ಹಳ್ಳಿ ಪವರ್ ಶೋನಲ್ಲಿ ಸ್ಪರ್ಧಿಗಳು ಬಳಸೋ ಮೊಬೈಲ್ ಹೇಗಿರುತ್ತೆ? ರಿವೀಲ್ ಆಯ್ತು ಸೀಕ್ರೆಟ್

Published : Aug 27, 2026, 08:23 AM IST

ಜೀ ಕನ್ನಡದ 'ಹಳ್ಳಿ ಪವರ್' ರಿಯಾಲಿಟಿ ಶೋ ಐಹೊಳೆಯಲ್ಲಿ ನಡೆಯುತ್ತಿದ್ದು, ಸಿಟಿ ಹುಡುಗಿಯರು ಹಳ್ಳಿ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಶೋನಲ್ಲಿ ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಯಮಗಳಿದ್ದು, ಈ ಲೇಖನದಲ್ಲಿ ವಿವರಿಸಲಾಗಿದೆ.

PREV
15
ಜೀ ಕನ್ನಡ ವಾಹಿನಿಯ ಹಳ್ಳಿ ಪವರ್ ರಿಯಾಲಿಟಿ ಶೋ

ಜೀ ಕನ್ನಡ ವಾಹಿನಿಯ ಹಳ್ಳಿ ಪವರ್ ರಿಯಾಲಿಟಿ ಶೋ ಆರಂಭವಾಗಿ ಅರ್ಧ ತಿಂಗಳು ಕಳೆದಿದೆ. ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಗ್ರಾಮ ಐಹೊಳೆಯಲ್ಲಿ ರಿಯಾಲಿಟಿ ಶೋ ನಡೆಯುತ್ತಿದ್ದು, ಮೊದಲ ದಿನದಿಂದಲೇ ಕಾರ್ಯಕ್ರಮ ಉತ್ತಮ ಮೈಲೇಜ್ ಪಡೆದುಕೊಂಡಿದೆ. ಬೆಂಗಳೂರಿನಿಂದ ಐಹೊಳೆಗೆ ಬಂದಿರುವ ಸಿಟಿ ಹುಡುಗಿಯರು, ಹಳ್ಳಿ ಜೀವನಕ್ಕೆ ಹಂತ ಹಂತವಾಗಿ ಅಡ್ಜಸ್ಟ್ ಆಗುತ್ತಿದ್ದಾರೆ. ಇಲ್ಲಿವರೆಗೆ ಮೂವರು ಶೋನಿಂದ ಹೊರ ಬಂದಿದ್ದಾರೆ.

25
ಗ್ರಾಮಸ್ಥರ ಮನೆಯಲ್ಲಿದ್ದ ಸ್ಪರ್ಧಿಗಳು

ಗ್ರಾಮಸ್ಥರ ಸಹಾಯ ಮತ್ತು ಅವರ ಸಮ್ಮುಖದಲ್ಲಿ ಸಿಟಿ ಹುಡುಗಿಯರು ತಮಗೆ ನೀಡಲಾಗುವ ಟಾಸ್ಕ್‌ಗಳನ್ನು ಮಾಡಬೇಕಾಗುತ್ತದೆ. ಶೋ ಆರಂಭದ ಎರಡು ದಿನ ಗ್ರಾಮಸ್ಥರ ಮನೆಯಲ್ಲಿಯೇ ಸ್ಪರ್ಧಿಗಳು ಆಶ್ರಯ ಪಡೆದುಕೊಂಡಿದ್ದರು. ಇದೀಗ ತಮಗಾಗಿ ನಿರ್ಮಿಸಲಾದ ಐಹೊಳೆಯ ವಾಡಿಗೆ ಸ್ಪರ್ಧಿಗಳು ಶಿಫ್ಟ್ ಆಗಿದ್ದು, ಹಿರಿಯ ನಟಿ ತಾರಾ ಅನುರಾಧಾ ಸಮ್ಮುಖದಲ್ಲಿ ಗೃಹಪ್ರವೇಶ ನೆರವೇರಿಸಲಾಗಿತ್ತು.

