ಜೀ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಭಾನುವಾರ ಮಹಾಸಂಚಿಕೆಯೊಂದಿಗೆ ಮುಕ್ತಾಯವಾಗಲಿದೆ. ಶಕುಂತಲಾ ಜೈಲು ಸೇರುವುದು ಖಚಿತವಾಗಿದ್ದು, ಜೈದೇವ್ ಪಾತ್ರದ ಅಂತ್ಯ ಕುತೂಹಲ ಮೂಡಿಸಿದೆ. ಇದರ ಜಾಗಕ್ಕೆ 'ಗೌರಿ ಪುತ್ರ' ಹೊಸ ಧಾರಾವಾಹಿ ಬರಲಿದೆ.
ಜೀ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಭಾನುವಾರ ಮುಕ್ತಾಯವಾಗಲಿದೆ. ಈಗಾಗಲೇ ಕಲಾವಿದರು, ತಂತ್ರಜ್ಞರು ಕೊನೆ ದಿನದ ಶೂಟಿಂಗ್‌ನ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಮೃತಧಾರೆ ಸೀರಿಯಲ್ ತನ್ನ ವೀಕ್ಷಕರಿಗೆ ಅಂತಿಮ ಸಂಚಿಕೆಯಲ್ಲಿ ಕೊನೆ ಗುಡ್‌ನ್ಯೂಸ್ ನೀಡುತ್ತಿದೆ.
25
ಮಹಾಸಂಚಿಕೆಯ ಸಂಭ್ರಮ
ಸೀರಿಯಲ್‌ಗಳು ಅರ್ಧ ಗಂಟೆ ಪ್ರಸಾರವಾಗುತ್ತದೆ. ಅದರಲ್ಲಿ 10 ನಿಮಿಷ ಜಾಹೀರಾತು ಬಂದ್ರೆ 20 ನಿಮಿಷ ಮಾತ್ರ ಸೀರಿಯಲ್ ಟೆಲಿಕಾಸ್ಟ್ ಆಗುತ್ತದೆ. ಆದ್ರೆ ಕೆಲವೊಂದು ವಿಶೇಷ ಸಂದರ್ಭ ಅಥವಾ ಕತೆಯ ರೋಚಕಘಟ್ಟದಲ್ಲಿದ್ದಾಗ 'ಮಹಾಸಂಚಿಕೆ' ಹಾಗೂ ಬ್ರೇಕ್‌ಲೆಸ್ ಎಪಿಸೋಡ್ ಪ್ರಸರಾಗೊಳ್ಳುತ್ತವೆ. ಮಹಾಸಂಚಿಕೆ ಅಂದ್ರೆ ವೀಕ್ಷಕರಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತದೆ.
35
ಅಮೃತಧಾರೆ ಮಹಾಸಂಚಿಕೆ
ಹೌದು, ಭಾನುವಾರ ಸೀರಿಯಲ್ ಮುಕ್ತಾಯವಾಗುತ್ತಿದ್ದು, ಕೊನೆ ದಿನದಂದು ಮಹಾಸಂಚಿಕೆ ಪ್ರಸಾರವಾಗುತ್ತಿದೆ. ಹಾಗಾಗಿ ಅಮೃತಧಾರೆ ಸೀರಿಯಲ್ ತನ್ನ ವೀಕ್ಷಕರಿಗೆ ಮಹಾಸಂಚಿಕೆ ಮೂಲಕ ಗುಡ್‌ನ್ಯೂಸ್ ನೀಡಿದೆ. 'ಅಮೃತಧಾರೆ'ಯ ವಿದಾಯದ ಸಮಯ, ಅಂತಿಮ ಸಂಚಿಕೆಗಳ ಮಹಾಸಂಚಿಕೆಯು ಭಾನುವಾರದಂತೆ ಸಂಜೆ 6.30ರಿಂದ 7.30ರವರೆಗೆ ಪ್ರಸಾರವಾಗಲಿದೆ.
ಅಮೃತಧಾರೆ ವಿಲನ್‌ಗಳ ಪೈಕಿ ಶಕುಂತಲಾ ಜೈಲು ಸೇರೋದು ಪಕ್ಕಾ ಆಗಿದೆ. ಆದ್ರೆ ಜೈದೇವ್ ಪಾತ್ರ ಹೇಗೆ ಕೊನೆಯಾಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ. ಇಲ್ಲಿಯವರೆಗೂ ಈ ವಾಹಿನಿ ಜೈದೇವ್ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
55
ಗೌರಿ ಪುತ್ರ
ಅಮೃತಧಾರೆಯ ಜಾಗಕ್ಕೆ ಗೌರಿಪುತ್ರ ಬರುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್ ಈ ಸೀರಿಯಲ್‌ನ ಕೇಂದ್ರಬಿಂದು ಆಗಿದ್ದಾರೆ. ರಾಮಚಾರಿ ಖ್ಯಾತಿಯ ರಿತ್ವಿಕ್, ಡ್ರಾಮಾ ಜೂನಿಯರ್ಸ್ ಕಲಾವಿದೆ ಮಹತಿ ಭಟ್, ಹಿರಿಯ ಕಲಾವಿದರ ರಮೇಶ್ ಭಟ್, ರಾಜೇಂದ್ರ ಕಾರಂತ್ ಸೇರಿದಂತೆ ದೊಡ್ಡ ತಾರಾಗಣವನ್ನು ಗೌರಿಪುತ್ರ ಹೊಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.