Karna ಸೀರಿಯಲ್: ಟ್ರೋಫಿ ಹಿಂದಿರುವ ನಿಗೂಢ ರಹಸ್ಯವೇನು? ತಾರಾ ಕಪಾಳಕ್ಕೆ ರಮೇಶ್ ಏಟು

Published : Oct 29, 2026, 12:29 PM IST

ಜೀ ಕನ್ನಡದ ಕರ್ಣ ಸೀರಿಯಲ್‌ನಲ್ಲಿ ಕರ್ಣನ ಜನ್ಮರಹಸ್ಯ ಮತ್ತು ನಿಧಿ ತಂದೆ-ತಾಯಿಯ ಸಾವಿನ ಸುತ್ತ ಕಥೆ ಸಾಗುತ್ತಿದೆ. ಹೆಲೆನ್ ನಾಟಕದ ಬಗ್ಗೆ ತಿಳಿದ ರಮೇಶ್ ತಾರಾಗೆ ಕಪಾಳಮೋಕ್ಷ ಮಾಡಿದ್ದಾನೆ. ಇತ್ತ ಟ್ರೋಫಿ ಮತ್ತು ಶಾಂತಿ ಅಜ್ಜಿ ಮನೆಯ ದಾಖಲೆಗಳು ಹೊಸ ನಿಗೂಢತೆಯನ್ನು ಸೃಷ್ಟಿಸಿವೆ.

PREV
15
ಕರ್ಣ ಸೀರಿಯಲ್ ಕಥೆ

ಜೀ ಕನ್ನಡದ ಕರ್ಣ ಸೀರಿಯಲ್‌ನಲ್ಲಿ ಒಂದೊಂದೆ ಸತ್ಯಗಳು ಬೆಳಕಿಗೆ ಬರುತ್ತಿವೆ. ಕರ್ಣನ ಜನ್ಮರಹಸ್ಯ ಮತ್ತು ನಿಧಿ-ನಿತ್ಯಾ ತಂದೆ-ತಾಯಿಯ ಸಾವಿನ ರಹಸ್ಯದ ಸುತ್ತವೇ ಕಥೆ ಸಾಗುತ್ತಿದೆ. ಸೀರಿಯಲ್‌ನಲ್ಲಿ ಪಾತ್ರಗಳು ಒಂದಕ್ಕೊಂದು ಲಿಂಕ್ ಆಗಿದ್ದರಿಂದ ಕತೆಯೂ ಹಾಗೆಯೇ ಸಾಗುತ್ತಿದೆ. ಭುವನೇಶ್ವರಿ ಮನೆಯಲ್ಲಿದ್ದ ಟ್ರೋಫಿ ಚಿತ್ರ ಕ್ಲಿಕ್ಕಿಸಿಕೊಂಡು ಬಂದಿರೋ ಕರ್ಣ, ಈ ಬಗ್ಗೆ ಪತ್ನಿ ನಿಧಿ ಜೊತೆ ಚರ್ಚೆ ನಡೆಸುತ್ತಿದ್ದಾನೆ.

25
ಹೆಲೆನ್-ತಾರಾ ಸಂಭಾಷಣೆ

ಮತ್ತೊಂದೆಡೆ ಸೀತಾ ಹೆಸರು ಹೇಳಿಕೊಂಡು ಬಂದಿದ್ದ ಹೆಲೆನ್ ಮನೆಯಿಂದ ಹೊರಗೆ ಹೋಗಿದ್ದಾಳೆ. ಕರ್ಣನ ತಾಯಿಯಾಗಿ ನಟಿಸಿದ್ದರ ಫಲವಾಗಿ ಹಣ ನೀಡಬೇಕು ಎಂದು ತಾರಾಗೆ ಹೆಲೆನ್ ಹೇಳಿದ್ದಾಳೆ. ಹೆಲೆನ್ ಮತ್ತು ತಾರಾ ನಡುವಿನ ಫೋನ್ ಸಂಭಾಷಣೆಯನ್ನು ರಮೇಶ್ ಕೇಳಿಸಿಕೊಂಡಿದ್ದಾನೆ. ಮನೆಗೆ ಸೀತಾ ಹೆಸರಿನಲ್ಲಿ ಮಹಿಳೆಯನ್ನು ಕರೆದುಕೊಂಡು ಬಂದಿರೋದರ ಹಿಂದೆ ಸೋದರಿ ತಾರಾ ಇರೋ ವಿಷಯ ರಮೇಶ್‌ಗೆ ಗೊತ್ತಾಗಿದೆ.

