ಬಿಳಿ ಸೀರೆಲೀ ಏಂಜಲ್‌ನಂತೆ ಮಿಂಚಿದ ಇಶಿತಾ : ಗಂಡನ ಫೋಟೋ ಯಾಕೆ ಹಾಕಲ್ಲ ಎಂದ ಫ್ಯಾನ್ಸ್

Published : Jan 09, 2024, 04:31 PM IST

ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ಮಾಯಾ ಆಗಿ ಮಿಂಚಿದ ಇಶಿತಾ ವರ್ಷ ತಮ್ಮ ಹೊಸ ಹೊಸ ಫೋಟೋ ಶೂಟ್ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.   

PREV
18
ಬಿಳಿ ಸೀರೆಲೀ ಏಂಜಲ್‌ನಂತೆ ಮಿಂಚಿದ ಇಶಿತಾ : ಗಂಡನ ಫೋಟೋ ಯಾಕೆ ಹಾಕಲ್ಲ ಎಂದ ಫ್ಯಾನ್ಸ್

ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಮಾಯಾ ಆಗಿ ಅದ್ಭುತ ಅಭಿನಯ ನೀಡಿ ಮನ ಗೆದ್ದಿದ್ದ ನಟಿ ಇಶಿತಾ ವರ್ಷ (Ishitha Varsha) ನಂತರ ಯಾವುದೇ ಸೀರಿಯಲ್ ನಲ್ಲೂ ನಟಿಸಲೇ ಇಲ್ಲ. 
 

28

ನಟನೆಯಿಂದ ದೂರ ಇದ್ದರೂ ಇಶಿತಾ ತಮ್ಮ ವಿಭಿನ್ನ ಫೋಟೊ ಶೂಟ್ ಮತ್ತು ವನ್ಯ ಜೀವಿ ಛಾಯಾಗ್ರಹಣದ (wild life photography) ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. 
 

38

ಹಿಂದೊಮ್ಮೆ ಸಖತ್ ಬೋಲ್ಡ್ ಫೋಟೋ ಶೂಟ್ (bold photo shoot) ಮಾಡಿ ಸುದ್ದಿಯಾಗಿದ್ದರು. ಇದೀಗ ಬಿಳಿ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 
 

48

ಕ್ರಿಸ್ಮಸ್ ಸಮಯದಲ್ಲಿ ಇಶಿತಾ ಈ ಫೋಟೋ ಶೂಟ್ ಮಾಡಿಸಿದ್ದು, ಇದೀಗ ಫೋಟೋ ಹಂಚಿಕೊಂಡಿದ್ದಾರೆ. ಟ್ರಾನ್ಸಪರೆಂಟ್ ಬಿಳಿ ಪ್ಲೈನ್ ಸೀರೆಯುಟ್ಟು, ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದಾರೆ. 
 

58

ಕೈಯಲ್ಲಿ ಕೆಂಗುಲಾಬಿ ಹೂವು ಹಿಡಿದು, ನೆತ್ತಿಯ ಮೇಲೆ ಗುಲಾಬಿ ಹೂವುಗಳ ಮಾಲೆಯನ್ನು ಮುಂದಾಲೆಯಂತೆ ಇಳಿ ಬಿಟ್ಟಿದ್ದಾರೆ. ದೊಡ್ಡದಾದ ಕಿವಿಯೋಲೆ ಧರಿಸಿದ್ದಾರೆ. ಇಶಿತಾಳ ಈ ಹೊಸ ಲುಕ್ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ತುಂಬಾ ಸುಂದರವಾಗಿ ಕಾಣಿಸುತ್ತೀರಿ ಎಂದು ಜನರು ಕಾಮೆಂಟ್ ಮಾಡಿದ್ದಾರೆ. 
 

68

ಮತ್ತೊಬ್ಬರು ಕಾಮೆಂಟ್ ಮಾಡಿ ಮುರುಗಾ ಸರ್ ನಿಮ್ಮ ಜೊತೆಗಿನ ಫೋಟೋ, ವಿಡಿಯೋ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ, ನೀವ್ಯಾಕೆ ಅವರ ಜೊತೆಗಿನ ಫೋಟೋ ಅಪ್ ಲೋಡ್ ಮಾಡೋದೆ ಇಲ್ಲ ಎಂದು ಹೇಳಿದ್ದಾರೆ.
 

78

ಅಗ್ನಿ ಸಾಕ್ಷಿ ಸೀರಿಯಲ್ ಬಳಿಕ ಇಶಿತಾ ನಟನೆಯಿಂದ ದೂರವೇ ಉಳಿದಿದ್ದರು. ಬಳಿಕ ರಾಜಾ ರಾಣಿ ರಿಯಾಲಿಟಿ ಶೋದಲ್ಲಿ ಗಂಡ ಮುರುಗನ ಜೊತೆ ಭಾಗವಹಿಸಿ ರನ್ನರ್ ಅಪ್ ಆಗಿದ್ದರು. 

88

ಇತ್ತೀಚೆಗೆ ವೈಲ್ಡ್ ಲೈಫ್ ನತ್ತ ಆಸಕ್ತಿ ಬೆಳೆಸಿಕೊಂಡಿರುವ ಇಶಿತಾ ವರ್ಷ ಹಲವಾರು ಬಾರಿ ಆಫ್ರಿಕಾದ ಮಾಸೈ ಮಾರಕ್ಕೆ ತೆರಳಿ, ವನ್ಯ ಜೀವಿಗಳ ಮದ್ಯ ಜೀವನ ಎಂಜಾಯ್ ಮಾಡುತ್ತಾ, ಫೋಟೋಗ್ರಾಫಿ ಮಾಡಿದ್ದಾರೆ. 
 

Read more Photos on
click me!

Recommended Stories