ತಪ್ಪದೆ ಈ ಎರಡನ್ನು ಫಾಲೋ ಮಾಡಿದರೆ ಸಣ್ಣ ಆಗೋದು ಗ್ಯಾರಂಟಿ ಅಂತಾರೆ 'ಸತ್ಯ' ಸೀರಿಯಲ್ ಕೀರ್ತನಾ!

Published : Jan 09, 2024, 05:02 PM IST

ದಿನವೂ ತಪ್ಪದೆ ಇದನ್ನು ಫಾಲೋ ಮಾಡಿದರೆ ನಿಮಗೆ ಬೇಕಾದ ರೀತಿಯಲ್ಲಿ ದೇಹವನ್ನು ಸಣ್ಣ ಮಾಡಿಕೊಳ್ಳಬಹುದು ಅಂತಾರೆ ವಿಲನ್ ಕೀರ್ತನಾ. 

PREV
17
ತಪ್ಪದೆ ಈ ಎರಡನ್ನು ಫಾಲೋ ಮಾಡಿದರೆ ಸಣ್ಣ ಆಗೋದು ಗ್ಯಾರಂಟಿ ಅಂತಾರೆ 'ಸತ್ಯ' ಸೀರಿಯಲ್ ಕೀರ್ತನಾ!

 ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯ ಸಖಡ್ ವಿಲನ್ ಕೀರ್ತನಾ ಉರ್ಫ್‌ ಅನು ಜನಾರ್ಧನ್ ಸೋಷಿಯಲ್ ಮೀಡಿಯಾ ಸ್ಟೈಲ್ ಐಕಾನ್ ಆಗಿದ್ದಾರೆ.

27

ಬಬ್ಲಿ ಹುಡುಗಿ ಆಗಿದ್ದ ಅನು ಇದ್ದಕ್ಕಿದ್ದಂತೆ ಸಣ್ಣಗಾಗಿದ್ದು ಹೇಗೆ ಎಂದು ಹಲವಾರು ಸಲ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅನು ಈಗ ಉತ್ತರ ಕೊಟ್ಟಿದ್ದಾರೆ.

37

ಸೋಷಿಯಲ್ ಮೀಡಿಯಾದಲ್ಲಿ ನಾನು ಬಾಡಿ ಟ್ರಾನ್ಸ್‌ಫಾರ್ಮೇಷನ್‌ ಬಗ್ಗೆ ಅಪ್ಲೋಡ್ ಮಾಡಿದ ಕ್ಷಣದಿಂದ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಅನು ಇ-ಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

47

ಪದೇ ಪದೇ ಟ್ರಾನ್ಸ್‌ಫಾರ್ಮೇಷನ್‌ ಬಗ್ಗೆ ಪೋಸ್ಟ್ ಹಾಕುವಂತೆ ಕೇಳುತ್ತಾರೆ. ಯಾವಾಗಿನಿಂದ ವರ್ಕೌಟ್ ಶುರು ಮಾಡಿದೆ ಮತ್ತು ಡಯಟ್‌ ಏನೆಂದು ಸದಾ ಪ್ರಶ್ನೆ ಮಾಡುತ್ತಾರೆ.

57

2017ರಿಂದ ನಾನು unwanted caloriesನ ದೂರ ಮಾಡಿದೆ. ನನ್ನ ಡ್ರೀಮ್ ದೇಹ ಮಾಡಲು ಒಂದುವರೆ ವರ್ಷ ತೆಗೆದುಕೊಂಡಿದೆ. ಮನಸ್ಸು ಮತ್ತು ದೇಹ ಗಟ್ಟಿ ಮಾಡಿದೆ'

67

 ನನ್ನ ಡ್ರೀಮ್ ಬಾಡಿ ಮಾಡಿಕೊಳ್ಳಲು ಡ್ಯಾನ್ಸ್‌ ಮತ್ತು ಡಯಟ್‌ ನನಗೆ ತುಂಬಾ ಸಹಾಯ ಮಾಡಿದೆ. ದಿನ ಕಳೆಯುತ್ತಿದ್ದಂತೆ ಫಿಟ್ ಆದೆ. 

77

ಈ ಪ್ರಪಂಚದಲ್ಲಿ ಯಾರು ಹೇಗೆ ಬೇಕಿದ್ದರೂ ಬದಲಾಗಬಹುದು ಯಾವ ರೀತಿ ಬೇಕಿದ್ದರೂ ಬದಲಾಗಬಹುದು. ಮೋಟಿವೇಷನ್‌ ಒಂದೇ ಎಲ್ಲರಿಗೂ ಅಗತ್ಯ ಇರುವುದು ಎಂದಿದ್ದಾರೆ ಅನು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories