ಬೆಸ್ಟ್ ಅಪ್ಪ ಪ್ರಶಸ್ತಿಯನ್ನು 'ಬ್ರಹ್ಮಗಂಟು' ಧಾರಾವಾಹಿಯ (Bramhagantu serial) ಮಗಳು ದೀಪಾಳ ಮುದ್ದಿನ ಪೋಲಿಸಪ್ಪ ಜಯರಾಮ್ ತಮ್ಮದಾಗಿಸಿಕೊಂಡರು.
ತಮ್ಮ ತುಂಬು ಕುಟುಂಬವನ್ನು ಒಳ್ಳೆಯ ರೀತಿಯ ಸಂಭಾಳಿಸಿ ಕೊಂಡು ಹೋಗುವ 'ಲಕ್ಷ್ಮೀ ನಿವಾಸ'ದ ಲಕ್ಷ್ಮೀ ಬೆಸ್ಟ್ ಅಮ್ಮ ಪ್ರಶಸ್ತಿ ಪಡೆದರು.
ಅಪ್ಪ ಅಮ್ಮನ ಖುಷಿಗಾಗಿ ಯಾವಾಗಲೂ ತನ್ನ ದುಃಖವನ್ನು ಮುಚ್ಚಿಡುವ 'ಬ್ರಹ್ಮಗಂಟು' ಧಾರಾವಾಹಿಯ ದೀಪಾ ಬೆಸ್ಟ್ ಮಗಳು ಅವಾರ್ಡ್ ಪಡೆದರು.
'ಲಕ್ಷ್ಮೀ ನಿವಾಸ'ದ (Lakshmi Nivasa) ವೆಂಕಿ ಮಾತುಗಳನ್ನೇ ಆಡದೇ, ತಮ್ಮ ನಟನೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವ ಮೂಲಕ ಬೆಸ್ಟ್ ಮಗ ಅವಾರ್ಡ್ ಪಡೆದರು.
ಸೊಸೆಯಂದಿರನ್ನು ತಾಯಿಯಂತೆ ಪ್ರೀತಿಸುವ, ಎಲ್ಲರಿಗೂ ತಾಯಿಯ ಪ್ರೀತಿಯನ್ನು ನೀಡುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ತುಳಸಿ ಬೆಸ್ಟ್ ಅತ್ತೆ ಪ್ರಶಸ್ತಿ ಪಡೆದರು.
ಬೆಸ್ಟ್ ಮಾವ ಪ್ರಶಸ್ತಿಯನ್ನು ಸೊಸೆಯಲ್ಲಿ ಮಗಳನ್ನು ಕಾಣುವ 'ಶ್ರೀರಸ್ತು ಶುಭಮಸ್ತು' (Srirastu Shubhamastu serial) ಧಾರಾವಾಹಿಯ ಮಾಧವ ತಮ್ಮದಾಗಿಸಿಕೊಂಡಿದ್ದಾರೆ.
ಒಬ್ಬ ಉತ್ತಮ ಸೊಸೆ ಅಂದ್ರೆ ಹೇಗಿರಬೇಕು ಅನ್ನೋದಕ್ಕೆ ಉದಾಹರಣೆ 'ಲಕ್ಷ್ಮೀ ನಿವಾಸ'ದ ಹಿರಿಯ ಸೊಸೆ ವೀಣಾ , ಅವರು ಬೆಸ್ಟ್ ಸೊಸೆ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಅತ್ತೆ ಮಾವಂದಿರ ಮುದ್ದಿನ ಅಳಿಯನಾಗಿರುವ 'ಅಮೃತಧಾರೆ'ಯ (Amruthadhare serial) ಗೌತಮ್ ದಿವಾನ್ ಬೆಸ್ಟ್ ಅಳಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ವರ್ಷದ ಬೆಸ್ಟ್ ಫೈಂಡ್ ಪ್ರಶಸ್ತಿಯನ್ನು 'ಲಕ್ಷ್ಮೀ ನಿವಾಸ'ದ ಭಾವನಾ & ಜಾಹ್ನವಿ ಹಂಚಿಕೊಂಡಿದ್ದಾರೆ. ಇವರಿಬ್ಬರು ಝೀ ಕನ್ನಡಕ್ಕೆ ಸಿಕ್ಕಂತಹ ಬೆಸ್ಟ್ ನಟರು ಅನ್ನೋದು ನಿಜ.
ಇನ್ನು ಅಮ್ಮ ಅಪ್ಪನಿಗೆ ಉತ್ತಮ ಮಗಳಾಗಿ, ಗಂಡನಿಗೆ ಉತ್ತಮ ಹೆಂಡತಿಯಾಗಿ, ಗೆಳತಿಯಾಗಿ, ಎಲ್ಲಾ ಪಾತ್ರಕ್ಕೂ ಜೀವತುಂಬುದ 'ಅಮೃತಧಾರೆ'ಯ ಭೂಮಿಕಾ ಬೆಸ್ಟ್ ನಾಯಕ ನಟಿ ಅವಾರ್ಡ್ ಪಡೆದರು.
Zee5 ಜನಪ್ರಿಯ ನಾಯಕ ನಟಿ ಅವಾರ್ಡ್ ನ್ನು 'ಸೀತಾರಾಮ' ಧಾರಾವಾಹಿಯ (Seeta Rama Serial) ಸೀತಾ ತಮ್ಮದಾಗಿಸಿಕೊಂಡಿದ್ದಾರೆ.
ಬೆಸ್ಟ್ ಹಾಸ್ಯನಟಿ ಪ್ರಶಸ್ತಿಯನ್ನು ಹಿರಿಯ ನಟಿ 'ಲಕ್ಷ್ಮಿ ನಿವಾಸ'ದ ಲಕ್ಷ್ಮಿದೇವಮ್ಮ ತಮ್ಮದಾಗಿಸಿಕೊಂಡರು. ಇವರು ತಮ್ಮ ಪಂಚಿಂಗ್ ಡೈಲಾಗ್ ಮೂಲಕ ಆವಾಗವಾಗ ನಗಿಸುತ್ತಲೇ ಇರುತ್ತಾರೆ.
ಇನ್ನು ಬೆಸ್ಟ್ ಹಾಸ್ಯನಟ ಅವಾರ್ಡ್ ನ್ನು 'ಅಮೃತಧಾರೆ'ಯ ಆನಂದ್ ತಮ್ಮದಾಗಿಸಿಕೊಂಡಿದ್ದಾರೆ. ಆನಂದ್ ತೆರೆ ಮೇಲೆ ಕಂಡ್ರೆ ಅಲ್ಲಿ ನಗುವಿಗೆ ಕೊರತೆಯೇ ಇರೋದಿಲ್ಲ.