ಬಿಗ್ ಬಾಸ್ ಮೂಲಕ ಮಣ್ಣಿನ ಮಗ ಎಂದು ಖ್ಯಾತಿ ಪಡೆದ ಮೈಕಲ್ ಅಜಯ್‌ಗೆ 29ನೇ ಹುಟ್ಟುಹಬ್ಬದ ಸಂಭ್ರಮ!

First Published | Mar 29, 2024, 1:34 PM IST

ಬಿಗ್ ಬಾಸ್ ಸೀಸನ್ 10ರ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಮೈಕಲ್ ಅಜಯ್ ತಮ್ಮ 29ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

ಭಾರಿ ಕುತೂಹಲ ಕೆರಳಿಸಿದ ಈ ಬಾರಿಯ ಬಿಗ್ ಬಾಸ್ ಸೀಸನ್ 10 ರ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿ, ಮಣ್ಣಿನ ಮಗ ಎಂದೇ ಹೆಸರು ಪಡೆದಿರುವ ಸ್ಪರ್ಧಿ ಮೈಕಲ್ ಅಜಯ್ (Michael Ajay). 
 

ಅಂತಾರಾಷ್ಟ್ರೀಯ ಮಟ್ಟದ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಮೈಕಲ್, ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ರೋಡೀಸ್ (Roadies) ನಲ್ಲೂ ಭಾಗವಹಿಸಿ ರನ್ನರ್ ಅಪ್ ಆಗಿ ಮಿಂಚಿದ್ದರು. ಆದರೆ ಕನ್ನಡಿಗರಿಗೆ ಪರಿಚಿತರಾದದ್ದು ಬಿಗ್ ಬಾಸ್ ಮೂಲಕ. 
 

Tap to resize

ಇದೀಗ ಮೈಕಲ್ ಅವರು ತಮ್ಮ 29 ನೇ ವರ್ಷದ ಹುಟ್ಟುಹಬ್ಬವನ್ನು(birthday) ಆಚರಿಸಿಕೊಂಡಿದ್ದು, ಹುಟ್ಟುಹಬ್ಬದ ಸಂಭ್ರಮಾಚರಣೆಯ ಫೋಟೊ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ತನ್ನ 29 ವರ್ಷವನ್ನು ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆ ಆಚರಿಸಿದ್ದೇನೆ. ಪ್ರೀತಿ ತೋರಿಸಿದ ಎಲ್ಲರಿಗೂ ಮತ್ತು ನನ್ನ ಇನ್ ಸ್ಟಾ ಫ್ಯಾಮಿಲಿಗೂ ತುಂಬಾನೆ ಧನ್ಯವಾದಗಳು. ಮತ್ತೊಂದು ಗ್ರೇಟ್ ವರ್ಷಕ್ಕೆ ನಾನು ರೆಡಿಯಾಗಿದ್ದೇನೆ ಎಂದು ಮೈಕಲ್ ಬರೆದುಕೊಂಡಿದ್ದರು.

ಬಿಗ್ ಬಾಸ್ ಕಾರ್ಯಕ್ರಮದ ಆರಂಭದಲ್ಲಿ ತನ್ನ ನೇರ ಮಾತು ಮತ್ತು ಮೌನದಿಂದಲೇ ಕನ್ನಡಿಗರ ಮನಗೆದ್ದಿದ್ದ ಮೈಕಲ್, ಬಳಿಕ ತಮ್ಮ ಮಾತು, ಆಟದಿಂದಲೇ ಭಾರಿ ಸದ್ದು ಮಾಡಿದರು. ಉಳಿದ ಸದಸ್ಯರಿಗಿಂತ ಹೆಚ್ಚಾಗಿ ಕನ್ನಡ ಮಾತನಾಡುವ ಮೂಲಕ ಕನ್ನಡಿಗರಿಂದ ಮಣ್ಣಿನ ಮಗ ಎಂದು ಸಹ ಕರೆಸಿಕೊಂಡರು. 
 

ಮೈಕಲ್ ಮಾಡೆಲ್ ಮಾತ್ರ ಅಲ್ಲ, 6 ಅಡಿ ಎತ್ತರದ ರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರನಾಗಿರುವ (basket ball player)ಮೈಕಲ್ ಇನ್ವೆಸ್ಟ್ ಮೆಂಟ್ ಬ್ಯಾಕಿಂಗ್ ಕ್ಷೇತ್ರದ ಅನಾಲಿಸ್ಟ್ ಕೂಡ ಹೌದು. ಜೊತೆಗೆ ಫಿಟ್‌ನೆಟ್‌ ತರಬೇತುದಾರನೂ ಆಗಿದ್ದಾರೆ. 
 

ಮೈಕಲ್ ಅಜಯ್ 1995, ಮಾರ್ಚ್ 29 ರಲ್ಲಿ ನೈಜೀರಿಯಾದ ಲಾಗೋಸ್ ನಲ್ಲಿ ಜನಿಸಿದ್ದು, ಇವರ ತಂದೆ ನೈಜೀರಿಯನ್ ಮತ್ತು ತಾಯಿ ಬೆಂಗಳೂರಿನವರಾಗಿದ್ದಾರೆ. ಇವರ ಅಜ್ಜ ಕೊಡಗು ಮೂಲದವರಂತೆ. ಹಾಗಾಗಿಯೇ ಮೈಕಲ್ ಗೆ ಕನ್ನಡದ ಮೇಲೆ ಒಲವು ಹೆಚ್ಚು. 
 

ಹಲವಾರು ಬ್ರ್ಯಾಂಡ್ ಗಳಿಗೆ ಮಾಡೆಲ್ ಆಗಿರುವ ಮೈಕಲ್ ಬೆಂಗಳೂರಲ್ಲಿ ತಮ್ಮದೇ ಆದ ಫುಡ್ ಟ್ರಕ್ ಕೂಡ ಹೊಂದಿದ್ದಾರೆ. ಬೆಂಗಳೂರಿನ ಎಚ್ ಎಸ್ ಆರ್ ಲೇ ಔಟ್ ನಲ್ಲಿರುವ ದ ಬರ್ಗರ್ ಟ್ರಕ್(burger truck) ಎನ್ನುವ ಶಾಪ್ ತೆರೆದಿದ್ದು, ಇಲ್ಲಿ ವೆಜ್ -ನಾನ್ ವೆಜ್ ಎರಡೂ ಬೆಸ್ಟ್ ಬರ್ಗರ್ ಸಿಗುತ್ತೆ ಎಂದು ಜನ ಹೇಳ್ತಾರೆ. 
 

Latest Videos

click me!