ಮತ್ತೊಮ್ಮೆ ‘ನಾ ನಿನ್ನ ಬಿಡಲಾರೆ’ ಸೀರಿಯಲ್ ಮೂಲಕ ದೆವ್ವವಾಗಿ ಬರ್ತಿದ್ದಾರೆ ವಿಕ್ರಾಂತ್ ರೋಣ ಬೆಡಗಿ

First Published | Oct 25, 2024, 9:48 PM IST

ಯಶೋಧ , ವಿಕ್ರಾಂತ್ ರೋಣ ಮೂಲಕ ಜನಪ್ರಿಯತೆ ಗಳಿಸಿದ ಬೆಡಗಿ ನೀತಾ ಅಶೋಕ್ ಇದೀಗ ಝೀ ಕನ್ನಡದ ಹೊಸ ಸೀರಿಯಲ್ ನಲ್ಲಿ ನೀತಾ ದೆವ್ವವಾಗಿ ಬರ್ತಿದ್ದಾರೆ. 

ಯಶೋಧ ಸೀರಿಯಲ್ ಮೂಲಕ ಜನಮನ ಗೆದ್ದು, ವಿಕ್ರಾಂತ್ ರೋಣ ಮೂಲಕ ಜನಪ್ರಿಯತೆ ಗಳಿಸಿದ ಬೆಡಗಿ ನೀತಾ ಅಶೋಕ್ (Neetha Ashok) ಇದೀಗ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡೋದಕ್ಕೆ ರೆಡಿಯಾಗಿದ್ದಾರೆ. ಝೀ ಕನ್ನಡದ ಹೊಸ ಸೀರಿಯಲ್ ನಲ್ಲಿ ನೀತಾ ನಟಿಸುತ್ತಿದ್ದಾರೆ. 
 

ನಾ ನಿನ್ನ ಬಿಡಲಾರೆ (Naa Ninna Bidalaare) ಬಿಡಲಾರೆ ಸಿನಿಮಾ ಜನಪ್ರಿಯತೆ ನಿಮಗೆ ಗೊತ್ತೇ ಇದೆ. ಈ ಹಿಂದೆ ಇದೇ ಝೀ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ ಹೆಸರಿನ ಸೀರಿಯಲ್ ಪ್ರಸಾರವಾಗುತ್ತಿತ್ತು, ಆ ಧಾರಾವಾಹಿಯಲ್ಲೂ ನಾಯಕಿಯಾಗಿ ನೀತಾ ಅಶೋಕ್ ನಟಿಸಿದ್ದರು. ಇದೀಗ ಮತ್ತೆ ಅದೇ ಹೆಸರಿನ ಸೀರಿಯಲ್ ನಲ್ಲಿ ನಟಿ ನಟಿಸುತ್ತಿದ್ದಾರೆ. 
 

Tap to resize

ಹಿಂದೆ ಕೂಡ ನಾ ನಿನ್ನ ಬಿಡಲಾರೆ ಎನ್ನುವ ಹಾರರ್ ಕಥೆಯಲ್ಲಿ (Horror Story) ನಟಿಸಿದ್ದರು. ಆ ಧಾರಾವಾಹಿಯಲ್ಲಿ ನಾಯಕಿಯಾಗಿದ್ದ ನೀತಾ ಅಶೋಕ್ ಗೆ ದೀಪಕ್ ನಾಯಕರಾಗಿದ್ದರು. ಹಿಂದಿನ ಧಾರಾವಾಹಿಯಲ್ಲಿ ಭೂತವನ್ನು ನಾಶ ಮಾಡಲು ಪ್ರಯತ್ನಿಸುವ ನಾಯಕಿಯಾಗಿ ನೀತಾ ಕಾಣಿಸಿಕೊಂಡಿದ್ದರೆ. ಈ ಬಾರಿ ತಾವೇ ಸ್ವತಃ ಭೂತವಾಗಿ ಕಾಣಿಸಿಕೊಂಡಿದ್ದಾರೆ. 
 

