ಮದ್ವೆ ಆಗಮ್ಮಾ: ಅನುಪಮಾ ಗೌಡ ಸ್ಯಾರಿ ಫೋಟೋಶೂಟ್‌ಗೆ ಬಂತು ವೈರಲ್ ಕಾಮೆಂಟ್!

Published : Mar 29, 2024, 10:38 AM ISTUpdated : Mar 29, 2024, 11:28 AM IST

ಕಿರುತೆರೆಯಲ್ಲಿ ಕಮಾಲ್ ಮಾಡಿ ಹಿರಿತೆರೆಯತ್ತ ಮುಖ ಮಾಡಿದ ನಟಿ ಅನುಪಮಾ ಗೌಡ. ಕನ್ನಡದಲ್ಲಿ ನಿರರ್ಘಳವಾಗಿ ಮಾತಾನಡುವ ನಟಿ ನಿರೂಪಣೆಯಲ್ಲಿ ಕೂಡ ಸೈ ಎನಿಸಿಕೊಂಡು ಇದ್ದಾರೆ. ಇನ್ನೂ ಅನುಪಮಾ ಗೌಡ ಒಂದಲ್ಲ ಒಂದು ಸುದ್ದಿಯಲ್ಲಿ ಸದಾ ಇರುತ್ತಾರೆ. 

PREV
17
ಮದ್ವೆ ಆಗಮ್ಮಾ: ಅನುಪಮಾ ಗೌಡ ಸ್ಯಾರಿ ಫೋಟೋಶೂಟ್‌ಗೆ ಬಂತು ವೈರಲ್ ಕಾಮೆಂಟ್!

ಅಕ್ಕ ಧಾರಾವಾಹಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅನುಪಮಾ. ಅನುಪಮಾ ಇತ್ತೀಚಿಗಷ್ಟೇ ಯೆಲ್ಲೋ ಉಡುಗೆಯಲ್ಲಿ ಬಹಳ ಅದ್ಭುತವಾಗಿ ಕಾಣಿಸುತ್ತಿದ್ದರು. ಇದೀಗ ಕಂದು ಬಣ್ಣದ ಸೀರೆಯಲ್ಲಿ ನೋಡುಗರ ಮನ ಸೆಳೆದಿದ್ದಾರೆ. ಅಷ್ಟು ಅದ್ಭುತವಾಗಿ ನಟಿ ಕಾಣಿಸುತ್ತಿದ್ದಾರೆ.

27

ಕಂದು ಬಣ್ಣದ ಸೀರೆ, ಅದಕ್ಕೆ ಮ್ಯಾಚ್ ಆಗುವ ಹಾಗೆ ಕಿವಿಯೊಲೆ, ಹಾಗೂ ಹಸಿರು ಬಣ್ಣದ ಬಳೆಗಳನ್ನು ಧರಿಸಿ ಮಿರ ಮಿರ ಮಿಂಚುತ್ತಿರುವ ಅನುಪಮಾ ಅಂದ ನೋಡುವುದೆ ಕಣ್ಣಿಗೆ ಒಂದು ರೀತಿಯ ಹಬ್ಬ. ಜೊತೆಗೆ ಅವರು ಧರಿಸಿರುವ ನೆಕ್ಲೇಸ್ ಸಹ ಹೈಲೈಟ್ ಆಗಿದೆ.

37

ಇದೀಗ ಅನುಪಮಾ ಗೌಡ ಸೀರೆ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಾಗೆಯೇ ನೆಟ್ಟಿಗರು, ಪ್ರೀತಿ ನಗೆಯ ಚಿಲುಮೆ. ನೀನೆಂದರೆ ಜೀವದೊಲುಮೆ, ಬ್ಯೂಟಿಫುಲ್, ಗುಳಿಕೆನ್ನೆಯ ಚೆಲುವೆ, ವಯಸ್ಸಾಯ್ತು.. ದಯವಿಟ್ಟು ಮದ್ವೆ ಆಗಮ್ಮಾ ಎಂದು ಕಾಮೆಂಟ್ ಮಾಡಿದ್ದಾರೆ.

47

ಇತ್ತೀಚಿನ ದಿನಗಳಲ್ಲಿ ಅನುಪಮಾ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತ ಇದ್ದು ನೋಡುಗರಿಗೆ ಬಹಳ ಖುಷಿ ಆಗುತ್ತಿದೆ. ಅನುಪಮಾ ಗೌಡ ಕಿರುತೆರೆಯಲ್ಲಿ ಬಹಳ ಅದ್ಭುತವಾಗಿ ನಟನೆ ಮಾಡಿ ಹಿರಿತೆರೆ ಮತ್ತು ನಿರೂಪಣೆಯಲ್ಲೂ ತೊಡಗಿಸಿಕೊಂಡಿದ್ದಾರೆ.

57

ರಿಯಾಲಿಟಿ ಶೋ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಅನುಪಮಾ ಗೌಡ, ಅಕ್ಕ ಸೀರಿಯಲ್ ಮೂಲಕ ಗಮನ ಸೆಳೆದಿದ್ದರು. ಇದಾದ ನಂತರ ಹಲವು ಸೀರಿಯಲ್ ಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದರು. 

67

ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಪಮಾ ನಾಯಕಿಯಾಗಿ ನಟಿಸಿದ್ದರು. ಆ ಕರಾಳ ರಾತ್ರಿ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. 

77

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಅನುಪಮಾ, ಹೆಚ್ಚಾಗಿ ಫೋಟೋ ಶೂಟ್ ಮಾಡುತ್ತಾ ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ಟ್ರಾವೆಲ್ ಪ್ರಿಯೆಯಾಗಿರುವ ಇವರು ಸೋಲೋ ಟ್ರಾವೆಲ್ ಮಾಡುತ್ತಿರುತ್ತಾರೆ. 

Read more Photos on
click me!

Recommended Stories