ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸೊಸೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪೂರ್ಣಿ ಉರ್ಫ್ ಲಾವಣ್ಯ ಮದುವೆ ಆದ್ಮೇಲೆ ಮತ್ತೆ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಾಲ್ಯದಿಂದಲ್ಲೂ ನೃತ್ಯದಲ್ಲಿ ಅಸಕ್ತಿ ಹೊಂದಿದ್ದ ಲಾವಣ್ಯ ಕೆಲವು ವರ್ಷಗಳ ಕಾಲ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡಿ ಆನಂತರ ಬಣ್ಣದ ಜರ್ನಿ ಆರಂಭಿಸಿದರು.
ರಾಧಾ ರಮಣ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಲಾವಣ್ಯ ಎರಡನೇ ಧಾರಾವಾಹಿ ರಾಜಾ ರಾಣಿ. ಕೈ ತುಂಬಾ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದ ಕಾರಣ ನಟನಾ ರಂಗವನ್ನು ಬಿಡಲಿಲ್ಲ.
ದಾಸ ಪುರಂದರ ಧಾರಾವಾಹಿಯಲ್ಲಿ ನಟಿಸಿದ್ದು ನನ್ನ ಅದೃಷ್ಠ ಎನ್ನುವ ಪೂರ್ಣಿ 2022ರ ಮೇ ತಿಂಗಳಿನಲ್ಲಿ ಶಶಿಧರ್ ಹೆಗ್ಡೆ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ರಾಜಾ ರಾಣಿ ಧಾರಾವಾಹಿಯಲ್ಲಿ ಶಶಿಧರ್ ಮತ್ತು ಲಾವಣ್ಯ ಪರಿಚಯವಾದರು. ನಾಲ್ಕು ವರ್ಷಗಳ ಕಾಲ ಪ್ರೀತಿಸಿರುವ ಈ ಜೋಡಿ ಮನೆಯಲ್ಲಿ ಒಪ್ಪಿಗೆ ಪಡೆದುಕೊಂಡು ಅದ್ಧೂರಿಯಾಗಿ ಮದುವೆ ಮಾಡಿಕೊಂಡರು.
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಅವರ ಮುದ್ದಿನ ಸೊಸೆ ಪೂರ್ಣಿಮಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನಟನೆ ಜೊತೆಗೆ ಪತಿ ಜೊತೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.