Zee Kannada Serial Amruthadhaare Promo Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಆದರೆ, ಎರಡು ದೊಡ್ಡ ಆಘಾತಗಳು ಕಾದಿದ್ದು, ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ.
ಇನ್ನೇನು ಮುಗಿಯುತ್ತೆ ಅಂತ ಅಂದ್ಕೊಂಡಿದ್ದ ಅಮೃತಧಾರೆ ಸೀರಿಯಲ್ ಮತ್ತೊಮ್ಮೆ ಮೊದಲಿನಿಂದ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ. ಸೀರಿಯಲ್ ಆರಂಭದಲ್ಲಿ ದಿವಾನ್ ಕುಟುಂಬ ಹೇಗಿತ್ತೋ ಅದೇ ಲಯಕ್ಕೆ ಮರುಳಿದೆ. ಹಾಗಾಗಿ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಗೌತಮ್ ಮತ್ತು ಭೂಮಿಕಾ ಫುಲ್ ಹ್ಯಾಪಿ ಹ್ಯಾಪಿಯಾಗಿದ್ದಾರೆ. ಸಂತೋಷವಾಗಿರುವ ಜೋಡಿಗೆ ಒಂದಲ್ಲ ಎರಡು ಶಾಕ್ ಸಿಗೋದು ಪಕ್ಕಾ ಆಗಿದೆ.
25
ಗೌತಮ್ ಮತ್ತು ಭೂಮಿಕಾ ಆರೋಗ್ಯ
ಇತ್ತೀಚೆಗೆ ಗೌತಮ್ ಮತ್ತು ಭೂಮಿಕಾ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಮೆಡಿಕಲ್ ರಿಪೋರ್ಟ್ ಸಹ ನಾರ್ಮಲ್ ಎಂದು ತೋರಿಸಲಾಗಿತ್ತು. ಇದರಿಂದ ಖುಷಿಗೊಂಡ ಗೌತಮ್-ಭೂಮಿಕಾ ಖುಷಿಯಿಂದ ಐಸ್‌ಕ್ರೀಂ ಸವಿದು ಮನೆ ಸೇರಿಕೊಂಡಿದ್ದರು. ಗೌತಮ್-ಭೂಮಿಕಾ ಆಸ್ಪತ್ರೆಯಿಂದ ಹೋಗುತ್ತಿದ್ದಂತೆ ಡಾಕ್ಟರ್ ಬಳಿ ಬಂದ ನರ್ಸ್, ರಿಪೋರ್ಟ್‌ನಲ್ಲಿರುವ ವ್ಯತ್ಯಾಸದ ಬಗ್ಗೆ ಹೇಳುತ್ತಾರೆ. ರಿಪೋರ್ಟ್ ನೋಡಿದ ವ್ಯದ್ಯರು ಮತ್ತೊಮ್ಮೆ ಪರೀಕ್ಷೆ ಮಾಡುವಂತೆ ಸೂಚಿಸುತ್ತಾರೆ.
35
ಬಿಗ್ ಶಾಕ್
ಇಬ್ಬರಲ್ಲಿ ಯಾರ ರಿಪೋರ್ಟ್‌ನಲ್ಲಿ ವ್ಯತ್ಯಾಸ ಆಗಿದೆ ಎಂಬುದನ್ನು ನಿರ್ದೇಶಕರು ರಿವೀಲ್ ಮಾಡಿಲ್ಲ. ಹಾಗಾಗಿ ಇಬ್ಬರಲ್ಲಿ ಒಬ್ಬರಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಬಹುದು. ಮತ್ತೊಂದೆಡೆ ಜೈಲಿನಲ್ಲಿದ್ದ ಜೈದೇವ್‌ಗೆ ಶಕುಂತಲಾಳೇ ಜಾಮೀನು ಕೊಡಿಸಿದ್ದಾಳೆ. ತಮ್ಮ ಬೆನ್ನಹಿಂದೆಯೇ ತಾಯಿ ಶಕುಂತಲಾ ಮಾಡುತ್ತಿರೋ ಕುತಂತ್ರ ಗೊತ್ತಾದ್ರೆ ಗೌತಮ್‌ಗೆ ಮತ್ತೊಂದು ಬಿಗ್ ಶಾಕ್ ಎದುರಾದಂತೆ ಆಗುತ್ತೆ.
ಗೌತಮ್ ಮತ್ತು ಭೂಮಿಕಾ ವಿರುದ್ಧ ಶಕುಂತಲಾ ಮಾಡುತ್ತಿರುವ ಷಡ್ಯಂತ್ರಕ್ಕೆ ಶಕುನಿ ಮಾಮಾ ಸಾಥ್ ನೀಡ್ತಾನಾ ಎಂಬುದರ ಬಗ್ಗೆ ಅನುಮಾನವಿದೆ. ಜೈಲಿನಿಂದ ಬಂದ ಬಳಿಕ ಗೌತಮ್ ಜೊತೆಯಲ್ಲಿ ನಿಂತುಕೊಂಡು ಲಕ್ಷ್ಮೀಕಾಂತ್ ಕೆಲಸ ಮಾಡಿದ್ದನು. ತಂಗಿ ಮತ್ತು ಸೋದರಳಿಯನಿಗೆ ಲಕ್ಷ್ಮೀಕಾಂತ್ ಸಾಥ್ ಕೊಟ್ಟು ಗೌತಮ್ ವಿರುದ್ಧ ಹೋಗ್ತಾನಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
55
ಮಲ್ಲಿ ಬರ್ತಾಳಾ?
ಸೀರಿಯಲ್ 2.ಓ ತಿರುವು ಪಡೆದುಕೊಂಡಿರುವ ಕಾರಣ ಮಲ್ಲಿ ಮತ್ತೆ ಕಂಬ್ಯಾಕ್ ಮಾಡುವ ಸಾಧ್ಯತೆಗಳಿವೆ. ಐಪಿಎಸ್ ಅಧಿಕಾರಿಯಾಗಿರುವ ಮಲ್ಲಿ ಮೂಲಕ ಜೈದೇವ್ ಮತ್ತು ಶಕುಂತಲಾ ಪಾತ್ರವನ್ನು ಕೊನೆ ಮಾಡಬಹುದು ಎಂದು ಸೀರಿಯಲ್ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.