ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೋವಿಂದೇ ಗೌಡ - ದಿವ್ಯಶ್ರೀ!

Suvarna News   | Asianet News
Published : Feb 09, 2022, 01:51 PM IST

ಸ್ಪೆಷಲ್ ಫೋಟೋ ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ (Social Media) ಪ್ರೆಗ್ನೆನ್ಸಿ ವಿಚಾರ ಹಂಚಿಕೊಂಡ ಗೋವಿಂದೇ ಗೌಡ ಮತ್ತು ದಿವ್ಯಶ್ರೀ.   

PREV
17
ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೋವಿಂದೇ ಗೌಡ - ದಿವ್ಯಶ್ರೀ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಗೋವಿಂದೇ ಗೌಡ ಮತ್ತು ದಿವ್ಯಶ್ರೀ.

27

ಇಬ್ಬರೂ ಸ್ಪರ್ಧಿಗಳಾಗಿ ಜರ್ನಿ ಆರಂಭಿಸಿ, ಸ್ನೇಹಿತರಾಗಿ ಆನಂತರ ಪೋಷಕರ ಒಪ್ಪಿಗೆ ಪಡೆದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

37

ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 'ಬದುಕಿನ ಭರವಸೆಗೆ ಅರಸಿದೆ ಈ ಮನ, ಮನದಾಸೆಗೆ ಸ್ಪಂದನ ಕಂದನಾಗಮನ,,' ಎಂದು ಬರೆದುಕೊಂಡಿದ್ದಾರೆ.

47

ನೇರಳೆ ಬಣ್ಣದ ಸೀರೆಯಲ್ಲಿ ದಿವ್ಯಶ್ರೀ ಪಿಂಕ್ ಶರ್ಟ್‌ ವಿತ್ ಬ್ಲ್ಯಾಕ್ ಪ್ಯಾಂಟಲ್ಲಿ ಗೋವಿಂದೇ ಗೌಡ ಮಿಂಚುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಟೋಗಳು ವೈರಲ್ ಆಗುತ್ತಿದೆ. 

57

ಇವರು ಸರಳವಾಗಿ ಫೋಟೋಶೂಟ್ (Photoshoot) ಮಾಡಿಸಿದ್ದಾರೆ. ಆದರೆ ಇದರಲ್ಲೊಂದು ವಿಶೇಷತೆ ಇದೆ. ಇಬ್ಬjt ಅರಳಿ ಮರದ ಕೆಳಗೆ ಕುಳಿತುಕೊಂಡು ಪುನೀತ್ ರಾಜ್‌ಕುಮಾರ್ ಫೋಟೋ ಇರುವ ಮ್ಯಾಗಜಿನ್ ಓದುತ್ತಿದ್ದಾರೆ. ಇದು ನೆಟ್ಟಿಗರ ಗಮನ ಸೆಳೆದಿದೆ.

67

2019ರಲ್ಲಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇವರ ನಿಶ್ಚಿತಾರ್ಥ (Engagement) ನಡೆದಿತ್ತು. ಹಾಗೇ ಅದೇ ವರ್ಷ ಮಾರ್ಚ್‌ 14ರಂದು ಶೃಂಗೇರಿಯಲ್ಲಿ (Sringeri) ಸಪ್ತಪದಿ (Weddking Lock) ತಿಳಿದರು. 

77

ಕೆಜಿಎಫ್ ಚಾಪ್ಟರ್ 1 ಮತ್ತು ಭರಾಟೆ ಸಿನಿಮಾದಲ್ಲಿ ಗೋವಿಂದೇ ಗೌಡ ನಟಿಸಿದ್ದಾರೆ. ಪುಣ್ಯಾತ್‌ಗಿತ್ತೀಯರು ಸಿನಿಮಾದಲ್ಲಿ ದಿವ್ಯಶ್ರೀ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories