ಸೀತಾರಾಮ ಧಾರಾವಾಹಿ ಕಲಾವಿದರ ವಿದ್ಯಾರ್ಹತೆ ಮತ್ತು ನೈಜ ವಯಸ್ಸೆಷ್ಟು ಗೊತ್ತಾ? ರಾಮ್‌ಗಿಂತ ಸೀತಾ ದೊಡ್ಡವರು!

Published : Mar 29, 2024, 09:28 PM IST

ಕನ್ನಡದ ಅತಿ ಹೆಚ್ಚಿ ಟಿಆರ್‌ಪಿ ಹೊಂದಿದ ಧಾರಾವಾಹಿಗಳಲ್ಲಿ ಒಂದಾಗಿರುವ ಸೀತಾರಾಮ ಧಾರಾವಾಹಿಯ ಪಾತ್ರಧಾರಿಗಳ ಶಿಕ್ಷಣ ಮತ್ತು ನೈಜ ವಯಸ್ಸು ಎಷ್ಟಿದೆ ಗೊತ್ತಾ? ಇಲ್ಲಿ ರಾಮನಿಗಿಂತ ಸೀತಾಳೇ ದೊಡ್ಡವರಾಗಿದ್ದಾರೆ.

PREV
18
ಸೀತಾರಾಮ ಧಾರಾವಾಹಿ ಕಲಾವಿದರ ವಿದ್ಯಾರ್ಹತೆ ಮತ್ತು ನೈಜ ವಯಸ್ಸೆಷ್ಟು ಗೊತ್ತಾ? ರಾಮ್‌ಗಿಂತ ಸೀತಾ ದೊಡ್ಡವರು!

ಸೀತಾರಾಮ ಧಾರಾವಾಹಿ ಕನ್ನಡಿಗರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದೆ. ಆದರೆ, ಪಾತ್ರಧಾರಿಗಳ ನೈಜ ಹೆಸರು ಕೂಡ ನಿಮಗೆ ಗೊತ್ತಿರುತ್ತದೆ. ಆದರೆ, ಅವರ ವಯಸ್ಸು ಮತ್ತು ಶಿಕ್ಷಣದ ಮಾಹಿತಿ ಕೇಳಿದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ.
 

28
Vaishnavi gowda

ಸೀತಾರಾಮ ಧಾರವಾಹಿಯ ಪ್ರಮುಖ ಆಕರ್ಷಣೆ ಅದರ ನಾಯಕಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ. ಇವರಿಗೆ 32 ವರ್ಷವಾಗಿದ್ದು, ರಾಮ ಪಾತ್ರಧಾರಿ ಗಗನ್ ಚಿನ್ನಪ್ಪ ಅವರಿಗಿಂತ 2 ವರ್ಷ ದೊಡ್ಡವರಾಗಿದ್ದಾರೆ. ಇವರು ಬಿಎ ಪದವಿ ಪಡೆದಿದ್ದಾರೆ.

38

ಧಾರಾವಾಹಿಯ ನಾಯಕ ನಟ ರಾಮ್‌ ಪಾತ್ರಧಾರಿ ಗಗನ್ ಚಿನ್ನಪ್ಪ ಅವರಿಗೆ 30 ವರ್ಷ ವಯಸ್ಸಾಗಿದೆ. ಇನ್ನು ನಾಯಕಿ ಸೀತಾಳಿಗಿಂದ 2 ವರ್ಷ ಚಿಕ್ಕವರಾಗಿದ್ದು, ಬಿಕಾಂ ಪದವಿ ಪೂರ್ಣಗೊಳಿಸಿದ್ದಾರೆ. 
 

48

ನಟ ಮತ್ತು ರಾಜಕಾರಣಿ ಮುಖ್ಯಮಂತ್ರಿ ಚಂದ್ರು (Mukhyamantri Chandru) ಅವರು ಸೀತಾರಾಮ ಧಾರಾವಾಹಿಯಲ್ಲಿ ಸೂರ್ಯಪ್ರಕಾಶ್ ದೇಸಾಯಿ ಪಾತ್ರ ನಿರ್ವಹಿಸಿದ್ದು, ಇವರಿಗೆ 70 ವರ್ಷ ವಯಸ್ಸಾಗಿದೆ. ಇವರು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

58

ಧಾರಾವಾಹಿಯಲ್ಲಿ ನಾಯಕ ರಾಮ್‌ನ ಸ್ನೇಹಿತ ಅಶೋಕ್ ಅವರ ನೈಜ ಹೆಸರು ಅಶೋಕ್ ಶರ್ಮಾ. ಅವರಿಗೆ 41 ವರ್ಷವಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಅವರ ಸ್ನೇಹಿತರಾಗಿದ್ದಾರೆ. ಇನ್ನು ಇವರು ಪದವಿ ಪೂರ್ಣಗೊಳಿಸಿದ್ದಾರೆ.

68

ಇನ್ನು ಧಾರಾವಾಹಿಯ ಮತ್ತೊಬ್ಬ ಆಕರ್ಷಕ ಪಾತ್ರವಾದ ಸೀತಾಳ ಮಗಳು ಸಿಹಿ ಪಾತ್ರಧಾರಿ ರಿತು ಸಿಂಗ್‌ಗೆ ಕೇವಲ 6 ವರ್ಷ. ಈಗ 1ನೇ ತರಗತಿಯಲ್ಲಿ ಓದುತ್ತಿದ್ದಾಳೆ.
 

78
Zee Kannada Seetha Ram Priya Meghana Shankarappa

ರಾಮನ ಆಪ್ತ ಸ್ನೇಹಿತ ಅಶೋಕನ ಪ್ರೇಯಸಿ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ (Meghana Shankarappa) ಅವರಿಗೆ 30 ವರ್ಷವಾಗಿದೆ. ಇವರು ಪದವಿ ಪೂರ್ಣಗೊಳಿಸಿದ್ದು, ಕಿರುತೆರೆಯ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

88

ಸೀತಾರಾಮ ಧಾರಾವಾಹಿಯ ಖಳನಾಯಕಿ ಆಗಿರುವ ಪೂಜಾ ಲೋಕೇಶ್ ಅವರಿಗೆ 45 ವರ್ಷವಾಗಿದೆ. ಇವರು ಕೂಡ ಪದವೀಧರೆ ಆಗಿದ್ದಾರೆ. ಇವರು ಕಲಾವಿದರ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. 
 

Read more Photos on
click me!

Recommended Stories