ಕುಲವಧು ಧಾರಾವಾಹಿಯಲ್ಲಿ ವಚನಾ ಪಾತ್ರದಲ್ಲಿ ನಟಿಸಿದ್ದ ನಟಿ ದಿಶಾ ಮದನ್ ಇದೀಗ ಲಕ್ಷ್ಮೀ ನಿವಾಸದಲ್ಲಿ ಭಾವನಾ ಆಗಿ ನಟಿಸುತ್ತಿದ್ದಾರೆ. ಎರಡು ವಿಭಿನ್ನ ಪಾತ್ರದಲ್ಲಿ ನಟಿಸಿರೋ ದಿಶಾ ಅವರನ್ನು ಜನ ಹೇಗೆ ಸ್ವೀಕರಿಸಿದ್ದಾರೆ.
ಕನ್ನಡ ಕಿರುತೆರೆ, ಹಿರಿತೆರೆ, ವೆಬ್ ಸೀರೀಸ್, ಸೋಶಿಯಲ್ ಮೀಡಿಯಾದಲ್ಲೂ ಜನಪ್ರಿಯತೆ ಪಡೆದ ನಟಿ ದಿಶಾ ಮದನ್ (Disha Madan). ಕಳೆದ ಹಲವು ವರ್ಷಗಳಿಂದ ದಿಶಾ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿದ್ದಾರೆ. ಇದೀಗ ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.
28
ಹಲವು ವರ್ಷಗಳ ಹಿಂದೆ ಮೊದಲ ಬಾರಿಗೆ ದಿಶಾ ಮದನ್ ಕುಲವಧು ಎನ್ನುವ ಜನಪ್ರಿಯ ಧಾರಾವಾಹಿಯಲ್ಲಿ ನೆಗೆಟೀವ್ ಶೇಡ್ ಇರುವ ವಚನಾ ಪಾತ್ರದ ಮೂಲಕ ಜನರಿಗೆ ಪರಿಚಿತರಾಗಿದ್ದರು. ಸೀರಿಯಲ್ ಅರ್ಧದಲ್ಲಿ ಬಿಟ್ಟರೂ ಸಹ ಇಂದಿಗೂ ಹೆಚ್ಚಿನ ಜನರು ಅವರನ್ನು ಕುಲವಧು ವಚನಾ ಅಂತಾನೆ ಗುರುತಿಸೋದು.
38
ಇದೀಗ ಮತ್ತೆ 10 ವರ್ಷಗಳ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ದಿಶಾ ಮದನ್ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಭಾವನಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈ ಸೀರಿಯಲ್ ನಲ್ಲಿ ಸೌಮ್ಯ ಸ್ವಭಾವದ, ತ್ಯಾಗಮಯಿ ಪಾತ್ರದಲ್ಲಿ ದಿಶಾ ನಟಿಸುತ್ತಿದ್ದಾರೆ.
48
ಇವೆರಡು ವಿರುದ್ಧ ಪಾತ್ರಗಳನ್ನು ಹೋಲಿಕೆ ಮಾಡಿರುವ ಅಭಿಮಾನಿಗಳು ಅಂದು ತನ್ನ ಸ್ವಾರ್ಥಕ್ಕಾಗಿ ತಂಗಿಯ ಖುಷಿಯನ್ನು ಲೆಕ್ಕಿಸದ ಕುಲವಧು ವಚನ, ಇಂದು ಮನೆಯವರ ಖುಷಿಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡುವ ಲಕ್ಷ್ಮೀ ನಿವಾಸ ಭಾವನಾ ಎರಡೂ ಪಾತ್ರಗಳಲ್ಲೂ ದಿಶಾ ಅದ್ಭುತವಾಗಿ ನಟಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ (social media) ಪೋಸ್ಟ್ ಶೇರ್ ಮಾಡಿದ್ದಾರೆ.
58
ಎರಡು ವಿಭಿನ್ನ ಸೀರಿಯಲ್ ಗಳಲ್ಲಿ (different shades), ಎರಡು ವಿಭಿನ್ನ ಶೇಡ್ ನ ಪಾತ್ರಗಳಲ್ಲಿ ನಟಿ ದಿಶಾ ಮದನ್ ನಿಜಕ್ಕೂ ಅದ್ಭುತವಾಗಿ ನಟಿಸಿದ್ದಾರೆ. ಜನರಿಗಂತೂ ಇವರು ಸದ್ಯ ಫೇವರಿಟ್ ನಟಿಯಾಗಿದ್ದಾರೆ. ಲಕ್ಷ್ಮೀ ನಿವಾಸದಲ್ಲಿ ತೂಗಿ ಅಳೆದು ಮಾತನಾಡುವ, ಯಾವಾಗಲೂ ಇನ್ನೊಬ್ಬರ ಖುಷಿಯ ಬಗ್ಗೆ ಯೋಚಿಸುವ ಇವರ ಪಾತ್ರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.
68
ಸೋಶಿಯಲ್ ಮೀಡಿಯಾದಲ್ಲಿ (Social Media )ಡ್ಯಾನ್ಸ್, ರೀಲ್ಸ್ ಮಾಡುತ್ತಾ ಜನಪ್ರಿಯತೆ ಗಳಿಸಿರುವ ದಿಶಾ ಮದನ್ ಮತ್ತೆ ಕಿರುತೆರೆ ಪ್ರೇಕ್ಷಕರಿಂದ ಮೆಚ್ಚಿಗೆ ಪಡೆದುಕೊಂಡಿದ್ದಾರೆ. ದಿಶಾ ಅದ್ಭುತ ನಟಿ, ಯಾವ ಪಾತ್ರ ಕೊಟ್ಟರೂ ಅದ್ಭುತವಾಗಿ ನಟಿಸುತ್ತಾರೆ ಎನ್ನುತ್ತಿದ್ದಾರೆ ಜನ.
78
ಇನ್ನು ದಿಶಾ ಕರಿಯರ್ ಬಗ್ಗೆ ಹೇಳೋದಾದರೆ ಒಂದೆರಡು ವೆಬ್ ಸೀರೀಸ್ (web series) ಹಾಗೂ ಸಿನಿಮಾಗಳಲ್ಲಿ ನಟಿಸಿದ ದಿಶಾ ಬಳಿಕ ಹತ್ತು ವರ್ಷಗಳ ಕಾಲ ಕಿರುತೆರೆಯಿಂದ ದೂರವೇ ಉಳಿದರು. ಮದುವೆ, ಮಕ್ಕಳು ಫ್ಯಾಮಿಲಿ ಎಂದು ಬ್ಯುಸಿಯಾಗಿದ್ದ ನಟಿ ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.
88
ಇನ್ನು ಹಿರಿತೆರೆ ಬಗ್ಗೆ ಹೇಳೊದಾದರೆ ದಿಶಾ ಪನ್ನಗಾಭರಣ ನಿರ್ದೇಶನದ 'ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ಪತ್ರಕರ್ತೆ ಮಾಲಿನಿ ಪಾತ್ರದಲ್ಲಿ ಮಿಂಚಿದ್ದರು, ಬಳಿಕ 'ಹಂಬಲ್ ಪೋಲಿಟಿಶಿಯನ್ ನೊಗರಾಜ್' ಎನ್ನುವ ಸಿನಿಮಾದಲ್ಲಿ ಡ್ಯಾನಿಶ್ ಸೇಟ್ ಜೊತೆ ನಟಿಸಿದ್ದರು.