ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಎಂದರೆ ಅದು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್. ಅದರಲ್ಲೂ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರ ಅಂದ್ರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ. ಡಿಸಿ ಆಗುವ ತನ್ನ ಕನಸನ್ನು ನನಸಾಗಿಸಿ, ಹಲವರಿಗೆ ಪ್ರೇರಣೆಯಾದ ಸ್ನೇಹಾ ಪಾತ್ರದ ನಟಿ ಸಂಜನಾ ಬುರ್ಲಿ ಇದೀಗ ಶಾಕಿಂಗ್ ನ್ಯೂಸ್ ಒಂದನ್ನ ನೀಡಿದ್ದಾರೆ..
ಹೌದು, ಸಂಜನಾ ಬುರ್ಲಿ (Sanjana Burli) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವಂತಹ ಒಂದು ಪೋಸ್ಟ್ ವೀಕ್ಷಕರಲ್ಲಿ ಗೊಂದಲ ಸೃಷ್ಟಿಸಿದ್ದು, ನಟಿ ಸ್ನೇಹಾ ಪಾತ್ರಕ್ಕೆ ಸಂಜನಾ ಬುರ್ಲಿ ಗುಡ್ ಬೈ ಹೇಳುತ್ತಿದ್ದಾರ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ನಟಿಯ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಏನಿದೆ?
ಸಂಜನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಫೋಟೊ ಶೇರ್ ಮಾಡಿದ್ದು, ಅದಕ್ಕೊಂದು ಕ್ಯಾಪ್ಶನ್ ಕೂಡ ಹಾಕಿದ್ದಾರೆ. ಅದರಲ್ಲಿ ನಟಿ ಕೆಲವೊಂದು ಗುಡ್ ಬೈ ಗಳು ಹೇಳೋದಕ್ಕೆ ತುಂಬಾನೆ ಕಷ್ಟ, ಆದರೆ ಒಬ್ಬರ ಬೆಳವಣಿಗೆಗೆ ಅದು ತುಂಬಾನೆ ಮುಖ್ಯ. ಏನು ಹೇಳ್ತೀರಾ ಅಂತ ಪ್ರಶ್ನೆ ಮಾಡಿದ್ದಾರೆ.
ಸಂಜನಾರ ಈ ಪೋಸ್ಟ್ ಪುಟ್ಟಕ್ಕನ ಮಕ್ಕಳು ವೀಕ್ಷಕರಲ್ಲಿ ಗೊಂದಲ ಹುಟ್ಟಿಸಿದೆ. ನಿಜವಾಗಿಯೂ ಸ್ನೇಹಾ ಸೀರಿಯಲ್ ಬಿಡ್ತಿದ್ದಾರ ಅಂತ ಕೇಳ್ತಿದ್ದಾರೆ ಜನ. ಅಷ್ಟೇ ಅಲ್ಲ ಸಂಜನಾ ಅವರೇ ಈ ಪಾತ್ರದಲ್ಲಿ ಮುಂದುವರೆಯಬೇಕು ಎಂದು ವಿನಂತಿ ಕೂಡ ಮಾಡ್ತಿದ್ದಾರೆ, ಸಂಜನಾ ಇಲ್ಲದೇ ಸೀರಿಯಲ್ ನೋಡೋದಕ್ಕೆ ಸಾಧ್ಯಾನೆ ಇಲ್ಲ ಅಂತಾನೂ ಹೇಳಿದ್ದಾರೆ.
ಅದಷ್ಟೇ ಅಲ್ಲ ಈ ಸೀರಿಯಲ್ ಟಿ ಆರ್ ಪಿ ನೋಡಿದ್ರೆ ನಮ್ ಸ್ನೇಹ ಕಂಠಿ ಜೋಡಿ ನಾ ಜನ ಎಷ್ಟು ಇಷ್ಟ ಪಡ್ತಿದಾರೆ ಅಂತ ಗೊತ್ತಾಗುತ್ತೆ. ಆದರೆ ಈ ಚಾನೆಲ್ ಅವರು ನಮ್ ಸ್ನೇಹ ಪಾತ್ರವನ್ನ ಮುಗಿಸ್ತಿದ್ದಾರೆ. ಥು ಕರ್ಮ ಇನ್ನು ಯಾರು ನೋಡುತ್ತಾರೆ ನಿಮ್ ಈ ಸೀರಿಯಲ್. ನಮ್ ಸ್ನೇಹ ಇರೋವರೆಗೆ ಮಾತ್ರ ನಾವು ಸೀರಿಯಲ್ ನೋಡೋದು ಎಂದು ಅಭಿಮಾನಿಯೊಬ್ಬರು ಹೇಳಿಕೊಂಡಿದ್ದಾರೆ.
