ಟ್ರೆಡಿಷನಲ್ ಲುಕ್ಕಲ್ಲಿ ಸಂಜನಾ ಬುರ್ಲಿ…. ಅಮ್ಮಂಗೆ ಹೇಳಿ ದೃಷ್ಟಿ ತೆಗೆಸ್ಕೊಳಿ ಎಂದ ಫ್ಯಾನ್ಸ್

Published : Mar 23, 2024, 05:59 PM IST

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹ ಖ್ಯಾತಿಯ ಸಂಜನಾ ಬುರ್ಲಿ ಹಸಿರು ಸೀರೆಯುಟ್ಟು ಟ್ರೆಡಿಶನಲ್ ಲುಕ್ ನಲ್ಲಿ ಫೋಟೋ ತೆಗೆಸಿಕೊಂಡಿದ್ದು, ಅಭಿಮಾನಿಗಳು ಖುಷ್ ಆಗಿದ್ದಾರೆ.   

PREV
17
ಟ್ರೆಡಿಷನಲ್ ಲುಕ್ಕಲ್ಲಿ ಸಂಜನಾ ಬುರ್ಲಿ…. ಅಮ್ಮಂಗೆ ಹೇಳಿ ದೃಷ್ಟಿ ತೆಗೆಸ್ಕೊಳಿ ಎಂದ ಫ್ಯಾನ್ಸ್

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ನಟಿ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ, ತಮ್ಮ ಸೋಶಿಯಲ್ ಮೀಡಿಯಾದಿಂದಾಗಿ (social media) ಸದಾ ಸುದ್ದಿಯಲ್ಲಿರುತ್ತಾರೆ. 
 

27

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಂಜನಾ (Sanjana Burli), ಹೆಚ್ಚಾಗಿ ರಿಲ್ಸ್, ಡ್ಯಾನ್ಸ್, ಫೊಟೋಶೂಟ್ ಮಾಡಿಸಿಕೊಂಡು ವಿಡಿಯೋ, ಫೋಟೋಗಳನ್ನು ಶೇರ್ ಮಾಡುವ ಮೂಲಕ ಸದಾ ಜನರ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ. 
 

37

ಕೆಲದಿನಗಳ ಹಿಂದಷ್ಟೇ ನಟಿ ಕಾಶ್ಮೀರಕ್ಕೆ ತೆರಳಿ ಅಲ್ಲಿ ಮಂಜಿನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದರು. ಇದೀಗ ಸಂಜನಾ ಬುರ್ಲಿ ರೇಷ್ಮೆ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದು, ತುಂಬಾನೆ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. 
 

47

ತಿಳಿ ಹಸಿರು ಬಣ್ಣದ ಸಿಲ್ಕ್ ಸೀರೆಗೆ, ನೀಲಿ ಬಣ್ಣದ ಹೆವಿ ಹ್ಯಾಂಡ್ ವರ್ಕ್ ಇರುವ ಬ್ಲೌಸ್ ಧರಿಸಿರುವ ಸಂಜನಾ, ಅದಕ್ಕೊಪ್ಪುವ ಹಸಿರು ಬಣ್ಣದ ಸ್ಟೋನ್ ನೆಕ್ಲೇಸ್, ಈಯರಿಂಗ್ಸ್ ಧರಿಸಿದ್ದು, ಅಭಿಮಾನಿಗಳು ಅಮ್ಮಂಗೆ ಹೇಳಿ ಬೇಗನೆ ದೃಷ್ಟಿ ತೆಗೆಸಿ ಎಂದು ಕಾಮೆಂಟ್ ಮಾಡಿದ್ದಾರೆ. 
 

57

ಕಿರುತೆರೆ ವೀಕ್ಷಕರ ಪ್ರೀತಿಯ ಮಿಸ್ಸು ಆಗಿರುವ ಸಂಜನಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಈ ಹೊಸ ಫೋಟೋ ಶೂಟ್‌ಗೆ ಭಾರಿ ಕಾಮೆಂಟ್ಸ್ ಬಂದಿವೆ, ತುಂಬಾ ಸುಂದರವಾಗಿ ಕಾಣಿಸುತ್ತೀರಿ, ನಮ್ಮ ಕನ್ನಡದ ಅರುಂಧತಿ ನೀವು ಎಂದು ಜನ ಹೇಳಿದ್ದಾರೆ. 
 

67

ಅಷ್ಟೇ ಅಲ್ಲ ಮಿಸ್ಸು ನೀವು ದೇವಲೋಕದ ಅಪ್ಸರೆ ತರ ಕಾಣಿಸ್ತಿದ್ದೀರಿ, ನೀವ್ ಈ ಸೀರೆಯಲ್ಲಿ ತುಂಬಾ ಚನ್ನಾಗಿ ಕಾಣಿಸ್ತಿದೀರಾ.  ನಿಮ್ಮಿಂದ ಆ ಸೀರೆಯ ಅಂದವೇ ಹೆಚ್ಚಾಯಿತು ಎಂದರೆ, ಮತ್ತೊಬ್ಬರು ಬ್ಯೂಟಿಫುಲ್ ಕ್ವೀನ್ ಆಫ್ ವರ್ಲ್ಡ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

77

ಸೀರಿಯಲ್ (Puttakkana Makkalu serial) ಬಗ್ಗೆ ಹೇಳೋದಾದರೆ ಸ್ನೇಹಾ - ಕಂಠಿ ಬಾಳು ಈಗ ಸರಿಯಾಗಿದೆ, ಆದರೆ ಸ್ನೇಹಾ ಅಕ್ಕ ಸಹನಾ ಬಾಳು ಹಾಳಾಗುವ ಹಂತದಲ್ಲಿದೆ. ಅತ್ತೆಯ ಕಾಟ ತಾಳಲಾರದೆ ತವರು ಮನೆಗೆ ವಾಪಾಸ್ ಬಂದಿರುವ ಸಹನಾ ವಿರುದ್ಧ ಗಂಡ ಮುರಳಿ ಪಂಚಾಯತಿ ಮೆಟ್ಟಿಲೇರಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories