ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಪಾತ್ರ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದಾರೆ.
ಮಾಧವ್ ಅವರ ನಿಜವಾದ ಹೆಸರು ಅಜಿತ್ ಹಂದೆ ಎಂದು. ತಮ್ಮ ವಯಸ್ಸಿಗೂ ಮೀರಿದ ಪಾತ್ರಕ್ಕೆ ಸಹಿ ಮಾಡಿ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಗರ್ವ, ಬಿದಿಗೆ ಚಂದ್ರಮ ಮತ್ತು ಹಿಂದಿಯ ಚೋಟಿಮಾ ಧಾರಾವಾಹಿಗಳಲ್ಲಿ ಅಜಿತ್ ಅಭಿನಯಿಸಿದ್ದಾರೆ. ಹೀಗಾಗಿ ನಟನೆ ಅವರಿಗೆ ಹೊಸತೇನಲ್ಲ.
ಮುಕ್ತ ಧಾರಾವಾಹಿಯಲ್ಲಿ ಸ್ವಾಮೀಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಧಾರಾವಾಹಿ ಲೋಕದಿಂದ ಮಾಧವ್ ಬ್ರೇಕ್ ತೆಗೆದುಕೊಂಡಿದ್ದರು.
ನ್ಯೂರ್ಯಾಕ್ ಫಿಲಂ ಸಿಟಿಯಲ್ಲಿ ಸಿನಿಮಾ ಮೇಕಿಂಗ್ ತರಬೇತಿ ಪಡೆದುಕೊಂಡು ಭಾರತಕ್ಕೆ ಬಂದು ತಮ್ಮ ಸ್ವಂತ ನಿರ್ಮಾಣದಲ್ಲಿ ಫಿಲಂ ಸಂಸ್ಥೆ ಆರಂಭಿಸಿದ್ದಾರೆ.
ಐದು ಒಂದ್ಲಾ ಐದು, ಮಿನುಗು, ಚಂಬಲ್ ಸಿನಿಮಾದಲ್ಲಿ ಮಾಧವ್ ನಟಿಸಿದ್ದಾರೆ. ತಮ್ಮ ಸಿನಿಮಾ ಸಂಸ್ಥೆಯಲ್ಲಿ ಅನೇಕ ಜಾಹೀರಾತು ಮತ್ತು ಡಾಕ್ಯುಮೆಂಟರಿ ನಿರ್ಮಾಣ ಮಾಡಿದ್ದಾರೆ.
ಅಜಿತ್ ಹಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಗಳಿದು. ಅವರ ಪುಟ್ಟ ಮಗನ ಜೊತೆ ತುಂಬಾ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
Vaishnavi Chandrashekar