ನಟ ಮಾಸ್ಟರ್ ಆನಂದ್ ಅಭಿನಯಕ್ಕೆ ಮನಸೋತ ಜೀ ಕನ್ನಡ ವೀಕ್ಷಕರು; ನಿಮ್ಮ ನಟನೆ ಮಾಗಿದೆ ಎಂದರು ಫ್ಯಾನ್ಸ್!

Published : Mar 23, 2024, 05:24 PM ISTUpdated : Mar 24, 2024, 12:55 PM IST

ಬೆಂಗಳೂರು  (ಮಾ.23): ಕನ್ನಡ ಚಿತ್ರರಂಗದಲ್ಲಿ  1990ರ ದಶಕದಲ್ಲಿ ಅತ್ಯಂತ ಚುರುಕಾದ ಹಾಗೂ ಮುದ್ದಾದ ನಟನೆಯೊಂದಿಗೆ ಘಟಾನುಘಟಿ ನಾಯಕರ ಪ್ರೀತಿಯನ್ನು ಗಿಟ್ಟಿಸಿಕೊಂಡಿದ್ದ ಮಾಸ್ಟರ್ ಆನಂದ್ ಬಹುದಿನಗಳ ಬಳಿಕ ಮತ್ತೆ ಬಣ್ಣ ಹಚ್ಚಿಕೊಂಡಿದ್ದಾರೆ.  

PREV
19
ನಟ ಮಾಸ್ಟರ್ ಆನಂದ್ ಅಭಿನಯಕ್ಕೆ ಮನಸೋತ ಜೀ ಕನ್ನಡ ವೀಕ್ಷಕರು; ನಿಮ್ಮ ನಟನೆ ಮಾಗಿದೆ ಎಂದರು ಫ್ಯಾನ್ಸ್!

ಮಾಸ್ಟರ್ ಆನಂದ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಕನ್ನಡ ಚಿತ್ರರಂಗದಲ್ಲಿ ಅನಂತನಾಗ್,  ಶಂಕರ್‌ನಾಗ್, ಅಂಬರೀಶ್, ಶಶಿಕುಮಾರ್, ರವಿಚಂದ್ರನ್ ಸೇರಿ ಘಟಾನುಘಟಿ ನಾಯಕರೊಂದಿಗೆ ಬಾಲಕನಾಗಿದ್ದರೂ ಚುರುಕಾಗಿ ನಟಿಸಿ ಚಪ್ಪಾಳೆ ಗಿಟ್ಟಿಸಿದ್ದ ಮಾಸ್ಟರ್ ಆನಂದ್ ಈಗ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್‌ ರಿಯಾಲಿಟಿ ಶೋ ನಿರೂಪಕರಾಗಿದ್ದಾರೆ. 
 

29

ಡ್ರಾಮಾ ಜೂನಿಯರ್ಸ್‌ನ ನಾಲ್ಕು ಸೀಸನ್‌ ಪೂರ್ಣಗೊಂಡರೂ ಬಣ್ಣ ಹಚ್ಚದ ಆನಂದ್ ಇದೇ ಮೊದಲ ಬಾರಿಗೆ ಡ್ರಾಮಾ ಜೂನಿಯರ್ಸ್‌-5 ಸೀಸನ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಅವರು ಅಭಿನಯ ಮಾಡುವುದನ್ನು ನೋಡುವುದೇ ಒಂದು ದೊಡ್ಡ ಮನರಂಜನೆ ಆಗಿರುತ್ತದೆ.
 

39

ಅದರಲ್ಲಿಯೂ ಮಾಸ್ಟರ್ ಆನಂದ್‌ ಅವರು ನೊಣದ ಮೀಸೆಯನ್ನು ಇಟ್ಟುಕೊಂಡು ನಾವಿರೋದೇ ಹೀಗೆ ಎಂದು ವೇದಿಕೆ ಮೇಲೆ ಆಗಮಿಸಿ ಕಾಮಿಡಿ ಡೈಲಾಗ್‌ಗಳನ್ನು ಹೊಡೆದಿದ್ದಾರೆ.
 

