ಫೋರೆನನ್ಸಿಕ್, ನೈಟ್ ಡ್ಯೂಟಿ, ಗಸ್ತು, ಬಂದೋಬಸ್ತ್ ಹಾಗೂ ಮರ್ಡರ್ ಸ್ಪಾಟ್‌ಗಳಿಗೆ ಹೋಗಬೇಕು. ನೀವು ಯಾವುದಕ್ಕೂ ಹಿಂಜರಿಯದೇ ಮುನ್ನುಗ್ಗಿ ಕೆಲಸ ಮಾಡಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸತ್ಯ ನೀನು ಪೊಲೀಸ್ ಟ್ರೈನಿಂಗ್‌ನಲ್ಲಿ ಎಲ್ಲವನ್ನೂ ಥಿಯರಿ ಕೇಳಿರುತ್ತೀಯ. ಈಗ ಎಲ್ಲವನ್ನೂ ಪ್ರಾಯೋಗಿಕವಾಗಿ ಎಲ್ಲ ಕರ್ತವ್ಯ ನಿರ್ವಹಿಸಿ ಕಲಿಯಬೇಕು. ಪೊಲೀಸರು ಸತ್ಯ, ನ್ಯಾಯ ಕರ್ತವ್ಯದ ಪರವಾಗಿ ಹೋರಾಡಬೇಕು ಎಂದು ಸೂಚನೆ ನೀಡಿದ್ದಾರೆ.