Seetha Rama Serial Climax Episode: ಐದು ದಿನದಲ್ಲಿ ಅಂತ್ಯ; ಒಂದೊಂದು ದಿನ ಒಂದು ವಿಷ್ಯ ಬಯಲು!

Published : May 25, 2025, 04:00 PM IST

ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ, ಅಶೋಕ್‌, ಮುಖ್ಯಮಂತ್ರಿ ಚಂದ್ರು, ಪದ್ಮಕಲಾ ಡಿ ಎಸ್‌, ಪ್ರಿಯಾ ಶಂಕರಪ್ಪ ನಟನೆಯ ʼಸೀತಾರಾಮʼ ಧಾರಾವಾಹಿ ಆದಷ್ಟು ಬೇಗ ಅಂತ್ಯ ಆಗಲಿದೆ. ಹಾಗಾದರೆ ಕೊನೆಯ ಸಂಚಿಕೆಗಳಲ್ಲಿ ಏನೆಲ್ಲ ಇರಲಿದೆ? 

PREV
16
ಯಾವಾಗ ಕೊನೆ ಸಂಚಿಕೆಗಳು ಪ್ರಸಾರ ಆಗಲಿವೆ?

‘ಸೀತಾರಾಮʼ ಧಾರಾವಾಹಿ ಕೊನೆಯ ಸಂಚಿಕೆಗಳು ಪ್ರಸಾರ ಆಗಲಿವೆ. ವೀಕ್ಷಕರ ಮನಸ್ಸು ಗೆದ್ದ ಈ ಧಾರಾವಾಹಿಯು, “ಕನ್ನಡಿಗರ ಮನಗೆದ್ದ ಕಥೆಗೆ ಸವಿಯಾದ ವಿದಾಯ ಹೇಳುವ ಸಮಯ ಬಂತು. 5 ದಿನ, 5 ಸಂಚಿಕೆ, ವೆಬ್‌ಸೀರೀಸ್ ಥರ ದಿನಕ್ಕೊಂದು ಕಥೆ ಪ್ರಸಾರ ಆಗಲಿದೆ. ಸೀತಾರಾಮ 'ವಿದಾಯದ ವಾರ' ಆಗಲಿದೆ. ಸೋಮ-ಶುಕ್ರ ಸಂಜೆ 5:30ಕ್ಕೆ ಸೀತಾರಾಮ ಧಾರಾವಾಹಿಯ ಕೊನೆಯ ಸಂಚಿಕೆಗಳನ್ನು ನೋಡಬಹುದು.

26
ಸೋಮವಾರ

ಸೀತಮ್ಮನ ಮುಂದೆ ಅವಳಿ ಗುಟ್ಟು ಬಯಲಾಗಲಿದೆ. ಸಿಹಿ, ಸುಬ್ಬಿ ಇಬ್ಬರೂ ಅವಳಿ ಮಕ್ಕಳು. ಸೀತಾ ಆಸ್ಪತ್ರೆಯಲ್ಲಿ ಮಕ್ಕಳಿಗೆ ಜನ್ಮ ನೀಡಿದಾಗ ಒಂದು ಮಗು ಅಂದರೆ ಸುಬ್ಬಿಯನ್ನು ತಾತನೊಬ್ಬ ಕಳವು ಮಾಡಿಕೊಂಡು ಹೋಗಿದ್ದನು. ಆದರೆ ಆಗ ಸೀತಾಗೆ ಮಾತ್ರ ಒಂದು ಮಗಳು ತೀರಿಕೊಂಡಿದ್ದಾಳೆ ಅಂತ ಹೇಳಲಾಗಿತ್ತು. ಭಾರ್ಗವಿಯ ಮುಖವಾಡವನ್ನು ಕಳಚಲು ವಿಶ್ವ-ಅಶೋಕ್ ಇಬ್ಬರೂ ಅಖಾಡಕ್ಕೆ ಇಳಿಯುತ್ತಾರೆ.

36
ಮಂಗಳವಾರ

ಸೀತೆಯ ಕೈಯಲ್ಲಿ ಒಂದು ಬಲವಾದ ಸಾಕ್ಷಿ ಸಿಗಲಿದೆ. ಶ್ರೀರಾಮ್‌ ದೇಸಾಯಿ ತಂದೆ-ತಾಯಿ ಇಬ್ಬರೂ ಸತ್ತಿದ್ದು ಹೇಗೆ? ಸಿಹಿ ಹೇಗೆ ಸತ್ತಳು? ವಿಶ್ವ ಚಿಕ್ಕಪ್ಪನಿಗೆ ಯಾಕೆ ಕುಡುಕನ ಪಟ್ಟ ಎಂಬುದಕ್ಕೆ ಉತ್ತರ ಕೊಡುವ ಒಂದು ಬಲವಾದ ಸಾಕ್ಷಿ ಸೀತಾಗೆ ಸಿಗಲಿದೆ.

46
ಬುಧವಾರ

ಶ್ರೀರಾಮ್‌ ದೇಸಾಯಿ ಅಮ್ಮ-ಅಮ್ಮನನ್ನು ಕೊಂದ ಭಾರ್ಗವಿ ಕೊನೆಗೆ ಸಿಹಿಯನ್ನೂ ಕೂಡ ಕೊಂದಳು. ದೇಸಾಯಿ ಮನೆಯಲ್ಲಿ ಏನೇನು ಸಮಸ್ಯೆಗಳು ಆಗಿವೆಯೋ ಅದಕ್ಕೆಲ್ಲ ಭಾರ್ಗವಿಯೇ ಕಾರಣ. ಈ ಸತ್ಯವು ಸೀತಾಗೆ ಗೊತ್ತಾಗುವುದು. ಆಗ ಅವಳು ಸೀತಾಳನ್ನು ಕಿಡ್ನ್ಯಾಪ್‌ ಮಾಡುತ್ತಾರೆ. ಈ ಮೂಲಕ ಭಾರ್ಗವಿ ಆಟಕ್ಕೆ ಬ್ರೇಕ್ ಬೀಳುವ ಸಮಯ ಬರುವುದು.

56
ಗುರುವಾರ

ಇಷ್ಟುದಿನ ಮುಚ್ಚಿಟ್ಟ ಭಾರ್ಗವಿಯ ದುಷ್ಟತನ, ಅವಳಿಂದ ನಡೆದ ಮೋಸ, ಅಕ್ರಮ, ಕೊಲೆ ಎಲ್ಲವೂ ಬಟಾ ಬಯಲಾಗುವುದು. ಈ ಸತ್ಯ ತಿಳಿದ ಬಳಿಕ ಮನೆಯವರು ಹೇಗೆ ರಿಯಾಕ್ಟ್‌ ಮಾಡ್ತಾರೆ ಎಂದು ಕಾದು ನೋಡಬೇಕಿದೆ.

66
ಶುಕ್ರವಾರ

ಅಂತಿಮ ಅಧ್ಯಾಯದಲ್ಲಿ ಇಷ್ಟು ಮೋಸ ಮಾಡಿದ ಭಾರ್ಗವಿಗೆ ಏನಾಗಲಿದೆ? ಅವಳಿಂದ ಸೀತಾಗೆ ಅಪಾಯ ಇದೆಯಾ? ಹಾಗಾದರೆ ಕೊನೆಯಯಲ್ಲಿ ಈ ಧಾರಾವಾಹಿ ಕಥೆ ಏನಾಗುವುದು ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories