ಇದೀಗ ಝೀಕುಟುಂಬ ವೇದಿಕೆ ನೀಡಿದ ವಿಶೇಷ ಉಡುಗೊರೆ ನೋಡಿ ನಟ ಭಾವುಕರಾಗಿದ್ದಾರೆ.   

PREV
18
ತೆಲುಗು ಝೀ ಕುಟುಂಬಂ ವೇದಿಕೆ ನೀಡಿದ ಸ್ಪೆಷಲ್ ಗಿಫ್ಟ್ ನೋಡಿ ಕಣ್ಣೀರಿಟ್ಟ ನಮ್ಮನೆ ಯುವರಾಣಿ ನಟ ರಘು

ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಒಂದಾದ ನಮ್ಮನೆ ಯುವರಾಣಿಯಲ್ಲಿ (Nammane Yuvarani) ಸಾಕೇತ್ ರಾಜ್ ಗುರು ಆಗಿ ಜನಪ್ರಿಯತೆ ಪಡೆದ ನಟ ರಘು ಆಲಿಯಾಸ್ ರಾಘವೇಂದ್ರ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ತೆಲುಗು ಕಿರುತೆರೆಯ ಫೇವರಿಟ್ ಹೀರೋ ಕೂಡ ಆಗಿದ್ದಾರೆ. 
 

28

ರಘು ಸದ್ಯ ತೆಲುಗಿನ ಜನಪ್ರಿಯ ಧಾರಾವಾಹಿಯಾದ ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿಯಲ್ಲಿ ನಾಯಕ ಮಿತ್ರ ನಂದನ್ ಆಗಿ ನಟಿಸುತ್ತಿದ್ದಾರೆ. ಈ ಸೀರಿಯಲ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ರಘು ತೆಲುಗು ಕಿರುತೆರೆಯ ಮೋಸ್ಟ್ ಲವಿಂಗ್ ನಾಯಕನಾಗಿ ಹೊರಹೊಮ್ಮಿದ್ದಾರೆ. 
 

38

ಕನ್ನಡದಲ್ಲಿ ಝೀ ಕುಟುಂಬ ಅವಾರ್ಡ್ಸ್ ಗೆ (Zee Kutumbam awards) ಕ್ಷಣಗಣನೆ ಆರಂಭವಾಗಿದೆ. ಅದಕ್ಕಾಗಿ ಎಲ್ಲಾ ರೀತಿಯಲ್ಲಿ ತಯಾರಿ ಕೂಡ ನಡೆಯುತ್ತಿದೆ. ಹಾಗೆಯೇ ತೆಲುಗಿನಲ್ಲೂ ಕೂಡ ಝೀ ಕುಟುಂಬಂ ಅವಾರ್ಡ್ ಕಾರ್ಯಕ್ರಮ ನಡೆದಿತ್ತು, ಕಾರ್ಯಕ್ರಮದ ಒಂದಿಷ್ಟು ಪ್ರೊಮೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. 
 

48

ಇತ್ತೀಚೆಗೆ ಒಂದು ಪ್ರೊಮೊವನ್ನು ಝೀ ತೆಲುಗು ಪ್ರಸಾರ ಮಾಡಿದ್ದು, ಅದರಲ್ಲಿ ನಟ ರಘುವಿಗೆ ಝೀ ಕುಟುಂಬಂ ವೇದಿಕೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಆ ಸ್ಪೆಷಲ್ ಗಿಫ್ಟ್ ನೋಡಿ ರಘು ಭಾವುಕರಾಗಿದ್ದು, ಕಣ್ಣೀರಿಟ್ಟಿದ್ದಾರೆ, ನೋಡುಗರ ಕಣ್ಣಲ್ಲೂ ನೀರು ತಂದಿದ್ದಾರೆ. 
 

