ಜ್ವರದ ಮಂಪರಿನಲ್ಲೂ ಕೀರ್ತಿ ಹೆಸರು ಕನವರಿಸಿದ ಅಭಿಮಾನಿ... ಭಾವುಕರಾದ ತನ್ವಿ ರಾವ್

First Published | Sep 3, 2024, 1:17 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದಲ್ಲಿ ನಟಿಸಿರುವ ತನ್ವಿ ರಾವ್ ಅಭಿಮಾನಿಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ತನ್ವಿಗೆ ಮೆಸೇಜ್, ಡಿಎಂ ಮಾಡೋ ಮೂಲಕವೂ ಜನರು ಪ್ರೀತಿ ತೋರುತ್ತಿದ್ದಾರೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಗಿ ದಿನದಿಂದ ದಿನಕ್ಕೆ ಕುತೂಹಲ ಹುಟ್ಟಿಸುತ್ತಾ ಸಾಗುತ್ತಿದೆ. ಕೀರ್ತಿ ನಿಜವಾಗಿಯೂ ಸತ್ತೋಗಿದ್ದಾಳ?  ಲಕ್ಷ್ಮೀ ಮೈ ಮೇಲೆ ಭೂತ ಬರ್ತಿರೋದು ನಿಜಾನಾ? ಕಾವೇರಿ ಯಾವಾಗ ತಪ್ಪೊಪ್ಪಿಕೊಳ್ತಾಳೆ, ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗೋದಕ್ಕೆ ವೀಕ್ಷಕರು ತುಂಬನೆ ಕಾತುರದಿಂದ ಕಾಯ್ತಾನೆ ಇದ್ದಾರೆ. 
 

ಇದೆಲ್ಲದರ ನಡುವೆ ಕೀರ್ತಿ ನಟನೆಗೆ ವೀಕ್ಷಕರು ಮನಸೋತಿದ್ದು, ಕಳೆದ ಹಲವು ದಿನಗಳಿಂದ ವೀಕ್ಷಕರ ಬಾಯಲ್ಲಿ ಬರೀ ಕೀರ್ತಿಯದ್ದೆ ಜಪ ಆಗಿದೆ. ಕೀರ್ತಿಗೆ ನ್ಯಾಯ ಕೊಡಿಸುವಂತೆ ಕೋರು ಅದೇಷ್ಟೋ ವೀಕ್ಷಕರನ್ನು ಕಾಣಬಹುದು, ಜೊತೆ ಮತ್ತೆ ಕೀರ್ತಿಯನ್ನು ಕರೆಯಿಸಿ, ಕೀರ್ತಿ ಇಲ್ಲದೇ ಸಿರಿಯಲ್ ನೋಡೊದಿಲ್ಲ ಅಂತಾನು ಜನ ಹೇಳ್ತಿದ್ದಾರೆ. ಕೀರ್ತಿ ಪಾತ್ರದಲ್ಲಿ ನಟಿಸುತ್ತಿರುವ ತನ್ವಿ ರಾವ್ ಗೂ (Tanvi Rao) ಅಭಿಮಾನಿಗಳು ಮೆಸೇಜ್ ಮೂಲಕ ಪ್ರೀತಿಯನ್ನು ಸುರಿಸುತ್ತಿದ್ದಾರೆ. 
 

Tap to resize

ಕೊಂಚ ನೆಗೆಟಿವ್ ಶೇಡ್ ನಲ್ಲಿ (Negative shade) ನಟಿಸಿದ್ದರೂ, ಕೀರ್ತಿ ತುಂಬಾನೆ ಒಳ್ಳೆಯವರು ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿದೆ, ಅದರಲ್ಲೂ ಕೋಪ, ದ್ವೇಷ, ಜೆಲಸ್, ಲವರ್, ಸೈಕೋ ಹೀಗೆ ಹಲವು ಶೇಡ್ ಗಳಲ್ಲಿರುವ ಕೀರ್ತಿ ಪಾತ್ರಕ್ಕೆ ಜೀವ ತುಂಬಿದ ತನ್ವಿ ರಾವ್ ಗೆ ಅಭಿಮಾನಿಗಳು ತಮ್ಮ ಮನದ ಮಾತುಗಳನ್ನು ತಿಳಿಸುತ್ತಿದ್ದು, ಕೀರ್ತಿ ಪಾತ್ರ ಜನರಿಗೆ ಯಾವ ರೀತಿ ಇನ್ಫ್ಲೂಯೆನ್ಸ್ ಮಾಡಿದೆ ಅನ್ನೋದನ್ನ ತಿಳಿಸಿದ್ದು, ಇದನ್ನ ಓದಿ ತನ್ವಿ ಕೂಡ ಭಾವುಕರಾಗಿದ್ದಾರೆ. ತನ್ವಿ ತಮ್ಮ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡ ಒಂದು ಸ್ಟೋರಿ ಹೀಗಿದೆ ನೋಡಿ. 
 