35
ತಾರಾ ಕಪಾಳಕ್ಕೆ ಏಟು ಕೊಟ್ಟ ರಮೇಶ್

ಈ ಬಗ್ಗೆ ಕೇಳಿದ್ದಕ್ಕೆ ನಾನೇಕೆ ಹಾಗೆ ಮಾಡಲಿ ಎಂದು ಸುಳ್ಳು ಹೇಳುತ್ತಿದ್ದಂತೆಯೇ ತಾರಾ ಕಪಾಳಕ್ಕೆ ರಮೇಶ್ ಹೊಡೆದಿದ್ದಾನೆ. ಇಷ್ಟು ದಿನ ರಮೇಶ್‌ನ ಎಲ್ಲಾ ದುಷ್ಕೃತ್ಯಗಳಿಗೆ ತಾರಾ ಸಾಥ್ ನೀಡುತ್ತಿದ್ದಳು. ತಾರಾಳ ನೀಚತನ ತಿಳಿದಿರೋ ರಮೇಶ್ ತಂಗಿಯಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದಾನೆ.

45
ಕರ್ಣನ ಬಳಿಯಲ್ಲಿ ಹಲವು ದಾಖಲೆ

ಕರ್ಣನಿಗೆ ಸೀತಾಗೆ ಸಂಬಂಧಿಸಿದ ದಾಖಲೆಗಳೆಲ್ಲವೂ ಶಾಂತಿಅಜ್ಜಿ ಮನೆಯಲ್ಲಿ ಸಿಕ್ಕಿದ್ದು, ಇವುಗಳ ಆಧಾರದ ಮೇಲೆಯೇ ಮಾರಿಗುಡಿಗೆ ತೆರಳಿ ತಾಯಿಯನ್ನು ಹುಡುಕಿದ್ದನು. ಮಾರಿಗುಡಿ ಶಿವು ಚುರುಕುತನದಿಂದ ಕರ್ಣನ ತಾಯಿ ಸೀತಾ ಮತ್ತು ರಮೇಶ್‌ನಿಗೆ ಕರ್ಣನೇ ತನ್ನ ಪ್ರೇಯಸಿಯ ಮಗ ಎಂಬ ಸತ್ಯ ಗೊತ್ತಾಗಿತ್ತು. ಅಲ್ಲಿಂದ ಕರ್ಣ ಮತ್ತು ರಮೇಶ್‌ ನಡುವೆ ಬಾಂಧವ್ಯ ಏರ್ಪಟ್ಟಿತ್ತು.

55
ಕೈಯಲ್ಲಿ ಟ್ರೋಫಿ

ಇದೀಗ ಭುವನೇಶ್ವರಿಯಲ್ಲಿರೋ ಟ್ರೋಫಿಯೊಂದು ಶಾಂತಿ ಅಜ್ಜಿ ಮನೆಯಲ್ಲಿರುವ ಬಗ್ಗೆ ನಿಧಿ ಹೇಳಿದ್ದಾಳೆ. ತಾಯಿ ಸೀತಾ ದಾಖಲೆಗಳು ಶಾಂತಿ ಅಜ್ಜಿ ಮನೆಯಲ್ಲಿ ಸಿಕ್ಕಿದ್ದು ಹೇಗೆ ಎಂದು ಒಂದು ಕ್ಷಣ ಯೋಚಿಸಿದ್ರೆ ಸಾಕು ಎಲ್ಲವೂ ಗೊತ್ತಾಗಲಿದೆ. ಆದ್ರೆ ಕರ್ಣ ಮಾತ್ರ ಹಾಗೆ ಯೋಚಿಸುತ್ತಿಲ್ಲ. ಇತ್ತ ರಮೇಶನಿಗೂ ಸೀತಾ ತಾಯಿಯೇ ಶಾಂತಿ ಎಂಬ ವಿಷಯ ಗೊತ್ತಿಲ್ಲ. ಈ ಎಲ್ಲಾ ವಿಷಯಗಳನ್ನು ತಿಳಿದಿರೋ ತಾರಾ ಮಾತ್ರ ತನ್ನದೇ ಆದ ದುಷ್ಟ ಯೋಚನೆಯಲ್ಲಿದ್ದಾಳೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories