ಖ್ಯಾತ ಸೀರಿಯಲ್ ನಟಿ ಆದಿತಿಗೆ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಪ್ರೀತಿಸಿ ಮದುವೆಯಾದ ಬೆನ್ನಲ್ಲೇ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ. ಅಷ್ಟಕ್ಕೂ ನಟಿ ದೂರು ದಾಖಲಿಸಿದ್ದು ಯಾಕೆ?
ಸೀರಿಯಲ್‌ಗಳಲ್ಲಿ ಕುಟುಂಬದೊಳಗೆ ಮನಸ್ತಾಪ, ಜಗಳ, ರಿವೇಂಜ್ ಸೇರಿದಂತೆ ಹಲವು ರೀತಿಯಲ್ಲಿ ಪಾತ್ರ ನಿಭಾಯಿಸಿದ ನಟಿ ಅದಿತಿಗೆ ಇದೀಗ ರಿಯಲ್ ಲೈಫ್‌ನಲ್ಲಿ ಈ ಎಲ್ಲಾ ಪಾತ್ರಗಳು ಒಟ್ಟಾಗಿ ಎದುರಾಗಿದೆ. ಖ್ಯಾತ ಹಿಂದಿ ಸೀರಿಯಲ್ ನಟಿ ಅದಿತಿ ಶರ್ಮಾ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಪತಿ, ಅತ್ತೆ ಹಾಗೂ ನಾದಿನಿ ವಿರುದ್ದವೇ ದೂರು ದಾಖಲಿಸಿದ್ದು ಸೀರಿಯಲ್ ಕ್ಷೇತ್ರದಲ್ಲಿ ಕೋಲಾಹಲ ಎದ್ದಿದೆ.
26
ಗಂಡ ಬದಲಾಗಿದ್ದಾನೆ, ಪ್ರತಿ ದಿನ ಜಗಳವಾಡುತ್ತಾನೆ
ಪ್ರೀತಿಸಿ ಮದುವೆಯಾದ ಬಳಿಕ ಗಂಡ ಬದಲಾಗಿದ್ದಾನೆ. ಪ್ರತಿ ವಿಚಾರಕ್ಕೂ ಜಗಳ ಮಾಡುತ್ತಾನೆ. ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾನೆ. ಗಂಡನ ತಾಯಿ ಸೇರಿದಂತೆ ಕುಟುಂಬಸ್ಥರು ತನ್ನ ಮೇಲೆ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿ ಅದಿತಿ ಶರ್ಮಾ ದೂರು ನೀಡಿದ್ದಾರೆ. ಮುಂಬೈನ ಗೊರೇಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
36
ಕಾಫಿಯಿಂದ ರಾದ್ದಾಂತ, ಪತಿಯಿಂದ ದೂರ
ಪ್ರತಿ ದಿನ ಗಂಡ ಅಭಿನೀತ್ ಕೌಶಿಕ್ ಜಗಳವಾಡುತ್ತಿದ್ದ. ಹಲ್ಲೆ ಮಾಡುತ್ತಿದ್ದ. ಕಾಫಿ ವಿಚಾರದಲ್ಲಿ ಜಗಳ ತೀವ್ರಗೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಹೀಗಾಗಿ ಆತನಿಂದ ದೂರ ಉಳಿದಿದ್ದೇನೆ. ನನ್ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾನೆ. ಪ್ರತಿ ದಿನ ಮೊಬೈಲ್ ಪರಿಶೀಲಿಸುತ್ತಾನೆ. ತನಗೆ ಅಕ್ರಮ ಸಂಬಂಧವಿದೆ ಎಂದು ಹಲವು ಬಾರಿ ಎಗರಾಡಿದ್ದಾನೆ. ಇದೇ ವಿಚಾರವಾಗಿ ಜಗಳ ತೀವ್ರಗೊಂಡಿದೆ ಎಂದು ಅದಿತಿ ಶರ್ಮಾ ನೋವು ತೋಡಿಕೊಂಡಿದ್ದಾರೆ.
ತನಗೆ ಅಕ್ರಮ ಸಂಬಂಧವಿದ ಎಂದು ಪದೇ ಪದೇ ನಿಂದಿಸಿದ್ದಾನೆ. ಇಷ್ಟೇ ಅಲ್ಲ ತನ್ನನ್ನು ಬೇರೆ ಕೋಣೆಯಲ್ಲಿ ಮಲಗಲು ಸೂಚಿಸಿದ್ದಾನೆ. ಗಂಡನ ಕುಟುಂಬಸ್ಥರು ದೌರ್ಜನ್ಯ ಎಸಗಿದ್ದಾರೆ. ಮದುವೆಯಾಗಿ ಬರವಾಗ ನನ್ನಲ್ಲಿದ್ದ ಚಿನ್ನದ ಆಭರಣಗಳನ್ನು ಕಸಿದುಕೊಂಡಿದ್ದಾರೆ ಇಡೀ ಕುಟುಂಬ ತನಗೆ ಕಿರುಕುಳ ನೀಡಿದೆ ಎಂದು ಅದಿತಿ ಶರ್ಮಾ ದೂರಿನಲ್ಲಿ ಹೇಳಿದ್ದಾರೆ.
56
ತನ್ನಿಂದಲೇ ಹಣ ಪಡೆಯುತ್ತಿದ್ದ ಅಭಿನೀತ್
ಕುಟುಂಬದ ವೆಚ್ಚ, ಇತರ ಖರ್ಚು ವೆಚ್ಚಗಳಿಗೆ ಅಭಿನೀತ್ ಹಣ ನೀಡುತ್ತಿರಲಿಲ್ಲ. ಇತ್ತ ಆತನ ಖರ್ಚು ವೆಚ್ಚಗಳಿಗೂ ತನ್ನಿಂದ ಹಣ ಪಡೆಯುತ್ತಿದ್ದ. ಕುಟುಂಬದಲ್ಲಿ ಸಹಜ ಎಂದು ಸಹಿಸಿಕೊಂಡಿದ್ದೆ. ಆದರೆ ನಾನು ಕೆಲಸಕ್ಕೆ ಹೋದರೆ ಅನುಮಾನ ವ್ಯಕ್ತಪಡಿಸುತ್ತಾನೆ. ಸಂಶಯದಿಂದ ನಿಂದಿಸುತ್ತಾನೆ. ತೀವ್ರವಾಗಿ ಕುಗ್ಗಿ ಹೋಗಿದ್ದೇನೆ ಎಂದು ಅದಿತಿ ದೂರಿನಲ್ಲಿ ಹೇಳಿದ್ದಾರೆ.
66
ಪತಿ ವಿರುದ್ದ ಹಲವು ಸೆಕ್ಷನ್ ಅಡಿಯಲ್ಲಿ ಕೇಸ್
ಅದಿತಿ ಶರ್ಮಾ ನೀಡಿದ ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 85, ಸೆಕ್ಷನ್ 316(2), ಸೆಕ್ಷನ್ 352, ಸೆಕ್ಷನ್ 3(5) ಅಡಿಯಲ್ಲಿ ಅಭಿನೀತ್ ಕೌಶಿಕ್ ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸ್ ತನಿಖೆ ಆರಂಭಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.