35
ನಿಯಮಗಳ ಕಡ್ಡಾಯ ಪಾಲನೆ

ಈ ರಿಯಾಲಿಟಿ ಶೋನಲ್ಲಿರುವ ಸ್ಪರ್ಧಿಗಳು ಅಲ್ಲಿಯ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ನಿಯಮಗಳ ಉಲ್ಲಂಘನೆಯಾದ್ರೆ ಶೋನಿಂದಲೇ ಹೊರಗೆ ಹೋಗಬೇಕಾಗುತ್ತದೆ. ಕಾರ್ಯಕ್ರಮ ವೀಕ್ಷಕರಿಗೆ ಸ್ಪರ್ಧಿಗಳು ಮೊಬೈಲ್ ಬಳಕೆ ಮಾಡ್ತಾರಾ ಎಂಬ ಪ್ರಶ್ನೆಗೆ ಸ್ಪರ್ಧಿಗಳೇ ಉತ್ತರ ನೀಡಿದ್ದಾರೆ. ತಮ್ಮ ಬಳಿಯಲ್ಲಿರುವ ಮೊಬೈಲ್ ಹೇಗಿರುತ್ತೆ ಎಂಬುದನ್ನು ಸಹ ವಿವರಿಸಿದ್ದಾರೆ.

45
ಮೊಬೈಲ್ ಉಂಟು ಆದ್ರೆ ಸಿಮ್ ಇರಲ್ಲ

ರೈಲು ಮೂಲಕ ಬಾದಾಮಿ ತಲುಪಿದ ಸ್ಪರ್ಧಿಗಳು, ಪ್ರಯಾಣಿಕರೊಂದಿಗೆ ವ್ಲಾಗ್ ಮಾಡುತ್ತಿದ್ದರು. ಈ ವೇಳೆ ಮಾತನಾಡಿದ ಸ್ಪರ್ಧಿಯೊಬ್ಬರು, ಶೋ ಆರಂಭವಾದ ಕೂಡಲೇ ಮೊಬೈಲ್ ಇರುತ್ತೆ, ಆದ್ರೆ ಅದರಲ್ಲಿ ಸಿಮ್ ಇರಲ್ಲ. ಆನಂತರ ಸಿಮ್ ತೆಗೆದುಕೊಳ್ಳುತ್ತಾರೆ. ನೆಟ್‌ವರ್ಕ್ ಇಲ್ಲದ ಮೊಬೈಲ್ ನಮ್ಮದಾಗಿರುತ್ತದೆ. ಒಂದು ರೀತಿ ಮೊಬೈಲ್ ಡಬ್ಬದಂತಿರುತ್ತೆ ಎಂದು ಹೇಳಿದ್ದಾರೆ.

55
ಖಡಕ್ ಎಚ್ಚರಿಕೆ ನೀಡಿದ್ದ ಅಕುಲ್ ಬಾಲಾಜಿ

ಮೊಬೈಲ್ ಇರೋದರಿಂದ ವ್ಲಾಗ್ ಮಾಡುತ್ತಿದ್ದೇವೆ. ಶೋ ಮುಗಿದ ಬಳಿಕವಷ್ಟೇ ನಮ್ಮ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಬಗ್ಗೆಯೂ ಸ್ಪರ್ಧಿಗಳು ಮಾತನಾಡಿದ್ದಾರೆ. ಈ ಹಿಂದೆ ಸ್ಪರ್ಧಿಯೊಬ್ಬರು ಗ್ರಾಮಸ್ಥರ ಮೊಬೈಲ್ ಪಡೆದುಕೊಂಡು ಪೋಷಕರೊಂದಿಗೆ ಮಾತನಾಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕೋಪಗೊಂಡ ನಿರೂಪಕ ಅಕುಲ್ ಬಾಲಾಜಿ ಕ್ಲಾಸ್ ತೆಗೆದುಕೊಂಡು ಎಲ್ಲರಿಗೂ ಖಡಕ್ ಎಚ್ಚರಿಕೆಯನ್ನು ನೀಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories