ಇನ್ನು ಸಾಮಾಜಿಕ ಮಾಧ್ಯಮ ತಾರೆ ಬೆಜವಾಡ ಬೇಬಕ್ಕಗೆ ರೂ. 1.5 ಲಕ್ಷ ನೀಡುತ್ತಿದ್ದಾರಂತೆ. ಇವರನ್ನು ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಚಾನೆಲ್‌ನಲ್ಲಿ ಹೆಚ್ಚು ಜನ ಫಾಲೋ ಮಾಡುತ್ತಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ತಾರೆ ನಬೀಲ್ ಅಫ್ರಿದಿಯವರಿಗೆ ವಾರಕ್ಕೆ ರೂ. 2 ಲಕ್ಷ ಸಂಭಾವನೆಯಾಗಿ ನೀಡುತ್ತಿದ್ದಾರಂತೆ. ಶೇಖರ್ ಬಾಷಾ ನಿರೂಪಕರಾಗಿದ್ದಾರೆ, ಆರ್‌ಜೆ ಕೂಡ. ಉತ್ತಮ ವಾಗ್ಮಿ. ರಾಜ್ ತರುಣ್- ಲಾವಣ್ಯ ವಿವಾದದಿಂದಾಗಿ ಇನ್ನಷ್ಟು ಜನಪ್ರಿಯರಾದರು. ಇವರಿಗೆ ರೂ. 2.5 ಲಕ್ಷ ನೀಡುತ್ತಿದ್ದಾರಂತೆ.
ಯೂಟ್ಯೂಬ್‌ನಲ್ಲಿನ ದಿಟ್ಟ ವೀಡಿಯೊಗಳ ಮೂಲಕ ಕಿರಾಕ್ ಸೀತಾ ಜನಪ್ರಿಯರಾದರು. ಅವರು ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿರಾಕ್ ಸೀತಾಗೆ ವಾರಕ್ಕೆ ರೂ. 2 ಲಕ್ಷ ಸಂಭಾವನೆ ನೀಡುತ್ತಿದ್ದಾರಂತೆ. ಕಿರುತೆರೆ ಪ್ರೇಕ್ಷಕರಲ್ಲಿ ನಿಖಿಲ್‌ಗೆ ಜನಪ್ರಿಯತೆ ಇದೆ. ಅವರು ಹಲವಾರು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡಿಗ ನಿಖಿಲ್ ವಾರಕ್ಕೆ ರೂ. 2.25 ಲಕ್ಷ ಸಂಭಾವನೆ ಪಡೆಯುತ್ತಾರಂತೆ.