ಮತ್ತೊಬ್ಬರು ಕೂಡ ಸೋಶಿಯಲ್ ಮೀಡಿಯಾದಲ್ಲಿ (social media) ಕಾಮೆಂಟ್ ಮಾಡಿ ಈ ಡೈರೆಕ್ಟರ್ ಜಗದೀಶ್ ಯಾಕೆ ತನ್ನ ಎಲ್ಲಾ ಸೀರಿಯಲ್ ಹೀರೋ, ಹೀರೋಯಿನ್ ಗಳನ್ನ ಸಾಯಿಸ್ತಾರೋ ಗೊತ್ತಿಲ್ಲ. ಅಶ್ವಿನಿ ನಕ್ಷತ್ರದಲ್ಲಿ ಅಶ್ವಿನಿನ ಸಾಯಿಸಿದ್ರು, ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಅನಿರುದ್ಧ್ ಅವರನ್ನ ಸೀರಿಯಲ್ ನಿಂದ ತೆಗೆದ್ರು, ಈಗ ಈ ಸೀರಿಯಲ್ ನಿಂದ ಸ್ನೇಹಾ ಕ್ಯಾರೆಕ್ಟರನ್ನೆ ಎಂಡ್ ಮಾಡ್ತಿದ್ದಾರೆ. ಇನ್ನು ಸಹನಾಳನ್ನೆ ಹೀರೋಯಿನ್ ಮಾಡಿ, ಅವಳ ಮೇಲೆ ಕಥೆ ತೆಗೆದುಕೊಂಡು ಹೋಗಿ, ಆದ್ರೆ ಹೊಸ ಹುಡುಗಿಯನ್ನ ಕರೆದುಕೊಂಡು ಬಂದು, ಕಂಠಿಗೆ ಗಂಟು ಹಾಕ್ಬೇಡಿ ಎಂದು ಕೇಳಿಕೊಂಡಿದ್ದಾರೆ.
ನಟಿ ಸಂಜನಾ ಬುರ್ಲಿ ಪುಟ್ಟಕ್ಕನ ಮಗಳಾಗಿ, ಸ್ನೇಹಾ ಪಾತ್ರದ ಮೂಲಕ ಕನ್ನಡಿಗರ ಜನಮನ ಗೆದ್ದಿದ್ದರು, ಕಂಠಿ ಮತ್ತು ಸ್ನೇಹಾ ಲವ್ ಸ್ಟೋರಿ, ಸ್ನೇಹಾಳ ಸ್ಟ್ರಾಂಗ್ ಕ್ಯಾರೆಕ್ಟರ್, ಕನಸನ್ನು ನನಸಾಗಿಸಲು ಪಣತೊಡುವ ರೀತಿ ಹಾಗೂ ಕೊನೆಗೆ ಡಿಸಿಯಾಗಿ ಅಧಿಕಾರಿ ಸ್ವೀಕರಿಸಿದ್ದು, ಎಲ್ಲವೂ ಜನರಿಗೆ ಪ್ರೇರಣೆ ನೀಡಿತ್ತು. ಇದ್ದರೆ ಸ್ನೇಹಾ ರೀತಿ ಇರಬೇಕು ಎನ್ನುತ್ತಿದ್ದರು. ಸ್ನೇಹಾ ಪಾತ್ರದಿಂದಾಗಿ ಸಂಜನಾಗೆ ಅಪಾರ ಅಭಿಮಾನಿಗಳು ಸಹ ಹುಟ್ಟಿಕೊಂಡಿದ್ದರು. ನಿಜಕ್ಕೂ ಸ್ನೇಹಾ ಪಾತ್ರ ಕೊನೆಯಾಗುತ್ತಾ ಅನ್ನೋದನ್ನ ಸೀರಿಯಲ್ ನೋಡಿನೆ ತಿಳ್ಕೋಬೇಕು.