ಅಭಿಮಾನಿಯೊಬ್ಬರು ಕೀರ್ತಿ ಫೋಟೊ ಹಾಕಿ, ನಾನು ನಿಮ್ಮ ಜೊತೆ ಒಂದು ಚಿಕ್ಕ ವಿಷಯ ಹೇಳಬೇಕು ಅಂತ ಇದ್ದೇನೆ ಅಕ್ಕ. ನನಗೆ ಎರಡು ದಿನದಿಂದ ಮೈ ಹುಷಾರಿಲ್ಲ ಅಕ್ಕ. ನನ್ನ ಅಕ್ಕ ಬೆಳಗ್ಗೆ ಹೇಳಿದ್ರು, ನಾನು ನಿದ್ರೇಲಿ ನಿಮ್ಮ ಹೆಸರು ಕನವರಿಸುತ್ತ ಕೀರ್ತಿ ಸತ್ತಿಲ್ಲ ಅಂತ ಹೇಳ್ತಿದ್ದೆ ಅಂತೆ. ಅದಕ್ಕೆ ಅಮ್ಮ ಹೇಳಿದ್ರು ಹುಷಾರಿಲ್ಲ ಅಂದ್ರು, ಕೀರ್ತಿಯ ಯೋಚನೆ ಬಿಟ್ಟಿಲ್ಲ ಅಂತ. ಆದ್ರೆ ಒಂದು ವಿಷ್ಯ ಹೇಳ್ತೀನಿ ನೀವು ಯಾವಾಗ್ಲೂ ನನ್ನ ಫೇವರಿಟ್. ಲವ್ ಯು ಸೋ ಮಚ್ ಅಕ್ಕ ಎಂದು ಬರೆದುಕೊಂಡಿದ್ದಾರೆ. 
 

ಇದನ್ನ ನೋಡಿದ ತನ್ವಿ ರಾವ್, ಅಯ್ಯೋ ರಾಮ, ಜಯ ಆಳ್ವಾ, ನೀವು ಏನೇನು ಮಾಡಿದ್ರಿ ನೋಡಿ ಎಂದು ಹೇಳಿದ್ದಾರೆ. ಜಯಾ ಆಳ್ವಾ ಆಂದ್ರೆ ಸೀರಿಯಲ್ ನಲ್ಲಿ ಪ್ರತಿಯೊಂದು ಪಾತ್ರವನ್ನು ಸೃಷ್ಟಿ ಮಾಡುವವರು. ಹಾಗಾಗಿ ತನ್ವಿ ಜಯಾ ಆಳ್ವಾರನ್ನು ಟ್ಯಾಗ್ ಮಾಡಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಯ ಮೆಸೇಜ್ ಗೆ ಉತ್ತರಿಸಿ, ಇದಕ್ಕೆ ನನಗೆ ಹೇಗೆ ಉತ್ತರ ನೀಡಬೇಕು ಅನ್ನೋದೆ ಗೊತ್ತಾಗುತ್ತಿಲ್ಲ. ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ಥ್ಯಾಂಕ್ಯೂ ಸೋ ಮಚ್, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಭಾವುಕರಾಗಿ ಹೇಳಿದ್ದಾರೆ. 
 

ಮತ್ತೊಬ್ಬ ಅಭಿಮಾನಿ ಮೆಸೇಜ್ ಮಾಡಿ, ಡಿಯರ್ ಕೀರ್ತಿ, ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಿಮ್ಮ ಪಾತ್ರ ರಿಮಾರ್ಕೇಬಲ್. ನೀವು ಕೀರ್ತಿ ಪಾತ್ರಕ್ಕೆ ಭಾವ, ಜೀವ, ಗ್ರೇಸ್ ಕೊಡುತ್ತೀರಿ. ಪ್ರತಿಯೊಂದು ದೃಶ್ಯದಲ್ಲೂ ತುಂಬಾನೆ ನೈಜ್ಯತೆ ಇರುತ್ತೆ, ಜೊತೆಗೆ ನೋಡುವಂತೆ ಮಾಡುತ್ತೆ. ನಿಮ್ಮನ್ನು ತೆರೆ ಮೇಲೆ ನೋಡೋದೆ ಕಣ್ಣುಗಳಿಗೆ ಹಬ್ಬ. ಪ್ರತಿಯೊಂದು ಎಪಿಸೋಡ್ ಗಳಲ್ಲೂ ನಿಮ್ಮ ಟ್ಯಾಲೆಂಟ್ ಎದ್ದು ಕಾಣುತ್ತಿದೆ. ನಿಮ್ಮ ಪಾತ್ರವನ್ನ ಇಷ್ಟೊಂದು ಡೆಡಿಕೇಶನ್ ಮತ್ತು ಪ್ಯಾಶನ್ ನಿಂದ ಮಾಡಿರೋದಕ್ಕೆ ಥ್ಯಾಂಕ್ಯೂ ಎಂದಿದ್ದು, ಅದಕ್ಕೂ ತನ್ವಿ ರಾವ್, ನೀವು ನಿಮ್ಮ ಸಮಯ ವ್ಯಯಿಸಿ, ಇಷ್ಟೊಂದು ಬರೆದಿರೋದಕ್ಕೆ ಥ್ಯಾಂಕ್ಯೂ ಎಂದಿದ್ದಾರೆ. 
 

ಒಟ್ಟಿನಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ತನ್ವಿ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಮತ್ತೆ ತೆರೆ ಮೇಲೆ ನೋಡೋದಕ್ಕೆ ಕಾಯ್ತಿದ್ದಾರೆ. ಇನ್ನೆಷ್ಟು ದಿನ ಕಾಯೋದು? ಕೀರ್ತಿ ಮತ್ತೆ ಯಾವಾಗಾ ತೆರೆ ಮೇಲೆ ಬಾರ್ತಾರೆ ಕಾದು ನೋಡೋಣ. 
 

Latest Videos

click me!