49

ನಗೆಯ ಧಮಾಕ ತಂದ 3 ಈಡಿಯಟ್ಸ್‌ಗಳ ಕಚಗುಳಿ ಇಟ್ಟ ಆನಂದ್, ಸ್ವದೇಶ್, ವಿಷ್ಣು & ರಿಷಿತ್ ರಾಜ್ ಅವರೊಂದಿಗೆ ತಾವೂ ಕೂಡ ಮಗುವಿನಂತೆ ಡ್ರಾಮಾ ಮಾಡಿದ್ದಾರೆ.
 

59

ಡ್ರಾಮಾ ಜ್ಯೂನಿಯರ್ಸ್‌ ಸೀಸನ್‌-5ರ ಮಹಾಸಂಚಿಕೆಯಲ್ಲಿ ಮಾಸ್ಟರ್ ಆನಂದ್ ಕಾಣಿಸಿಕೊಂಡಿದ್ದಾರೆ. ಅದು ಕೂಡ ಸರ್ವೇ ಆಫೀಸರ್ ಆಗಿ ಕಾಣಿಸಿಕೊಂಡು, ಜಾಣಪೆದ್ದನಂತೆ ನಟಿಸಿದ್ದಾರೆ.
 

69

ಡ್ರಾಮಾ ಜ್ಯೂನಿಯರ್ಸ್‌ನ ಜಡ್ಜಸ್‌ಗಳಾದ ನಟ ಕ್ರೇಜಿಸ್ಟಾರ್ ರವಿಂದ್ರನ್‌, ನಟಿಯರಾದ ನಟಿ ಲಕ್ಷ್ಮೀ, ರಚಿತಾ ರಾಮ್ ಅವರು ಕೂಡ ಮಾಸ್ಟರ್ ಆನಂದ್ ನಟನೆ ನೋಡಿ ಬಿದ್ದು, ಬಿದ್ದು ನಕ್ಕಿದ್ದಾರೆ.
 

79

ಮಾಸ್ಟರ್ ಆನಂದ್ ನಾಟಕ ಮಾಡುವಾಗ ಜ್ಯೂಸ್ ಕೊಟ್ಟಾಗ ಅದು ಮೈ ಮೇಲೆ ಚೆಲ್ಲಿದೆ. ಇದಕ್ಕೆ ಒಂದಿನಿತೂ ಬೇಸರ ಪಟ್ಟುಕೊಳ್ಳದೇ, ತನ್ನ ಡ್ರೆಸ್ ಹಾಳಾಯ್ತು ಎಂದು ಬೇಸರಿಸಿಕೊಳ್ಳದೇ ನಾಟಕವನ್ನು ಮುಂದುವರೆಸಿದ್ದಾರೆ.
 

89

ಕನ್ನಡ ಚಿತ್ರರಂಗದ ಮಾಸ್ಟರ್ ಆನಂದ್ ಈಗ ಕಿರುತೆರೆ ಬೇಡಿಕೆಯ ನಿರೂಪಕ. ಆನಂದ್ ಮಗ ಕೃಷ್ಣ ಚೈತನ್ಯಾ ಕಶ್ಯಪಾ ಒಂದು ಸಿನಿಮಾದಲ್ಲಿ ನಟಿಸಿದ್ದು ಈಗ ಗುರುಕುಲದಲ್ಲಿದ್ದಾರೆ.
 

99

ಮಗಳು ವಂಶಿಕಾ ಸ್ಕೂಲ್ ಮತ್ತು ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾಳೆ. ಮಗನನ್ನು ಗುರುಕುಲದಲ್ಲಿ ಬಿಟ್ಟು ಇರುವುದು ಎಷ್ಟು ಕಷ್ಟ? ಮಾಸ್ಟರ್ ಆನಂದ್ ಹೇಳಿಕೊಂಡು ಕಣ್ಣೀರಿಟ್ಟಿದ್ದರು.

Read more Photos on
click me!

Recommended Stories