ಗರ್ಲ್‌ಫ್ರೆಂಡ್‌ ರಮ್ಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ Nagini 2 ನಟ ನಿನಾದ್!

First Published | Feb 9, 2022, 5:34 PM IST

 ಬಹುಕಾಲದ ಗೆಳತಿ ಜೊತೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಕಿರುತೆರೆ ನಟ ನಿನಾದ್ ಹರಿತ್ಸ.

ಬಾಲ ಕಲಾವಿದನಾಗಿ ಬಣ್ಣದ ಜರ್ನಿ ಆರಂಭಿಸಿದ ನಟ ನಿನಾದ್ ಹರಿತ್ಸ ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

ನಾಗಿಣಿ 2 ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ವೀಕ್ಷಕರ ಹೃದಯಕ್ಕೆ ನಿನಾದ್ ತುಂಬಾನೇ ಹತ್ತಿರವಾಗಿದ್ದಾರೆ. 

Tap to resize

ಇಂದು ತಮ್ಮ ಬಹುಕಾಲದ ಗೆಳತಿ ರಮ್ಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ನಿನಾದ್ ಬರೆದುಕೊಂಡಿದ್ದಾರೆ.

'ಎಲ್ಲರೊಟ್ಟಿಗೆ ಸಂತೋಷದ ವಿಚಾರವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇಂದು ಗುರು ಹಿರಿಯರ ಸಮ್ಮುಖದಲ್ಲಿ ಅವರ ಆಶೀರ್ವಾದ ಪಡೆದುಕೊಂಡು ರಮ್ಯಾ ಮತ್ತು ನಾನು ನಿಶ್ಚಿತಾರ್ಥ ಮಾಡಿಕೊಂಡಿದ್ದೀವಿ' ಎಂದು ನಿನಾದ್ ಬರೆದಿದ್ದಾರೆ.

'ನಮ್ಮ ಆಯ್ಕೆಯನ್ನು ನಮ್ಮ ಪೋಷಕರು ಒಪ್ಪಿರುವುದಕ್ಕೆ ನಮಗೆ ತುಂಬಾನೇ ಸಂತೋಷವಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲಿರಲಿ. ನಾನು ನಿಮ್ಮ ನಿನಾದ್ ಇವಳು ನನ್ನ ರಮ್ಯಾ' ಎಂದು ಹೇಳಿದ್ದಾರೆ.

ಆಫ್‌ ವೈಟ್‌ ಆಂಡ್ ಗ್ರೇ ಶೇರ್ವಾನಿಯಲ್ಲಿ ನಿನಾದ್ ಕಾಣಿಸಿಕೊಂಡರೆ, ಹಳದಿ ಮತ್ತು ಹಸಿರು ಬಣ್ಣಸ ರೇಶ್ಮೆ ಸೀರೆಯಲ್ಲಿ ರಮ್ಯಾ ಮಿಂಚಿದ್ದಾರೆ. ಎರಡೇ ಫೋಟೋ ಹಂಚಿಕೊಂಡಿರುವ ಕಾರಣ ಅಭಿಮಾನಿಗಳು ಜಾಸ್ತಿ ಪೋಟೋ ಅಪ್ಲೋಡ್ ಮಾಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Latest Videos

click me!