58

ಅಷ್ಟಕ್ಕೂ ಝೀ ಕುಟುಂಬಂ ವೇದಿಕೆ ರಘುಗೆ ನೀಡಿದ ಗಿಫ್ಟ್ ಆದ್ರೂ ಏನು ಗೊತ್ತಾ? ರಘು ತಂದೆಯ ಪುತ್ಥಳಿ. ಹೌದು ಪ್ರಶಸ್ತಿ ಕೈಯಲ್ಲಿ ಹಿಡಿದಿರುವ ರಘುವಿನ ಬಗ್ಗೆ ಮಾತನಾಡುತ್ತಾ ಆಂಕರ್ ಹೇಳ್ತಾರೆ, ಯಾವಾಗ್ಲೂ ನಮ್ಮ ಬಗ್ಗೆ ಯೋಚನೆ ಮಾಡೋ ರಘುವಿಗೆ ನಮ್ಮ ಕಡೆಯಿಂದ ಗಿಫ್ಟ್ ಎನ್ನುತ್ತಾ, ಕಣ್ಣಿಗೆ 3ಡಿ ವಿಆರ್ ನ್ನು ಕಟ್ಟಿದ್ದಾರೆ. ಅದರಲ್ಲಿ ರಘು ತಮ್ಮ ತಂದೆಯ ಜೊತೆಗಿರುವ ಫೋಟೊಗಳು ಪ್ರಸಾರವಾಗಿವೆ. 
 

68

ಅಷ್ಟೇ ಅಲ್ಲ ರಘುವಿಗೆ ಉಡುಗೊರೆಯಾಗಿ ಅವರ ತಂದೆಯ ಪುತ್ಥಳಿಯನ್ನು ನೀಡಿದ್ದಾರೆ. ಇದನ್ನ ನೊಡಿ ಭಾವುಕರಾದ ರಘು ತಂದೆಯನ್ನು ನೆನೆಯುತ್ತಾ ತಮಗೆ ಎಷ್ಟೇ ಕಷ್ಟ ಇದ್ದರೂ ಅದನ್ನ ಎದುರಿಗೆ ತೋರಿಸದೇ ನಮ್ಮನ್ನ ನೋಡ್ಕೊಂಡಿದ್ದಾರೆ, ಅವರನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಅವರೇ ನಮ್ಮನ್ನ ಬಿಟ್ಟು ಹೋದರು ಎಂದು ಕಣ್ಣೀರಿಟ್ಟರು ರಘು. 
 

78

ಜೊತೆಗೆ ಅಪ್ಪನ ಪುತ್ಥಳಿ ಜೊತೆ ತಮಗೆ ಸಿಕ್ಕ ಪ್ರಶಸ್ತಿಯನ್ನು ಇಟ್ಟು, ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಅಪ್ಪನನ್ನು ನೆನೆದು ಭಾವುಕರಾದ ರಘುವನ್ನ ನೋಡಿ, ಕಾರ್ಯಕ್ರಮಕ್ಕೆ ಆಗಮಿಸಿದ ಹಲವರು ಕಣ್ಣಲ್ಲೂ ಕಣ್ಣೀರು ಧಾರೆಯಾಗಿ ಹರಿದು ಬಂದಿತ್ತು. ಒಟ್ಟಲ್ಲಿ ಝೀ ತೆಲುಗು ಕುಟುಂಬಂ ವೇದಿಗೆ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. 

88

ಕನ್ನಡ ಕಿರುತೆರೆಗೆ ರಾಧಾ ಕಲ್ಯಾಣ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟ ರಘು, ಬಳಿಕ ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿ ರಂಗೇಗೌಡರಾಗಿ ಮಿಂಚಿದ್ದರು, ಈ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸಿದ ನಟಿ ಅಮೃತಾ ರಾಮಮೂರ್ತಿ ಅವರನ್ನ ಮದುವೆಯಾದರು, ಬಳಿಕ ನಮ್ಮನೆ ಯುವರಾಣಿ ಸೀರಿಯಲ್ ನಲ್ಲಿ ಸಾಕೇತ್ ಪಾತ್ರದ ಮೂಲಕ ಜನಮನ ಗೆದ್ದರು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories