ಸೀತಾ ಪಾತ್ರಕ್ಕೆ ಅಸಹ್ಯವಾಗಿ ಸೀರೆ ಹಾಕ್ತೀಯಾ ಎಂದು ಮುಖಕ್ಕೆ ಟೀಕಿಸಿದ ನೆಟ್ಟಿಗರು; ನಗು ನಗುತ್ತಲೇ ಉತ್ತರ ಕೊಟ್ಟ ವೈಷ್ಣವಿ!

First Published | Sep 3, 2024, 4:56 PM IST

ಪದೇ ಪದೇ ವೈಷ್ಣವಿ ಧರಿಸುವ ಸೀರೆ ಬಗ್ಗೆ ಕಾಮೆಂಟ್ ಮಾಡಿದ ನೆಟ್ಟಿಗರು...ನಗು ನಗುತ್ತಲೇ ಉತ್ತರಿಸಿದ ಸುಂದರಿ....
 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ ಸೀತಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ ಸೀತಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

Tap to resize

ಇಲ್ಲಿ ಸೀತಾ ಬಾಳಿಗೆ ರಾಮ ಎಂಟ್ರಿ ಕೊಟ್ಟ ಮೇಲೆ. ಸಿಹಿ ಮತ್ತು ಸೀತಾ ಜೀವನ ಬದಲಾಗುತ್ತದೆ. ಮದುವೆ ನಂತರ ದೊಡ್ಡ ಕುಟುಂಬ ಸೇರುತ್ತಾರೆ.

ಧಾರಾವಾಹಿ ಕಥೆ ಅದ್ಭುತವಾಗಿದೆ ಆದರೆ ನಾಯಕಿ ಡ್ರೆಸ್ಸಿಂಗ್ ಸ್ವಲ್ಪ ಬದಲಾಗಬೇಕು ಎಂದು ನೆಟ್ಟಿಗರು ಆಗಾಗ ಕಾಮೆಂಟ್ ಮಾಡುತ್ತಿದ್ದರು. 

ನಾನು ಧರಿಸುವ ಸೀರೆ ಚೆನ್ನಾಗಿಲ್ಲ ಅಥವಾ ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಎಲ್ಲರೂ ಕಾಮೆಂಟ್ ಮಾಡುತ್ತಾರೆ ಆದರೆ ನಾನು ಪಾತ್ರಕ್ಕೆ ತಕ್ಕಂತೆ ರೆಡಿಯಾಗುವುದು ಎಂದು ವೈಷ್ಣವಿ ಹೇಳಿದ್ದಾರೆ.

ಸಿಹಿ ಕಷ್ಟದಲ್ಲಿ ಇರುತ್ತಾಳೆ ಅಲ್ಲದೆ ಮಿಡಲ್ ಕ್ಲಾಸ್ ಕುಟುಂಬದ ಹುಡುಗಿ ರೀತಿಯಲ್ಲಿ ನಾನು ಡ್ರೆಸ್ ಆಗಬೇಕು ಅದನ್ನು ಮರೆತು ನಾನು ರೆಡಿಯಾಗುವುದಕ್ಕೆ ಆಗಲ್ಲ'

ವೈಷ್ಣವಿ ಗೌಡ ಆಗಿ ನಾನು ಬೇರೆ ರೀತಿ ರೆಡಿಯಾಗುತ್ತೀನಿ, ಸೀತಾ ಪಾತ್ರಕ್ಕೆ ಬೇರೆ ರೀತಿಯಲ್ಲಿ ರೆಡಿಯಾಗಬೇಕು ಎಂದು ನಗು ನಗುತ್ತಲೇ ವೈಷ್ಣವಿ ಉತ್ತರಿಸಿದ್ದಾರೆ. 

Latest Videos

click me!