ಈಗಾಗಲೇ ಸೀರಿಯಲ್ ಪ್ರೊಮೋ ಬಿಡುಗಡೆಯಾಗಿದ್ದು, ವೀಕ್ಷಕರು ಸೀರಿಯಲ್ ನೋಡೋದಕ್ಕೆ ಉತ್ಸಾಹದಿಂದ ಕಾಯ್ತಿದ್ದಾರೆ. ಮಡಿದ ಮೇಲೂ ಮಿಡಿಯುವುದು ಅಮ್ಮನ ಪ್ರೀತಿ! ಎನ್ನುವ ಸಬ್ ಟೈಟಲ್ ನೊಂದಿಗೆ ಆರಂಭವಾಗುವ ಈ ಸೀರಿಯಲ್ ನಲ್ಲಿ ತಾನು ಸಾವನ್ನಪ್ಪಿದ್ದರೂ ಮಗುವಿಗೆ ಪ್ರೀತಿ ಕೊಡುವ ತಾಯಿಯಾಗಿ ನೀತಾ ಅಶೋಕ್ ಕಾಣಿಸಿಕೊಂಡಿದ್ದು, ಈ ವಿಡಿಯೋ ತುಣುಕು ಇದೀಗ ಜನ ಮನ ಗೆದ್ದಿದೆ. 
 

ಮಗಳಾಗಿ ಚುಕ್ಕಿ ತಾರೆ ಧಾರಾವಾಹಿಯ ಚುಕ್ಕಿ ಮಹಿತಾ (Mahitha) ನಟಿಸುತ್ತಿದ್ದಾರೆ. ಪುಟಾಣಿ ಮಲಗಿದ್ದರೆ, ದೆವ್ವವಾಗಿರುವ ತಾಯಿ ಮಗುವಿನ ಬಳಿ ಕುಳಿತು ಮಗುವನ್ನು ಮಲಗಿಸುತ್ತಾ, ಆಕೆ ಪುಟ್ಟ ಮಗುವಾಗಿರುವ ದಿನಗಳನ್ನು ನೆನೆಪು ಮಾಡಿಕೊಳ್ಳುತ್ತಾಳೆ ದೆವ್ವವಾಗಿರುವ ತಾಯಿ. ಆಕೆ ಸಾವನ್ನಪ್ಪಿರೋದು ಹೇಗೆ ಅನ್ನೋದು ಸೀರಿಯಲ್ ನೋಡಿದ್ರೇನೆ ತಿಳಿಬೇಕು. 
 

ಈಗಾಗಲೇ ಕಲರ್ಸ್ ಕನ್ನಡದಲ್ಲಿ ದೆವ್ವದ ಕಥೆಯ ಪ್ರೊಮೋ ರಿಲೀಸ್ ಆಗಿ ಸದ್ದು ಮಾಡಿದ್ರೆ, ಇತ್ತ ಕಡೆ ಝೀ ಕನ್ನಡ ಕೂಡ ಪ್ರೊಮೋ ರಿಲೀಸ್ ಮಾಡಿದೆ. ಶೀಘ್ರದಲ್ಲಿ ಸೀರಿಯಲ್ ಆರಂಭವಾಗಲಿದೆ ಅಂತಾನೂ ಹೇಳಿದೆ. ಆದರೆ ಯಾವಾಗ ಅನ್ನೋದು ಗೊತ್ತಿಲ್ಲ. ಇನ್ನು ಸೀರಿಯಲ್ ಆರಂಭವಾಗಬೇಕಾದ್ರೆ, ಒಂದು ಸೀರಿಯಲ್ ಮುಗಿಯಲೇಬೇಕು. ಹಾಗಿದ್ರೆ ಮುಗಿಯುತ್ತಿರೋ ಸೀರಿಯಲ್ ಯಾವುದು ಕಾದು ನೋಡಬೇಕು. 
 

Latest Videos

click me!